LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರುಚಿಕರವಾದ ಕ್ಯಾಬೇಜ್ ರೋಸ್ಟ್ ಮಾಡುವ ವಿಧಾನ




ಬೇಕಾಗುವ ಪದಾರ್ಥಗಳು...






  • ಎಲೆಕೋಸು (ಕ್ಯಾಬೇಜ್) – 1

  • ಎಣ್ಣೆ – 2 ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

  • ಕಾಳು ಮೆಣಸಿನ ಪುಡಿ – ಅರ್ಧ ಚಮಚ

  • ಬೆಳ್ಳುಳ್ಳಿ ಪುಡಿ – ಕಾಲು ಚಮಚ

  • ನಿಂಬೆ ರಸ – 2 ಚಮಚ

  • ಕೊತ್ತಂಬರಿ ಸೊಪ್ಪು – ಸ್ವಲ್ಪ







ಮಾಡುವ ವಿಧಾನ...






  • ಮೊದಲಿಗೆ ಓವನ್ ಅನ್ನು 425 ಡಿಗ್ರಿ ಎಫ್‌ಗೆ ಕಾಯಿಸಿಟ್ಟುಕೊಳ್ಳಿ. ಕ್ಯಾಬೇಜ್ ಚೆನ್ನಾಗಿ ಸ್ವಚ್ಛಗೊಳಿಸಿ, 8 ಭಾಗಗಳಾಗಿ ಕತ್ತರಿಸಿಕೊಳ್ಳಿ.

  • ಪ್ಯಾನ್ ತೆಗೆದುಕೊಂಡು, ಅದಕ್ಕೆ ಸ್ವಲ್ಪ ಎಣ್ಣೆಯನ್ನು ಗ್ರೀಸ್ ಮಾಡಿ. ಕ್ಯಾಬೇಜ್ ತುಂಡುಗಳನ್ನು ಪ್ಯಾನ್ ಮೇಲೆ ಜೋಡಿಸಿ, ಅದಕ್ಕೆ 2 ಟೀಸ್ಪೂನ್ ಎಣ್ಣೆಯನ್ನು ಹಚ್ಚಿ.

  • ನಂತರ ಉಪ್ಪು, ಕಾಳು ಪುಡಿ ಹಾಗೂ ಬೆಳ್ಳುಳ್ಳಿ ಪುಡಿಯನ್ನು ಅದರ ಮೇಲೆ ಹಾಕಿ.ಈಗ ಪ್ಯಾನ್ ಅನ್ನು ಓವನ್‌ನಲ್ಲಿ ಇಟ್ಟು 20 ನಿಮಿಷ ಕಾಯಿಸಿಕೊಳ್ಳಿ.

  • ಕ್ಯಾಬೇಜ್ ಮೃದು ಹಾಗೂ ಸ್ವಲ್ಪ ಕಂದು ಬಣ್ಣ ಬಂದ ಬಳಿಕ ಅದನ್ನು ಓವನ್‌ನಿಂದ ತೆಗೆಯಿರಿ.

  • ಈಗ ಅದರ ಮೇಲೆ ನಿಂಬೆ ರಸವನ್ನು ಚಿಮುಕಿಸಿ, ಹಾಗೂ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಕ್ಯಾಬೇಜ್ ರೋಸ್ಟ್ ಸವಿಯಲು ಸಿದ್ಧ.



Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST