LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರುಚಿಕರವಾದ ಬಟಾಣಿ ಕುರ್ಮ ಮಾಡುವ ವಿಧಾನ




ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

ಬೇಕಾಗುವ ಪದಾರ್ಥಗಳು






  • ಒಣಗಿದ ಬಟಾಣಿ- 2 ಬಟ್ಟಲು (8 ಗಂಟೆಗಳ ಕಾಲ ನೆನೆಸಿದ್ದು)

  • ಉಪ್ಪು- ರುಚಿಗೆ ತಕ್ಕಷ್ಟು

  • ತೆಂಗಿನ ಕಾಯಿ ತುರಿ- 1 ಬಟ್ಟಲು

  • ಗಸಗಸೆ- 1 ಚಮಚ (15 ನಿಮಿಷ ನೀರಿನಲ್ಲಿ ನೆನೆಸಿದ್ದು)

  • ಗೋಡಂಬಿ- ಸ್ವಲ್ಪ (15 ನಿಮಿಷ ನೀರಿನಲ್ಲಿ ನೆನೆಸಿದ್ದು)

  • ಎಣ್ಣೆ - ಸ್ವಲ್ಪ

  • ಚಕ್ಕೆ, ಲವಂಗ- ಸ್ವಲ್ಪ

  • ಕರಿಬೇವು- ಸ್ವಲ್ಪ

  • ಈರುಳ್ಳಿ- 2 ಸಣ್ಣಗೆ ಹೆಚ್ಚಿದ್ದು

  • ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ

  • ಹಸಿ ಮೆಣಸಿನ ಕಾಯಿ- 2

  • ಟೊಮೆಟೋ- 3 ಸಣ್ಣಗೆ ಹೆಚ್ಚಿದ್ದು

  • ಅರಿಶಿಣದ ಪುಡಿ- ಕಾಲು ಚಮಚ

  • ಜೀರಿಗೆ ಪುಡಿ- ಕಾಲು ಚಮಚ

  • ಅಚ್ಚ ಖಾರದ ಪುಡಿ- 1 ಚಮಚ

  • ದನಿಯಾ ಪುಡಿ- 1/3 ಚಮಚ

  • ತೆಂಗಿನಕಾಯಿ ಹಾಲು - 1 ಬಟ್ಟಲು

  • ಕೊತ್ತಂಬರಿ ಸೊಪ್ಪ- ಸಣ್ಣಗೆ ಹೆಚ್ಚಿದ್ದು

  • ನಿಂಬೆ ರಸ- ಸವಲ್ಪ

  • ತುಪ್ಪ- ಸ್ವಲ್ಪ

  • ಗರಂ ಮಸಾಲಾ ಪುಡಿ- ಅರ್ಧ ಚಮಚ

  • ಕಾಶ್ಮೀರಿ ಚಿಲ್ಲಿ ಪೌಡರ್- ಅರ್ಧ ಚಮಚ





  • ಮಾಡುವ ವಿಧಾನ...






    • ಮೊದಲಿಗೆ ನೆನೆಸಿಟ್ಟ ಬಟಾಣಿ, ನೀರು ಹಾಗೂ ಉಪ್ಪನ್ನು ಕುಕ್ಕರ್ ಹಾಕಿ ಬಟಾಣಿ ಮೆತ್ತಗಾಗುವರೆಗೆ ಕೂಗಿಸಿಕೊಂಡು ಪಕ್ಕಕ್ಕಿಡಿ.

    • ತೆಂಗಿನ ಕಾಯಿ ತುರಿ, ಗಸಗಸೆ, ಗೋಡಂಬಿ ಹಾಗೂ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದೇ ರೀತಿ ಮತ್ತೊಂದು ಬಟ್ಟಲು ತೆಂಗಿನ ಕಾಯಿ ತುರಿ ತೆಗೆದುಕೊಂಡು ಗಟ್ಟಿಯಾಗಿ ರುಬ್ಬಿ ತೆಂಗಿನ ಹಾಲು ತೆಗೆದಿಟ್ಟುಕೊಳ್ಳಿ.

    • ಒಲೆಯ ಮೇಲೆ ಬಾಣಲೆಯಿಟ್ಟು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಚಕ್ಕೆ, ಲವಂಗ, ಕರಿಬೇವು, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಂಪಗೆ ಹುರಿದುಕೊಳ್ಳಿ.

    • ಬಳಿಕ ಹಸಿ ಮೆಣಸಿನ ಕಾಯಿ, ಟೊಮೆಟೋ ಹಾಕಿ ಕೆಂಪಗೆ ಹುರಿದು, ಅರಿಶಿಣದ ಪುಡಿ, ಜೀರಿಗೆ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ ಹಾಕಿ 5 ನಿಮಿಷ ಮುಚ್ಚಳ ಮುಚ್ಚಿ ಬೇಯಲು ಬಿಡಿ. ನಂತರ ನಂತರ ಬೇಯಿಸಿಕೊಂಡ ಬಟಾಣೆಯನ್ನು ಇದಕ್ಕೆ ಸೇರಿಸಿ 5 ನಿಮಿಷ ಕುದಿಯಲು ಬಿಡಿ. ಬಳಿಕ ತೆಂಗಿನ ಕಾಯಿ ಹಾಲು, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ನಿಂಬೆ ರಸ ಸೇರಿಸಿ 10 ನಿಮಿಷ ಸಣ್ಣ ಉರಿಯಲಿ ಕುದಿಸಿ.

    • ಪ್ಯಾನ್ ವೊಂದಕ್ಕೆ ಸ್ವಲ್ಪ ತುಪ್ಪ ಹಾಕಿ ಬಿಸಿಯಾದ ಬಳಿಕ ಅದಕ್ಕೆ ಗರಂ ಮಸಾಲಾ ಪುಡಿ ಹಾಗೂ ಕಾಶ್ಮೀರಿ ಚಿಲ್ಲಿ ಪೌಡರ್ ಹಾಕಿ ಕೆಂಪಗೆ ಮಾಡಿಕೊಂಡು ಮಸಾಲೆಗೆ ಹಾಕಿ ಬೆರೆಸಿದರೆ ರುಚಿಕರವಾದ ಬಟಾಣಿ ಕುರ್ಮಾ ಚಪಾತಿಯೊಂದಿಗೆ ಸವಿಯಲು ಸಿದ್ಧ.






Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST