LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರುಚಿಕರವಾದ ಮೆಂತ್ಯೆ ಪಲಾವ್ ಮಾಡುವ ವಿಧಾನ

 

ಮಾಡುವ ವಿಧಾನ...ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು 20ರಿಂದ 30 ನಿಮಿಷ ನೆನೆಸಿಡಿ. ಈಗ ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ/ತುಪ್ಪಹಾಕಿ, ಇದು ಕಾದ ಬಳಿಕ ಚಕ್ಕೆ, ಲವಂಗ, ಸೋಂಪು, ಬಿರಿಯಾನಿ ಎಲೆ, ಜೀರಿಗೆ, ಚಕ್ರಮೊಗ್ಗು ಎಲ್ಲವನ್ನು ಒಟ್ಟಿಗೆ ಹಾಕಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಗೋಡಂಬಿ ಇದ್ದರೂ ಬಳಸಬಹುದು.

ಇದಾದ ಬಳಿಕ ಹಸಿ ಮೆಣಸಿನ ಕಾಯಿ ಹಾಕಿ. ಪುದೀನ ಸೊಪ್ಪು ಹಾಗೂ ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈರುಳ್ಳಿ ಫ್ರೈ ಆದ ಬಳಿಕ ಚೆನ್ನಾಗಿ ತೊಳೆದಿರುವ ಮೆಂತ್ಯೆ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದರ ಜೊತೆಗೆ ಹಸಿ ಬಟಾಣಿ ಹಾಕಿ. ಬಳಿಕ ಚೆನ್ನಾಗಿ ಮಿಕ್ಸ್ ಮಾಡಿ ಫ್ರೈ ಮಾಡಿಕೊಳ್ಳಿ.

1 ನಿಮಿಷದ ಬಳಿಕ ಅದಕ್ಕೆ ಅರಶಿನ ಪುಡಿ ಹಾಕಿ 3 ನಿಮಿಷ ಫ್ರೈ ಮಾಡಿ. ಚೆನ್ನಾಗಿ ಫ್ರೈ ಮಾಡಿದ ಬಳಿಕ ನೆನೆಸಿಟ್ಟಿರುವ ಅಕ್ಕಿಯನ್ನು ಅದಕ್ಕೆ ಹಾಕಿ ಮೊದಲು ಮಿಕ್ಸ್ ಮಾಡಿ 1 ನಿಮಿಷ ಮಿಶ್ರಣ ಮಾಡಿಕೊಳ್ಳಿ. ಬಳಿಕ ಯಾವ ಬಟ್ಟಲಿನಲ್ಲಿ ಅಕ್ಕಿ ತೆಗೆದುಕೊಂಡಿದ್ದೀರೋ ಅದೇ ಬಟ್ಟಲಿನಲ್ಲಿ ಎರಡರಷ್ಟು ನೀರನ್ನು ಹಾಕಿ ಅದಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಈ ರೀತಿ ಮಿಶ್ರಣ ಮಾಡಿದ ತಕ್ಷಣ ಕುಕ್ಕರ್‌ನ ಮುಚ್ಚಳ ಹಾಕಿ ಮೂರು ಸೀಟಿ ಹಾಕುವವರೆಗೆ ಬಿಡಿ. ಮೂರು ಸೀಟಿಯ ಬಳಿಕ ಉರಿ ಆಫ್‌ ಮಾಡಿ ಹಾಗೆಯೇ ಬಿಡಿ. ಇದೀಗ ರುಚಿಕರವಾದ ಮೆಂತ್ಯೆ ಪಲಾವ್ ಸವಿಯಲು ಸಿದ್ಧ.

 

ಬೇಕಾಗುವ ಪದಾರ್ಥಗಳು

 

ಹಸಿ ಮೆಣಸಿನಕಾಯಿ- 6

 

ಎಣ್ಣೆ/ತುಪ್ಪ- 3 ಚಮಚ

 

ಬಾಸುಮತಿ ಅಕ್ಕಿ / ಸಾಮಾನ್ಯ ಅಕ್ಕಿ- 1 ಬಟ್ಟಲು

 

ಚಕ್ಕೆ, ಲವಂಗ- ಸ್ವಲ್ಪ

 

ಸೋಂಪು- ಸ್ವಲ್ಪ

 

ಚಕ್ರಮೊಗ್ಗು- 1

 

ಜೀರಿಗೆ- ಸ್ವಲ್ಪ

 

ಬಿರಿಯಾನಿ ಎಲೆ- 4-5

 

ಶುಂಠಿ-ಬೆಳ್ಳುಳ್ಳಿ- ಸ್ವಲ್ಪ

 

ಗೋಡಂಬಿ- ಸ್ವಲ್ಪ

 

ಪುದಿನ ಸೊಪ್ಪು- ಸ್ವಲ್ಪ

 

ಈರುಳ್ಳಿ - 1 ದೊಡ್ಡದು

 

ಮೆಂತ್ಯೆ ಸೊಪ್ಪು- 1 ಕಟ್ಟು

 

ಹಸಿ ಬಟಾಣಿ- ಅರ್ಧ ಬಟ್ಟಸು

 

ಅರಶಿನ ಪುಡಿ- ಸ್ವಲ್ಪ

 

ಉಪ್ಪು- ರುಚಿಗೆ ತಕ್ಕಷ್ಟು

 

 

 

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಕ್ರೋ ಫೈನಾನ್ಸ್ ಕಿರುಕುಳ: ಶಿಕ್ಷೆಯ ಪ್ರಮಾಣ 10 ವರ್ಷಕ್ಕೆ ಹೆಚ್ಚಳ- ಜಿ.ಪರಮೇಶ್ವರ್ಜಾನುವಾರುಗಳ ಕಳವು, ಹತ್ಯೆ, ಮಾಡುವವರನ್ನು ಸಾರ್ವಜನಿಕವಾಗಿ ಗುಂಡಿಕ್ಕಬೇಕು- ಮಂಕಾಳ ವೈದ್ಯದೆಹಲಿ ಚುನಾವಣೆಗೂ ಮುನ್ನ ಸಿಎಂ ಅತಿಶಿ ವಿರುದ್ಧ ಪ್ರಕರಣ ದಾಖಲುಸಿದ್ದರಾಮಯ್ಯ ಕುಟುಂಬ ಬೇನಾಮಿ ಆಸ್ತಿ ಬಗ್ಗೆ ಸ್ನೇಹಮಯಿ ಕೃಷ್ಣ ದಾಖಲೆ ಬಿಡುಗಡೆಫೆ. 5 ಕ್ಕೆ ಪ್ರಧಾನಿ ಮೋದಿ ಮಹಾ ಕುಂಭ ಮೇಳಕ್ಕೆ ಭೇಟಿರೈಲ್ ಇಂಡಿಯಾದಲ್ಲಿ 300 ಹುದ್ದೆಗಳಿಗೆ ಅರ್ಜಿ ಆಹ್ವಾನಸುಳ್ಳು ಸುದ್ದಿ ಪ್ರಸಾರ: ಹೈಕೋರ್ಟ್ ಮೆಟ್ಟಿಲೇರಿದ ಆರಾಧ್ಯ ಬಚ್ಚನ್!!ಭಾರತೀಯ ವಲಸಿಗರನ್ನು ಅಮೆರಿಕದಿಂದ ಗಡಿಪಾರು ಮಾಡಲು ಆರಂಭಿಸಿದ ಟ್ರಂಪ್ಈ ಬಾರಿ SSLC ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ಇಲ್ಲ..!ನಮ್ಮ ಕ್ಲಿನಿಕ್ ಮಾಹಿತಿ ಕೊಡಲು ಬಿಬಿಎಂಪಿ ಹೊಸ ಪ್ಲಾನ್….!