ಸಿರುಗುಪ್ಪ: ನಗರದ ಶ್ರೀ ಕೃಷ್ಣದೇವರಾಯ ಆಂಗ್ಲ ಮಾಧ್ಯಮ ಶಾಲೆಗೆ ಶನಿವಾರದಂದು ಶ್ರೀ ಚರಣಗಿರಿ ಸಂಸ್ಥಾನದ ಮಠ ಹಾಲ್ವಿ-ಕರ್ಚಿಗನೂರು ಮಠದ ಪರಮಪೂಜ್ಯರಾದ ಶ್ರೀ ಮ.ನಿ.ಪ್ರ ಅಭಿನವ ಮಹಾಂತ ಮಹಾಸ್ವಾಮಿಗಳು ಭೇಟಿ ನೀಡಿದರು. ಈ ಸಂದರ್ಭದಲ್ಲಿ ನಳಂದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಲಿಗಾರ್ ವೆಂಕಟೇಶ್, ಕಾರ್ಯದರ್ಶಿ ಶ್ರೀಮತಿ ವೈ.ರಮಾದೇವಿ, ಶಾಲೆಯ ಸಿಬ್ಬಂದಿ ವರ್ಗದವರು ಪೂಜ್ಯಶ್ರೀಗಳಿಗೆ ಗೌರವಪೂರ್ವಕ ಸ್ವಾಗತವನ್ನು ಕೋರಿ, ಭಕ್ತಿ ಪೂರ್ವಕವಾಗಿ ಶ್ರೀಗಳ ಪಾದಪೂಜೆಯನ್ನು ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪೂಜ್ಯಶ್ರೀಗಳು ಶಾಲೆಯ ಬೆಳವಣಿಗೆ, ಶಾಲೆಯಲ್ಲಿ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಶಾಲೆಯು ಉತ್ತಮ ಸಾಧನೆಯನ್ನು ಮಾಡುತ್ತಾ ಬಂದಿರುವುದು ಶ್ಲಾಘನೀಯವಾದುದಾಗಿದೆ. ಭವಿಷ್ಯದಲ್ಲಿ ಇನ್ನೂ ಉನ್ನತ ಮಟ್ಟದಲ್ಲಿ ಬೆಳೆದು ಶಾಲೆಯ ಮಕ್ಕಳ ಸಾಧನೆ ಅತ್ಯುತ್ತಮವಾಗಿ ನಡೆದು ವಿದ್ಯಾರ್ಥಿಗಳು ರಾಜ್ಯ, ದೇಶದಲ್ಲಿ ಕೀರ್ತಿ ತರುವಂತಹ ಸಾಧನೆಯನ್ನು ಮಾಡಿ ಸಂಸ್ಕಾರವಂತ ಸತ್ಪ್ರಜೆಗಳಾಗಲಿ ಎಂದು ಶುಭ ಹಾರೈಸಿದರು.ನಳಂದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಲಿಗಾರ್ ವೆಂಕಟೇಶ್, ಕಾರ್ಯದರ್ಶಿಯಾದ ಶ್ರೀಮತಿ ವೈ.ರಮಾದೇವಿ, ಶಾಲೆಯಆಡಳಿತಾಧಿಕಾರಿಗಳಾದ ಸೌಜನ್ಯ, ಶಾಲೆಯ ಮುಖ್ಯ ಗುರುಗಳಾದ ಜೆ.ಅಮರೇಶ, ಶಿಕ್ಷಕರಾದ ಕೆ.ಮಂಜುನಾಥ, ಮಹೇಶ್ ಕುಮಾರ್,ಶಿಕ್ಷಕಿಯರಾದ ವೈ.ಜಯಶ್ರೀ, ಸ್ವಪ್ನ, ಶೈನಾಜ್ ಬೇಗಂ, ಮತ್ತು ಶಾಲೆಯ ಇತರ ಸಿಬ್ಬಂದಿ ಮತ್ತು ಎಲ್ಲಾ ಮಕ್ಕಳು ಭಾಗವಹಿಸಿದ್ದರು.