LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸಂಬಂಧ ಹೊಂದಿದ್ದ ಮಹಿಳೆಯನ್ನೇ ಕೊಂದು ಜಿಲ್ಲಾಧಿಕಾರಿ ಮನೆಯ ಬಳಿ ಶವ ಹೂತಿಟ್ಟಿದ್ದ ಜಿಮ್ ಟ್ರೈನರ್

ಲಕ್ನೋ: ಜಿಮ್ ಟ್ರೈನರ್ ಓರ್ವ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯನ್ನೇ ಕೊಂದು ಜಿಲ್ಲಾಧಿಕಾರಿ ಮನೆಯ ಬಳಿ ಶವ ಹೂತಿಟ್ಟಿದ್ದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಹೌದು. ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ 32 ವರ್ಷದ ಮಹಿಳೆಯೊಬ್ಬರ ಮೃತದೇಹವನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಪತ್ತೆ ಹಚ್ಚಲಾಗಿದೆ. ಮೃತ ಮಹಿಳೆ ಏಕ್ತಾ ಗುಪ್ತಾರ ಜಿಮ್ ತರಬೇತುದಾರ ವಿಶಾಲ್ ಸೋನಿ ನೀಡಿದ ಮಾಹಿತಿಯ ಮೇರೆಗೆ ಆಕೆಯ ಮೃತದೇಹವನ್ನು ಕಾನ್ಪುರ ಜಿಲ್ಲಾಧಿಕಾರಿ ನಿವಾಸದ ಬಳಿ ಇರುವ ಕ್ಲಬ್ ಒಂದರಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದಕ್ಕೂ ಮುನ್ನ, ಮೃತ ಮಹಿಳೆಯ ಪತಿ ರಾಹುಲ್ ಗುಪ್ತ ದಾಖಲಿಸಿದ್ದ ದೂರನ್ನು ಆಧರಿಸಿ, ಈ ಪ್ರಕರಣದ ಸಂಬಂಧ ವಿಶಾಲ್ ಸೋನಿಯನ್ನು ಪೊಲೀಸರು ಬಂಧಿಸಿದ್ದರು.

ವಿಚಾರಣೆಯ ಸಂದರ್ಭದಲ್ಲಿ, ನನಗೂ ಏಕ್ತಾ ಗುಪ್ತಗೂ ಸಂಬಂಧವಿತ್ತು ಹಾಗೂ ನಾನು ಮತ್ತೊಬ್ಬ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವುದಕ್ಕೆ ಆಕೆ ಆಕ್ಷೇಪಿಸಿದ್ದರು ಎಂದು ವಿಶಾಲ್ ಸೋನಿ ಬಹಿರಂಗಗೊಳಿಸಿದ್ದ ಎನ್ನಲಾಗಿದೆ. ಜೂನ್ 24ರಂದು ಜಿಮ್‌ಗೆ ತೆರಳಿದ್ದ ಏಕ್ತಾ ಗುಪ್ತ, ಈ ವಿಷಯದ ಕುರಿತು ವಿಶಾಲ್ ಸೋನಿಯೊಂದಿಗೆ ವಾಗ್ವಾದ ನಡೆಸಿದ್ದರು. ಆಗ ವಿಶಾಲ್ ಸೋನಿ ಆಕೆಗೆ ಗುದ್ದಿದ್ದರಿಂದ, ಆಕೆ ಮೂರ್ಛೆ ಹೋಗಿದ್ದರು. ನಂತರ ವಿಶಾಲ್ ಸೋನಿ ಆಕೆಯನ್ನು ಹತ್ಯೆಗೈದು ಕಾನ್ಪುರ ಜಿಲ್ಲಾಧಿಕಾರಿ ನಿವಾಸದ ಬಳಿ ಇರುವ ಕ್ಲಬ್ ಒಂದರಲ್ಲಿ ಹೂತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
--ಆಯ್ದಕ್ಕಿ ಮಾರಯ್ಯ ಅವರ ವಚನ….!ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಸಿ.ಟಿ.ರವಿ ಆರೋಪ.!ರಾಜ್ಯಸಭೆ ಮತ್ತು ಲೋಕಸಭೆ ಎರಡೂ ಜುಲೈ 21 ರಿಂದ ಮುಂಗಾರು ಅಧಿವೇಶನ.!ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಸರಕಾರದಿಂದ ಅದ್ದೂರಿ ಸ್ವಾಗತ.!ಐಪಿಎಲ್ ಫೈನಲ್ ಗೆದ್ದು ಚಾಂಪಿಯನ್ ಆಗಿರುವ ಸಂಭ್ರಮದಲ್ಲಿ ಕಾಲ್ ತುಳಿತ 6 ಮಂದಿ ಸಾವು.!ಸುರಭಿ ಗೌತಮ್‌ ಯಶಸ್ಸಿನ ಕಥೆ ಕೇಳಿದ್ರೆ ಆಶ್ಚರ್ಯ ಪಡುತ್ತೀರ.?ಆರ್‌ಸಿಬಿ ಪಡೆ ಚೊಚ್ಚಲ ಬಾರಿ ಟ್ರೋಫಿ.! ಇಂದು ಬೆಂಗಳೂರಿನಲ್ಲಿ ವಿಕ್ಷರಿ ಪರೇಡ್ಮನೆಯಲ್ಲಿ ಅಶಾಂತಿ, ಕಿರಿ ಕಿರಿ, ನೆಮ್ಮದಿ ಇಲ್ಲದೆ ಇರುವುದು ಹಾಗೂ ವಾಸ್ತು ದೋಷಕ್ಕೆ ಸರಳ ಯಂತ್ರ ಪರಿಹಾರ.!ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮಕ್ಕೆ ನೂತನ ಅಧ್ಯಕ್ಷರಾಗಿ ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀ.!ಆರ್ಸಿಬಿ ಟ್ರೋಫಿ ಗೆಲ್ತಿದ್ದಂತೆಯೇ ವಿರಾಟ್ ಕೊಹ್ಲಿ ಆನಂದಭಾಷ್ಪ ..!