LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಸಿದ್ದರಾಮಯ್ಯ ಕುಟುಂಬ ಹಾಳಾಗಲು ಬೈರತಿ ಸುರೇಶ್ ಕಾರಣ'- ಶೋಭಾ ಕರಂದ್ಲಾಜೆ

ದೆಹಲಿ : ಸಿದ್ದರಾಮಯ್ಯ ಕುಟುಂಬ ಹಾಳಾಗಲು ಬೈರತಿ ಸುರೇಶ್ ಕಾರಣ. ನನ್ನ ಮೇಲೆ ಅಪವಾದ ಹೊರಿಸಲು ಬಹಳ ಹುಡುಕಿದ್ದೀರಿ, ಏನು ಸಿಕ್ಕಿಲ್ಲ. ಅದಕ್ಕಾಗಿ ಇಂತಹ ಚೀಪ್ ರಾಜಕಾರಣ ಮಾಡುತ್ತಿದ್ದೀರಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪತ್ನಿ ಸಾವಿನ ಹಿಂದೆ ಶೋಭಾ ಕರಂದ್ಲಾಜೆ ಕೈವಾಡವಿದೆ ಎಂಬ ಸಚಿವ ಬೈರತಿ ಸುರೇಶ್ ಹೇಳಿಕೆಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೌರವರನ್ನು ಮುಗಿಸಲು ಶಕುನಿ ಸೇರಿಕೊಂಡಿದ್ದ. ಹಾಗೆಯೇ ಸಿದ್ದರಾಮಯ್ಯ ಅವರನ್ನು ಮುಗಿಸಲು ಬೈರತಿ ಸುರೇಶ್ ಸೇರಿಕೊಂಡಿದ್ದಾರೆ. ಕಾಂಗ್ರೆಸ್ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೈರತಿ ಸುರೇಶ್ ಆರೋಪ ಮಾಡಿದ್ದಾರೆ. ಇದಕ್ಕೆ ಒಂದು ಉದಾಹರಣೆ ಕೊಡಬಲ್ಲೆ. ದರೋಡೆಕೋರರು, ಭಯೋತ್ಪಾದಕರನ್ನು ಪೊಲೀಸರು ಹಿಡಿಯುತ್ತಾರೆ. ದರೋಡೆಕೋರರು ತಪ್ಪಿಸಿಕೊಳ್ಳಲು ವಾಪಸ್ ದಾಳಿ ಮಾಡುತ್ತಾರೆ. ಅದೇ ರೀತಿಯಲ್ಲಿ ಈಗ ಆಗಿದೆ. ಮುಡಾದಲ್ಲಿ ಫೈಲ್ ತಂದು ಸುಟ್ಟು ಹಾಕಿದರು ಎಂದು ನಾನು ಹೇಳಿದೆ. ಅದಕ್ಕೆ ಪ್ರತಿಯಾಗಿ ಈ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಯಾಕೆ ಇಂಥವರನ್ನು ಜೊತೆಗೆ ಇಟ್ಟುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕಾರಣಿಯಾಗಿ ಕ್ಷುಲ್ಲಕ ರಾಜಕಾರಣ ಮಾಡಬಾರದು. ರಾಕೇಶ್ ಸಿದ್ದರಾಮಯ್ಯ ಸಾವಿಗೆ ಬೈರತಿ ಸುರೇಶ್ ಕಾರಣ ಎಂದು ಜನ ಮಾತನಾಡುತ್ತಿದ್ದಾರೆ. ಇದನ್ನು ನಾನು ಹೇಳಬೇಕಾ? ರಾಜಕೀಯವನ್ನು ರಾಜಕೀಯವಾಗಿ ಎದುರಿಸಿದೆ. ಓಡಿ ಹೋಗುವ, ಹೊಂದಾಣಿಕೆ ರಾಜಕಾರಣಿ ನಾನಲ್ಲ. ಹೆಬ್ಬಾಳದಿಂದ ನಿಮ್ಮನ್ನು ಓಡಿಸುತ್ತೇವೆ. ಬೆಂಗಳೂರು ಮುಳುಗುತ್ತಿದೆ, ಅದನ್ನು ಸರಿ ಮಾಡಿದ್ದೀರಾ? ಶೋಭಾ ಕರಂದ್ಲಾಜೆ ಓಡಿ ಹೋಗಲ್ಲ. ನಾಲಿಗೆ, ಬಾಯಿ ಬಿಗಿ ಹಿಡಿದು ಮಾತನಾಡಿ. ಅಭಿವೃದ್ಧಿ ಮಾಡುವುದು ಬಿಟ್ಟು ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
3 ಪಾಕ್ ಭಯೋತ್ಪಾದಕರ ಪೋಸ್ಟರ್‌ ಬಿಡುಗಡೆ- ಮಾಹಿತಿ ನೀಡಿದವರಿಗೆ 20 ಲಕ್ಷ ರೂ.ಗಳ ಬಹುಮಾನಶೋಪಿಯಾನ್‌ನಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ- ಮೂವರು ಉಗ್ರರ ಹತ್ಯೆಚದುರಂಗ ಆಟವನ್ನೇ ನಿಷೇಧಿಸಿದ ತಾಲಿಬಾನ್- ಕಾರಣವೇನು?ಮಸೀದಿಯಲ್ಲಿದ್ದ ಕುರಾನ್‌ ಕದ್ದೊಯ್ದು ಭಸ್ಮ, ಬೆಳಗಾವಿಯಲ್ಲಿ ಪ್ರತಿಭಟನೆ, ಉದ್ವಿಗ್ನ ವಾತಾವರಣಬೆಂಗಳೂರು ಸೇರಿ ಕರ್ನಾಟಕದ 21 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್ಆಂಧ್ರದಲ್ಲಿ ಸೈನಿಕರ ಆಸ್ತಿಗೆ ತೆರಿಗೆ ವಿನಾಯಿತಿ: ಪವನ್ ಕಲ್ಯಾಣ್ ಘೋಷಣೆ'ನ್ಯೂಕ್ಲಿಯರ್‌ ಬ್ಲ್ಯಾಕ್‌ಮೇಲ್‌ಗೆ ನಾವು ಬೆದರಲ್ಲ'- ಪಾಕ್‌ಗೆ ಮೋದಿ ಎಚ್ಚರಿಕೆಮತ್ತೆ ಪಾಕ್‌ನಿಂದ ಡ್ರೋನ್ ದಾಳಿಮಂಗಳೂರು :ಟಿಂಟೆಡ್‌ ಗ್ಲಾಸ್‌ ವಿರುದ್ಧ ಪೊಲೀಸರ ಕಾರ್ಯಾಚರಣೆ-504 ಕಾರುಗಳಿಗೆ ₹2.53 ಲಕ್ಷ ದಂಡಐಎಎಸ್ ಅಧಿಕಾರಿ ಮೇಧಾ ಆನಂದ್ ಅವರ ಸ್ಫೂರ್ತಿದಾಯಕ ಕಥೆ