LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

28-08-2026 ಶುಕ್ರವಾರ 'ವರಮಹಾಲಕ್ಷ್ಮೀ ವ್ರತ' : ಆಚರಣೆ ಮತ್ತು ಸಂಕ್ಷಿಪ್ತ ವಿವರಣೆ

ವರವನ್ನೀಯುವ ಮಹಾಲಕ್ಷ್ಮಿಯ ಪರಮ ಕೃಪೆಯಾಚಿಸುವ ವರಮಹಾಲಕ್ಷ್ಮೀ ವ್ರತವು ಈ ತಿಂಗಳಿನಲ್ಲಿ ಪ್ರಮುಖವಾದುದು .

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

"ಶ್ರಾವಣ ಮಾಸದ ಹುಣ್ಣಿಮೆಗೆ ಸಮೀಪದ ಶುಕ್ರವಾರ ಅಥವಾ ಹುಣ್ಣಿಮೆಯ ಶುಕ್ರವಾರದಂದು*" ವಿಶೇಷವಾಗಿ ಮನೆಗಳಲ್ಲಿ ಮತ್ತು ದೇವಾಲಯಗಳಲ್ಲಿ ಮುತ್ತೈದೆಯರು ಸಂಘಟಿತರಾಗಿ , ಶ್ರದ್ಧಾ ಭಕ್ತಿಗಳಿಂದ ಈ ಪೂಜೆ ವರ್ಷದಿಂದ ವರ್ಷಕ್ಕೆ ಸಡಗರದಲ್ಲಿ ಆಚರಿಸುವುದು ಅತ್ಯಂತ ವಿಶೇಷ. ನಿಜಕ್ಕೂ ಇದೊಂದು ಶುಭ ಲಕ್ಷಣ . 

ಭವಿಷ್ಟೋತ್ತರ ಪುರಾಣದಲ್ಲಿ ಪಾರ್ವತಿ - ಪರಮೇಶ್ವರರ ಸಂಭಾವಣಾ ರೂಪದಲ್ಲಿ ಈ ವ್ರತ ಕಥೆ ಹೃದಯಂಗಮವಾಗಿ ವರ್ಣಿಸಲ್ಪಟ್ಟಿದೆ . ಇದೇ ವಿವರಗಳನ್ನು ಸೂತ ಪುರಾಣಿಕರು ಶೌನಕಾದಿ ಮಹರ್ಷಿಗಳಿಗೆ ಅರುಹಿದ ವಿಚಾರ ಜನ ಜನಿತವಾದುದು . 

“ ವ್ರತಾನಾಮುತ್ತಮಂ ಕಾಮ್ಯಂ ಸರ್ವ ಸೌಭಾಗ್ಯ ಕಾರಣಮ್
ಸರ್ವ ಸಂಪತ್ಪದಂ ಕೀರ್ತಿ ಪುತ್ರ ಪೌತ್ರ ಪ್ರವರ್ಧನಂ " ವ್ರತಗಳಲ್ಲಿಯೇ ಸರ್ವಶ್ರೇಷ್ಠವಾದುದು ವರಮಹಾಲಕ್ಷ್ಮೀವ್ರತ . ಇಷ್ಟಾರ್ಥ ಪಡೆದುಕೊಳ್ಳುವ ಆಚರಣೆಯಿದು. ಜ್ಞಾನ , ಭಕ್ತಿ , ವೈರಾಗ್ಯಗಳ ಜೊತೆಗೆ ಸಕಲ ಸಂಪತ್ತನ್ನು ಸತ್- ಸಂತಾನ ಕರುಣಿಸುವ ಪೂಜೆಯಿದು.

ವ್ರತ ' ಎಂದರೆ ಒಳ್ಳೆಯ ಸದಾಚಾರ.
ಗೃಹಿಣೀ ಧರ್ಮಕ್ಕನುಸಾರವಾಗಿ ಶುಚಿರ್ಭೂತರಾಗಿ , ಶುದ್ಧ ಮನಸ್ಸಿನಿಂದ ಶ್ರದ್ಧೆಯಿಂದ ವ್ರತದಲ್ಲಿ ಸಹಭಾಗಿಗಳಾಗುವುದೇ ನಿಜವಾದ ಅರ್ಹತೆ . ಅಲಂಕೃತ ಮಂಟಪದಲ್ಲಿ ವಿಧ್ಯುಕ್ತ ಕಲಶದಲ್ಲಿ ಮಂಗಲ ಪ್ರದಾಯಿನೀ ಮಹಾ ಲಕ್ಷ್ಮೀಯನ್ನು ಶ್ರೀಮನ್ನಾರಾಯಣನ ಸಹಿತ ಕಲ್ಪೋಕ್ತ ವಿಧಿಯಿಂದ ಪೂಜಿಸಬೇಕು.

ಶ್ರಾವಣ ಮಾಸದ ಶುಕ್ಲಪಕ್ಷದ ಕಡೆಯ (ಹುಣ್ಣಿಮೆಯ ಹತ್ತಿರದ) ಶುಕ್ರವಾರದಂದು ಮಹಿಳೆಯರು ವರಮಹಾಲಕ್ಷಿಯನ್ನು ಸಕಲ ಇಷ್ಟಾರ್ಥಕ್ಕಾಗಿ ಹಾಗೂ ಐಶ್ವರ್ಯ ಲಭಿಸಲೆಂದು ಪೂಜಿಸುತ್ತಾರೆ.

ಸ್ಕಂದ ಪುರಾಣದಲ್ಲಿ ವರಮಹಾಲಕ್ಷ್ಮಿಯ ವ್ರತದ ಬಗ್ಗೆ ಉಲ್ಲೇಖವಿದೆ.
 ಒಮ್ಮೆ ಪಾರ್ವತಿಯು ಶಿವನನ್ನು ಕುರಿತು ಮಹಿಳೆಯರ ಒಳಿತಿಗಾಗಿ ಯಾವುದಾದರು ವ್ರತವನ್ನು ಸೂಚಿಸಬೇಕೆಂದು ಕೊರಲಾಗಿ, ಶಿವನು ಚಾರುಮತಿಯ ಕತೆಯನ್ನು ಹಾಗೂ ಹೇಗೆ ವರಮಹಾಲಕ್ಷ್ಮಿ ವ್ರತದ ಆಚರಣೆ ಪ್ರಾರಂಭವಾಯಿತೆಂದು ತಿಳಿಸುತ್ತಾರೆ.

ಚಾರುಮತಿಯೆಂಬ ಸ್ತ್ರೀಯು ಕುಂಡಿನವೆಂಬ ಪುರದ ಮಗದ ಪಟ್ಟಣದಲ್ಲಿ  ತುಂಬಿದ ಕುಟುಂಬದ ಮನೆಯ ನೆಚ್ಚಿನ ಸೊಸೆಯಾಗಿ ಹಾಗೂ ಗಂಡನ ಪ್ರಿಯ ಸತಿಯಾಗಿ ಸಕಲ ಜವಾಬ್ದಾರಿಗಳನ್ನು ನಿಷ್ಠೆಯಿಂದ ನೆರವೆರಿಸುತ್ತಿದ್ದಳು. ಕೆಲಸದೆಡೆಗೆ ಚಾರುಮತಿಗಿದ್ದ ನಿಷ್ಠೆಯಿಂದ ಮೆಚ್ಚಿದ ಮಹಾಲಕ್ಷ್ಮಿಯು ಚಾರುಮತಿಯ ಸ್ವಪ್ನದಲ್ಲಿ ಪ್ರತ್ಯಕ್ಷಳಾಗಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲು ತಿಳಿಸಿದಳು. ನಂತರ ಚಾರುಮತಿಯು ತನ್ನ ಸ್ವಪ್ನದಲ್ಲಿ ವರಮಹಾಲಕ್ಷ್ಮಿ ತಿಳಿಸಿದ ವ್ರತದ ಬಗ್ಗೆ ತನ್ನ ಕುಟುಂಬದವರೊಡನೆ ಹೇಳಲಾಗಿ, ಕುಟುಂಬದವರೆಲ್ಲರು ಚಾರುಮತಿಗೆ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲು ಸಹಕರಿಸಿದರು. ಅಂದಿನಿಂದ ಶ್ರಾವಣ ಮಾಸದ ಶುಕ್ಲ ಪಕ್ಷದ ಕೊನೆಯ
ಶುಕ್ರವಾರದಂದು ಈ ವ್ರತವನ್ನು ಆಚರಿಸಲಾಗುತ್ತದೆ.

ವರಮಹಾಲಕ್ಷ್ಮಿಯ ವ್ರತದಂದು ಮಹಿಳೆಯರು ಮುಂಜಾನೆ ಬೇಗನೆ ಎದ್ದು ವ್ರತಕ್ಕೆ ಸಿಧ್ದರಾಗಿ ಮನೆಯನ್ನು ಸ್ವಚ್ಚಗೊಳಿಸಿ, ಮನೆಯ ಮುಂದೆ ರಂಗೋಲಿಯನ್ನು ಬಿಡಿಸಿ ಅಲಂಕರಿಸಿ ಉಪವಾಸದಿ೦ದ ಇದ್ದು ಭಕ್ತಿಯಿಂದ ಪೂಜೆಯನ್ನು ನೆರವೆರಿಸುವರು.
ಕ್ಷೀರ ಪಾಯಸ, ಸಿಹಿ ತಿಂಡಿಗಳು ಪೂರ್ಣ ಭಕ್ಷ್ಯಾದಿ, ಫಲತಾಂಬೂಲ ಯೋಗ್ಯತಾನುಸಾರ ದೇವಿಗೆ ನೈವೇದ್ಯ ಕಾಲದಲ್ಲಿ ಅರ್ಪಿಸಬೇಕು . ಪ್ರಸನ್ನಾರ್ಥ್ಯದ ಬಳಿಕ ಪ್ರಸಾದ ರೂಪದ ದೋರ (ಪೂಜೆ ಮಾಡಿದ ದ್ವಾದಶಿ ಗ್ರಂಥಿ ಉಳ್ಳ ದಾರ) ಧರಿಸಿ ಬ್ರಾಹ್ಮಣರಿಗೆ ಸುವಾಸಿನಿಯರಿಗೆ ಮನೆಯ; ಕುಟುಂಬದ ಹಿರಿಯ ಮುತ್ತೈದೆಯರಿಗೆ ವ್ರತದ ಸಾಂಗತೆಗೆ ಭಕ್ಷ ಸಹಿತ ಫಲ ತಾಂಬೂಲ - ದಕ್ಷಿಣೆ ಒಪ್ಪಿಸಿ ಆಶೀರ್ವಾದ ಪಡೆಯುವುದು ಸಮುಚಿತವಾದುದು .

ಭಜನೆ , ಸ್ತೋತ್ರ ಪಠನ , ಸುವಾಸಿನಿ ಪೂಜೆ, ಕಥಾಶ್ರವಣ , ಸಂತರ್ಪಣೆ ಇತ್ಯಾದಿ ಕಾರ್ಯಕ್ರಮಗಳಿಂದ ವ್ರತ ಸಂಪನ್ನವಾಗುತ್ತದೆ . ವಿಶೇಷವಾಗಿ ಮಧ್ಯಾಹ್ನ ಕಾಲದಲ್ಲಿ ವ್ರತ ಆಚರಿಸುವ ವಿಧಾನವಿದ್ದರೂ , ಕೆಲವೆಡೆ ಸಂಜೆ ಪೂಜಿಸುವ ಪರಿಪಾಟವಿದೆ . ಆಚರಣೆಯ ವಿಧಿಯಲ್ಲಿ ಪ್ರಾದೇಶಿಕ ಭಿನ್ನತೆಯಿದ್ದರೂ , ಪೂಜಾ ವಿಧಾನದಲ್ಲಿ ಸಾಮ್ಯತೆ ಇದ್ದೇ ಇದೆ . 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

"ವರಮಹಾಲಕ್ಷ್ಮಿ ವ್ರತ"
ಹೆಸರೇ ಸೂಚಿಸುವಂತೆ ವರಗಳನ್ನು ಕೊಡುವ ಲಕ್ಷ್ಮಿ
ದೇವಿಯ ವ್ರತ ಇದು.ಈ ವ್ರತವನ್ನು ಶ್ರಾವಣ ಮಾಸದ
ಶುಕ್ಲ ಪಕ್ಷದ ಹುಣ್ಣಿಮೆಯ ಹತ್ತಿರದ ಶುಕ್ರವಾರ ಮಾಡುತ್ತಾರೆ.
ಕೆಲವರ ಮನೆಯಲ್ಲಿ, ದೇವಸ್ಥಾನದಲ್ಲಿ ವ್ರತ ಮಾಡುವ ಪದ್ಧತಿಗೆ ಇರುತ್ತದೆ.
ವ್ರತ ಮಾಡುವ ಪದ್ಧತಿ ಇಲ್ಲದಿದ್ದರೆ ಯಾವುದೇ ಶುಕ್ರವಾರ
ಲಕ್ಷ್ಮಿ ದೇವಿಗೆ ಪೂಜೆ ಮಾಡಿ.
ವಿಧಾನ
ಸಾಮಾನ್ಯವಾಗಿ ಎಲ್ಲ ಪೂಜೆಗಳಿಗೂ ಉಪಯೋಗಿಸುವ
ಸಾಮಗ್ರಿಗಳು: ಮನೆಯಲ್ಲಿ ಇದ್ದರೆ ಅಥವಾ ಯೋಗ್ಯತಾನುಸಾರ

ರಂಗೋಲಿ , ಮಣೆ / ಮಂಟಪ
ದೇವರ ವಿಗ್ರಹ ಅಥವಾ ಕಲಶ (ದೇವರ ಪಟ)
ದೀಪ, , ತುಪ್ಪ, ಎಣ್ಣೆ,
ದೀಪಕ್ಕೆ ಹಾಕುವ ಬತ್ತಿ
ಘಂಟೆ, ಪಂಚಪಾತ್ರೆ,
ಉದ್ದರಣೆ, ಅರ್ಘ್ಯ ಪಾತ್ರೆ, ನೀರು
ಅರಿಶಿನ, ಕುಂಕುಮ,
ಮಂತ್ರಾಕ್ಷತೆ,ಮಾವಿನ ಎಲೆ
ಶ್ರೀಗಂಧ, ಊದಿನ ಕಡ್ಡಿ
ರವಿಕೆ ಬಟ್ಟೆ, ದಾರ 
ಹೂವು, ಪತ್ರೆ, ಗೆಜ್ಜೆ ವಸ್ತ್ರ ಪಂಚಾಮೃತ - ಹಾಲು,
ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ ಸಿಯಾಳ
ವೀಳ್ಯದ ಎಲೆ, ಅಡಿಕೆ,
ಹಣ್ಣು , ತೆಂಗಿನಕಾಯಿ
ನೈವೇದ್ಯ - ಪಾಯಸ,
ಹುಗ್ಗಿ, ಅನ್ನ,
ಕೋಸಂಬರಿ , ಇತ್ಯಾದಿ
ಕರ್ಪೂರ,
ಮಂಗಳಾರತಿ ಬತ್ತಿ
ಆರತಿ ತಟ್ಟೆ, 
ಹೂಬತ್ತಿ,
ಇತ್ಯಾದಿ ಇವುಗಳೊಂದಿಗೆ
ಇನ್ನು ಹಲವಾರು ವಸ್ತುಗಳ ಬಳಕೆ
ಮಾಡಬಹುದು. (ಯಾವುದೇ ಸಾಮಗ್ರಿ ಅಥವಾ ಮಾಡುವ ಕ್ರಮಗಳಲ್ಲಿ ಕಡಿಮೆ ಆದಲ್ಲಿ ಬೇಸರಿಸಬೇಡಿ ಅವರವರ ಯೋಗ್ಯತೆ ಅವರ ಭಕ್ತಿಯಿಂದಲೇ ಅಭಿವ್ಯಕ್ತಿ)
ಮುಖ್ಯವಾಗಿ ಅಲಂಕಾರ
ಮಾಡುವುದಕ್ಕೆ ಮಾರುಕಟ್ಟೆಯಲ್ಲಿ ಅನೇಕ
ವಿಧವಾದ ಅಲಂಕಾರಿಕ
ಸಾಮಾನು ದೊರೆಯುತ್ತದೆ .
ಇದು ಪ್ರತಿಯೊಬ್ಬರ ಆಸಕ್ತಿ ಮತ್ತು ಅಭಿರುಚಿ ಯೋಗ್ಯತೆಯ ಮೇಲೆ
ಅವಲಂಭಿಸಿದೆ.
ಸಾಮಾನ್ಯವಾಗಿ ಉಪಯೋಗಿಸುವ
ಪೂಜಾ ಸಾಮಗ್ರಿಗಳ ಜೊತೆಗೆ, 12 ಗಂಟಿನ ದಾರ
ಇಟ್ಟು ಪೂಜೆ ಮಾಡಬೇಕು.
ಪೂಜೆ ನಂತರ ಈ
ದಾರವನ್ನು ಮಾಂಗಲ್ಯಕ್ಕೆ ಅಥವಾ ಕುತ್ತಿಗೆಗೆ ಕಟ್ಟಿಕೊಳ್ಳಬಹುದು.

1)ಈ ದಿನ ಬೆಳಿಗ್ಗೆ ಎದ್ದು ಮಂಗಳ (ತಲೆ) ಸ್ನಾನ ಮಾಡಬೇಕು.

2)ವ್ರತ ಮಾಡುವವರು ಪೂಜೆ
ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ
ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ
ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ
ಸ್ಥಾಪಿಸಬೇಕು.
3)ಬಾವಿಯಿಂದ ಒಂದು ಕಲಶದಲ್ಲಿ 
ನೀರು ಹಾಕಿ  
*(ಸಾಧ್ಯವಾದರೆ ಯಮುನಾ ಪೂಜೆ ಮಾಡಿ,) ಜೊತೆಗೆ ಅರಿಶಿನ ಕುಂಕುಮ,
ಬೆಳ್ಳಿ ನಾಣ್ಯ / ಯಾವುದೇ ನಾಣ್ಯ, ಹೂ 
ಹಾಕಿ,ಕಳಶದ ಬಾಯಿಗೆ ಮಾವಿನ
ಎಲೆಗಳನ್ನು ಇಡಬೇಕು. .ಅದರ ಮೇಲೆ ಅರಿಶಿನ ಕುಂಕುಮ ಸವರಿದ
ತೆಂಗಿನಕಾಯಿ ಇಟ್ಟು, (ಇದರ ಮೇಲೆ ಲಕ್ಷ್ಮಿ ದೇವಿಯ ಬೆಳ್ಳಿಯ
ಮುಖವಾಡ ಇದ್ದರೆ ಅದನ್ನುಈ ತೆಂಗಿನಕಾಯಿಗೆ
ಜೋಡಿಸಬಹುದು) ಈ ಈ ಕಲಶಕ್ಕೆ ತತ್ಕಾಲ ಶೃಂಗಾರವನ್ನು ಮಾಡಿ ಘಂಟಾನಾದ ಮುಖಾಂತರ ಮನೆಗೆ ತರುವುದು. ಇದನ್ನು ಬಾವಿ ಅಥವಾ ಸರೋವರ ಗಳಿಂದ ತರಬಹುದು ಇವುಗಳು ಕಷ್ಟವಾದಲ್ಲಿ ಮನೆಯ ಒಳಗೆ ಅಥವಾ ತುಳಸಿಕಟ್ಟೆಯಲ್ಲಿ ತುಂಬಬಹುದು.
(ಗಂಗೇಚ ಯಮುನೇಚೈವ)

ಕಳಶವನ್ನು ಅಕ್ಕಿ ಹರಡಿರುವ
ತಟ್ಟೆಯ ಮೇಲೆ ಇಡಬೇಕು.
(ರಂಗೋಲಿಯ ಮೇಲೆ). ಈ ಕಲಶಕ್ಕೆ ಹೊಸ
ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ , ಒಡವೆ ಹಾಕಿ
ಅಲಂಕಾರ ಮಾಡಿ.

4)ಪೂಜಾ ವಿಧಾನ
ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು.
ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ
ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ
ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ ,
ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ
ಮಾಡಬೇಕು ಅಷ್ಟೆ.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ
ದೇವರನ್ನು ಆಹ್ವಾನ ಮಾಡುವುದು.
ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ವರಮಹಾಲಕ್ಷ್ಮಿ
ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ
ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ
ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ,
ನಕ್ಷತ್ರವನ್ನು ಹೆಸರಿಸಬಹುದು.

ಶುಭೇ ಶೋಭನೇ ಮುಹೂರ್ತೇ
ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತ
ವರಾಹ ಕಲ್ಪೇ ವೈವಸ್ವತ
ಮನ್ವಂತರೇ ಕಲಿಯುಗೇ ಪ್ರಥಮ
ಪಾದೇ ಜಂಬೋ ದ್ವೀಪೇ
ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ
ತೀರೇ ಶಾಲಿವಾಹನಶಕೆ
ಬೌದ್ಧಾವತಾರೇ(ಪರಶುರಾಮಕ್ಷೇತ್ರೇ) ಅಸ್ಮಿನ್

ವರ್ತಮಾನೇ ವ್ಯಾವಹಾರಿಕೇ ಶೋಭಕೃತ್ ನಾಮ 
ಸಂವತ್ಸರೇ, ದಕ್ಷಿಣಾಯನೇ ,...
ವರ್ಷಾಋತೌ , ಶ್ರಾವಣ ಮಾಸೇ ,ಶುಕ್ಲ ಪಕ್ಷೇ , ...
.......ತಿಥಿಯಾಂ ,ಶುಕ್ರವಾಸರ ಯುಕ್ತಾಯಾಂ , ಶುಭ
ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ
ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ,
ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ
ವಿಜಯ ವೀರ್ಯ ಅಭಯ ಆಯುರಾರೋಗ್ಯ
ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ
ದುರಿತೋಪಶಾಂತ್ಯರ್ಥಂ ಸಮಸ್ತ
ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ
ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ
ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ .. ವರಮಹಾಲಕ್ಷ್ಮಿ ಪ್ರೀತ್ಯರ್ಥಂ ಯಾವಚ್ಛಕ್ತಿ
ಧ್ಯಾನಾವಾಹನಾದಿ ಷೋಡಶೋಪಚಾರ
ಪೂಜಾಂ ಅಹಂ
ಕರಿಷ್ಯೇ. (ನಿಮ್ಮ ಮನಸ್ಸಿನ ಸಂಕಲ್ಪವನ್ನು ಇಲ್ಲಿ ದೇವರಲ್ಲಿ ನಿವೇದನೆ ಮಾಡಿ)

ಧ್ಯಾನ 
||ಪದ್ಮಾಸನೆ ಪದ್ಮಕರೇ ಸರ್ವ ಲೋಕೈಕ
ಪೂಜಿತೆ|
ನಾರಾಯಣ ಪ್ರಿಯೇದೇವಿ ಸುಪ್ರೀತಾ ಭವ
ಸರ್ವದಾ"...||
(ನೀವು ಪೂಜೆ ಮಾಡುತ್ತಿರುವ
ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ
ಮಾಡುವುದು. ಸಾಮಾನ್ಯವಾಗಿ
ಷೋಡಶೋಪಚಾರದಿಂದ ಪೂಜೆ
ಅಂತ ನೀವು ಕೇಳಿರಬಹುದು. ಷೋಡಶ
ಅಂದರೆ 16.
ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ
ಎಂದರ್ಥ. ಇವುಗಳ ವಿವರ ಕೆಳಗಿದೆ:
ಇಲ್ಲಿ ಅಕ್ಷತೆ ಹಾಕಬೇಕು (ಸ್ತ್ರೀ ಸೂಕ್ತ ತಿಳಿದವರು ಹೇಳುವುದು)

1.ಆವಾಹನೆ - (ಅಂದರೆ ಆಹ್ವಾನ. ದೇವರನ್ನು ನಿಮ್ಮ
ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ
ಆಹ್ವಾನ ಮಾಡುವುದು.)ವರಮಹಾಲಕ್ಷ್ಮೀಯೇ ನಮಃ ಆವಾಹಯಾಮಿ ಆವಾಹನಂ ಸಮರ್ಪಯಾಮಿ (ಇದಕ್ಕೆ ಸಂಬಂಧಪಟ್ಟ ಮಂತ್ರವನ್ನು ಪಿಡಿಎಫ್ನಲ್ಲಿ ಕಳುಹಿಸುತ್ತೇನೆ)

2.ಆಸನ - ಅಂದರೆ ಕುಳಿತುಕೊಳ್ಳುವ ಜಾಗ . ದೇವರ
ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ 
ಮಾಡಿಸುವುದು.ವರಮಹಾಲಕ್ಷ್ಮೀಯೇ ನಮಃ ಆಸನಂ ಸಮರ್ಪಯಾಮಿ

3.ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ
ನೀರು ಕೊಡುವುದು.ವರಮಹಾಲಕ್ಷ್ಮೀಯೇ ನಮಃ ಪಾದ್ಯಂ ಸಮರ್ಪಯಾಮಿ

4.ಅರ್ಘ್ಯ - ಕೈ ತೊಳೆದುಕೊಳ್ಳುವುದಕ್ಕೆ
ನೀರು ಕೊಡುವುದು.ವರಮಹಾಲಕ್ಷ್ಮೀಯೇ ನಮಃ ಅರ್ಘ್ಯಂ ಸಮರ್ಪಯಾಮಿ

5.ಆಚಮನ - ಕುಡಿಯುವುದಕ್ಕೆ
ನೀರು ಕೊಡುವುದು.ವರಮಹಾಲಕ್ಷ್ಮೀಯೇ ನಮಃ ಆಚಮನಂ ಸಮರ್ಪಯಾಮಿ

6.ಸ್ನಾನ - ಶುದ್ಧೋದಕ (ನೀರು)
ಮತ್ತು ಪಂಚಾಮೃತದಿಂದ ಸ್ನಾನ
.ವರಮಹಾಲಕ್ಷ್ಮೀಯೇ ನಮಃ ಸ್ನಾನಂ ಸಮರ್ಪಯಾಮಿ

7.ವಸ್ತ್ರ - ಧರಿಸಲು ಉಡುಪು ಕೊಡುವುದು .
ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ
( ಜನಿವಾರ), ಆಭರಣವನ್ನು (ಬಳೆ-
ಬಿಚ್ಚೋಲೆ )ಸಮರ್ಪಿಸುವುದು.ವರಮಹಾಲಕ್ಷ್ಮೀಯೇ ನಮಃ ವಸ್ತ್ರಂ ಸಮರ್ಪಯಾಮಿ

8.ಹರಿದ್ರ, ಕುಂಕುಮ,
ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ ,
ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.ವರಮಹಾಲಕ್ಷ್ಮೀಯೇ ನಮಃ.ಹರಿದ್ರ, ಕುಂಕುಮ,
ಗಂಧ, ಅಕ್ಷತಾಂ - ಸಮರ್ಪಯಾಮಿ

9.ಪುಷ್ಪ ಮಾಲ - ಹೂವು, ಪತ್ರೆಗಳಿಂದ ದೇವರಿಗೆ
ಅಲಂಕಾರ ಮಾಡುವುದು.ವರಮಹಾಲಕ್ಷ್ಮೀಯೇ ನಮಃ ಪುಷ್ಪಂ ಸಮರ್ಪಯಾಮಿ

10. ಅರ್ಚನೆ/ಅಷ್ಟೋತ್ತರ - ನೂರೆಂಟು ನಾಮಗಳಿಂದ
ದೇವರನ್ನು ಸ್ಮರಣೆ ಮಾಡುವುದು.(ಪೋಟೋದಲ್ಲಿ ಕೊಟ್ಟಿದೆ.)

ದಾರಗ್ರಂಥಿಗೂ
ಪೂಜಿಸುವುದು.

ವರಮಹಾಲಕ್ಷ್ಮೀಯೇ ನಮಃ ಅಷ್ಟೋತ್ತರ ಶತ ನಾಮ ಪೂಜಾಂ ಸಮರ್ಪಯಾಮಿ
11.ಧೂಪ - ಪರಿಮಳಯುಕ್ತವಾದ
ಧೂಪವನ್ನು ಅರ್ಪಿಸುವುದು.ವರಮಹಾಲಕ್ಷ್ಮೀಯೇ ನಮಃ ಧೂಪಂ ಸಮರ್ಪಯಾಮಿ

12.ದೀಪ - ದೀಪ
ಸಮರ್ಪಣೆ ಮಾಡುವುದು.
ವರಮಹಾಲಕ್ಷ್ಮೀಯೇ ನಮಃ ದೀಪಂ ಸಮರ್ಪಯಾಮಿ
13.ನೈವೇದ್ಯ, ತಾಂಬೂಲ -
ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ
ಅರ್ಪಿಸುವುದು .ವೀಳೆಯ, ಅಡಿಕೆ,
ತೆಂಗಿನಕಾಯಿ ತಾಂಬೂಲ ಕೊಡುವುದು.ವರಮಹಾಲಕ್ಷ್ಮೀಯೇ ನಮಃ ನೈವೇದ್ಯಂ ಸಮರ್ಪಯಾಮಿ

14. ನೀರಾಜನ - ಕರ್ಪುರದಿಂದ ಮಂಗಳಾರತಿ
ಮಾಡುವುದು.ವರಮಹಾಲಕ್ಷ್ಮೀಯೇ ನಮಃ ನೀರಾಜನಂ ಸಮರ್ಪಯಾಮಿ

15. ನಮಸ್ಕಾರ - ಪ್ರದಕ್ಷಿಣೆ ಮಾಡಿ ದೇವರಿಗೆ
ಸಾಷ್ಟಾಂಗ ನಮಸ್ಕಾರ ಮಾಡುವುದು.ವರಮಹಾಲಕ್ಷ್ಮೀಯೇ ನಮಃ ನಮಸ್ಕಾರಂ ಸಮರ್ಪಯಾಮಿ

16. ಪ್ರಾರ್ಥನೆ - ನಿಮ್ಮ ಇಷ್ಟಗಳನ್ನು ನಡೆಸಿ
ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ
ಮಾಡುವುದು. ವರಮಹಾಲಕ್ಷ್ಮೀಯೇ ನಮಃ ಪ್ರಾರ್ಥನಾಂ ಸಮರ್ಪಯಾಮಿ
ಪೂಜೆಯ
ನಂತರ ದೇವರು ಅನುಗ್ರಹಿಸಿರುವ ಅರಿಶಿನ,
ಕುಂಕುಮ, ದ್ವಾದಶಗ್ರಂಥಿ ದಾರ, ನೈವೇದ್ಯವನ್ನು ಪ್ರಸಾದ
ರೂಪವಾಗಿ ಸ್ವೀಕಾರ
ಮಾಡುವುದು.
ಹೀಗೆ ಕ್ರಮವಾಗಿ ಪೂಜೆ ಮಾಡಿ
ದೇವರನ್ನು ಸಂತೃಪ್ತಿ ಪಡಿಸಿದರೆ, ಭಗವಂತನು ತನ್ನ
ಕೃಪೆಯನ್ನು ನಮ್ಮ ಮೇಲೆ ಅಪಾರವಾಗಿ
ಅನುಗ್ರಹಿಸುತ್ತಾನೆ
ಪೂಜೆಯ ಕೊನೆಯಲ್ಲಿ ದಾರವನ್ನು ಕಟ್ಟಿಕೊಳ್ಳಿ. ಸುಮಂಗಲಿಯರಿಗೆ ಅರಿಶಿನ ಕುಂಕುಮ
ಕೊಡಬೇಕು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

 ಆಧ್ಯಾತ್ಮ ಬಂಧುಗಳೇ...
ಮನೆ, ಮಠ,ಮಂದಿರಗಳಲ್ಲಿ ದೈವಿಕ ಕಾರ್ಯಗಳಲ್ಲಿ ರಾಮಾಯಣ,ಮಹಾಭಾರತ  ಭಾಗವತ ಪುರಾಣ,ಗರುಡ ಪುರಾಣ ಮೊದಲಾದ ಅಷ್ಟಾದಶ ಪುರಾಣಗಳ ಪಾರಾಯಣ ಮತ್ತು ಪ್ರವಚನ 
  ಜಪ ತಪ ಹೋಮ ಅನುಷ್ಠಾನ ಗಳನ್ನು
 ಜಾತಕ ವಿಮರ್ಶೆ ....ಪ್ರಶ್ನೆ ಚಿಂತನೆಯನ್ನು
ಯೋಗ್ಯತಾನುಸಾರ ಸರಳ ಮತ್ತು ಶ್ರದ್ಧೆಯಿಂದ ನಡೆಸಿಕೊಡಲಾಗುತ್ತದೆ
ಆಸಕ್ತ ಭಗವದ್ಭಕ್ತರು ಸಂಪರ್ಕಿಸಬಹುದು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING: ಪರಪ್ಪನ ಅಗ್ರಹಾರ ಜೈಲಲ್ಲಿ ಪ್ರಜ್ವಲ್‌ ರೇವಣ್ಣ ಬಳಿ ಸಿಕ್ಕ ಮೊಬೈಲ್‌ನಲ್ಲೂ 90 ಅಶ್ಲೀಲ ವಿಡಿಯೋಗಳು ಪತ್ತೆ!BREAKING : ಪಾಕಿಸ್ತಾನ & ಐಸಿಸ್ ಜೊತೆ ನಂಟು ಆರೋಪ : ಕಲಬುರ್ಗಿಯಲ್ಲಿ ಇಬ್ಬರು ಶಂಕಿತರು ಅರೆಸ್ಟ್!BREAKING : ಬೆಂಗಳೂರಿನ ವಾಹನ ಸವಾರರಿಗೆ ಬಿಗ್ ಶಾಕ್: ಹೊಸ ಪಾರ್ಕಿಂಗ್ ನೀತಿಗೆ ಶೀಘ್ರವೇ ಕರಡು ಅಧಿಸೂಚನೆ!BIG NEWS: ಬೆಂಗಳೂರಿನ ಮಾಲೀಕರಿಗೆ GBA ಶಾಕ್: 'ಉಚಿತ ಪಾರ್ಕಿಂಗ್‌'ಗೆ ಬ್ರೇಕ್, ಗಂಟೆಗಳ ಲೆಕ್ಕದಲ್ಲಿ ಶುಲ್ಕ ಫಿಕ್ಸ್!ಪರಪ್ಪನ ಅಗ್ರಹಾರದ ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ ಬಗ್ಗೆ ಡಿಐಜಿ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ!ವಿಧಾನಪರಿಷತ್ತಿನ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ, ಬಿಜೆಪಿಯ ಮೇಲ್ಮನೆ ಸದಸ್ಯ ಪಿ.ಹೆಚ್. ಪೂಜಾರ್ಧಾರವಾಡ : ಅತಿಯಾಗಿ ಮೊಬೈಲ್ ಬಳಸಬೇಡ ಎಂದು ಬುದ್ಧಿ ಹೇಳಿದಕ್ಕೆ, ವಿಷ ಸೇವಿಸಿ ಯುವತಿ ಆತ್ಮಹತ್ಯೆಗೆ ಶರಣು!BIG NEWS : ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಜಡ್ಜ್ ಗಳ ಮನಗೆದ್ದು, ಈ ಇಬ್ಬರು ಅಚ್ಚರಿ ರೀತಿ ಎಂಟ್ರಿ!BREAKING : ರೇಣುಕಾ ಸ್ವಾಮಿ ಕೊಲೆ ಪ್ರಕರಣ: 59ನೇ CCH ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ನಟ ದರ್ಶನ್BIG NEWS : ಜೈಲಲ್ಲಿ ಸಿಕ್ಕ ಮೊಬೈಲ್ ನಲ್ಲೂ ಅಶ್ಲೀಲ ವಿಡಿಯೋ ಪತ್ತೆ : VIP ಸೆಲ್ ನಿಂದ ಪ್ರಜ್ವಲ್ ಎತ್ತಗಂಡಿ!