ಕಲಬುರ್ಗಿ : ಪಾಕಿಸ್ತಾನ ಹಾಗೂ ಐಸಿಸ್ ಜೊತೆ ನಂಟು ಆರೋಪದ ಅಡಿ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಲಬುರ್ಗಿ ತಾಲೂಕಿನ ಮಾಲಗತ್ತಿ ಗ್ರಾಮದವಳಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದಿಂದ ಇಬ್ಬರನ್ನು ಅರೆಸ್ಟ್ ಮಾಡಿ ಇದೀಗ ವಿಚಾರಣೆಗೊಳಪಡಿಸಲಾಗಿದೆ.
ಉತ್ತರ ಪ್ರದೇಶದ ಮೂಲದ ಮೊಹಮ್ಮದ್ ಸಮೀರ್ ಮತ್ತು ಸಲ್ಮಾನ್ ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಮಾಂಸ ಫೇರ್ ಎಕ್ಸ್ಪೋರ್ಟ್ ಫ್ಯಾಕ್ಟರಿಯಲ್ಲಿ ಆರೋಪಿಗಳು ಕೆಲಸ ಮಾಡುತ್ತಿದ್ದರು. ಕೆಲಸ ಮಾಡುತ್ತಿದ್ದ ಮೊಹಮ್ಮದ್ ಸಮೀರ್ ಮತ್ತು ಸಲ್ಮಾನ್ನು ಇದೀಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಾಟ್ಸಪ್ ಮತ್ತು ಫೇಸ್ಬುಕ್ ಮೂಲಕ ಪಾಕಿಸ್ತಾನದ ಹಾಗೂ ಐಸಿಸಿ ಜೊತೆಗೆ ಸಂಪರ್ಕ ಬೆಳೆಸಿದ್ದಾರೆ ಎನ್ನಲಾಗಿದೆ. ಸಮೀರ್ ಉಳಿದಿಕೊಂಡಿದ್ದ ರೂಮ್ನಲ್ಲಿ ಕೆಲವು ಮ್ಯಾಪ್ಗಳು ಸಹ ಪತ್ತೆಯಾಗಿದ್ದವು ಎಂದು ತಿಳಿದುಬಂದಿದೆ.