LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರುಚಿಕರವಾದ ತವಾ ಪನ್ನೀರ್ ಮಸಾಲ ಮಾಡುವ ವಿಧಾನ

ಪನ್ನೀರಿನಿಂದ ತಯಾರಿಸಲಾಗುವ ವಿಶೇಷ ತಿನಿಸುಗಳು ಹಲವು. ಅವುಗಳಲ್ಲಿ ತವಾ ಪನ್ನೀರ್ ಮಸಾಲವೂ ಒಂದು. ಇದು ಸೊಗಸಾದ ಪರಿಮಳ ಹಾಗೂ ಅದ್ಭುತ ರುಚಿಯಿಂದ ಕೂಡಿರುತ್ತದೆ.

ಬೇಕಾಗುವ ಸಾಮಾಗ್ರಿಗಳು : ಕತ್ತರಿಸಿದ ಪನ್ನೀರ್ – 2 ಕಪ್, ಟೊಮೆಟೊ – 4-5, ಶುಂಠಿ – ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಕೆಂಪು ಮೆಣಸು – 1 ಚಮಚ, ಬೆಣ್ಣೆ ಸ್ವಲ್ಪ, ಮೆಂತೆ ಪುಡಿ – ಒಂದು ಚಿಟಕಿ, ಕೆನೆ -1 ಟೇಬಲ್ ಚಮಚ, ವಿನೆಗರ್‌ನಲ್ಲಿ ನೆನೆಸಿದ ಬೀಟ್ರೂಟ್ ಹೋಳುಗಳು – 1/2 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಷ್ಟು ತುಪ್ಪ, ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ : ಟೊಮೆಟೋವನ್ನು 10-12 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಬೆಂದ ಟೊಮೆಟೊ ತಣ್ಣಗಾದ ಮೇಲೆ ಅದನ್ನು ನುಣ್ಣಗೆ ರುಬ್ಬಿ, ಪಕ್ಕಕ್ಕೆ ಇಡಿ. ಒಂದು ಪಾತ್ರೆಯಲ್ಲಿ ಬೆಣ್ಣೆಯನ್ನು ಹಾಕಿ ಕರಗಲು ಬಿಡಿ. ಅದಕ್ಕೆ ಕೆಂಪು ಮೆಣಸನ್ನು ಸೇರಿಸಿ. ಬೆಣ್ಣೆ ಮತ್ತು ಮೆಣಸನ್ನು ಟೊಮೆಟೋ ಪೇಸ್ಟ್ ಗೆ ಸೇರಿಸಿ, ಕುದಿಯಲು ಇಡಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಮತ್ತು ವಿನೆಗರ್‌ನಲ್ಲಿ ನೆನೆಸಿಕೊಂಡ ಬೀಟ್ರೂಟ್ ಅನ್ನು ಸೇರಿಸಿ, ಕತ್ತರಿಸಿಕೊಂಡ ಪನ್ನೀರ್ ಅನ್ನು ಸ್ವಲ್ಪ ಹುರಿದು ಗ್ರೇವಿಗೆ ಸೇರಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಂತೆ ಪುಡಿ, ಕೆನೆ ಮತ್ತು ತುಪ್ಪ ಸೇರಿಸಿ, ಸ್ವಲ್ಪ ಸಮಯ ಕುದಿಯಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿ ಇರುವಾಗಲೇ ಅನ್ನ ಅಥವಾ ಚಪಾತಿಯೊಂದಿಗೆ ಸವಿಯಲು ನೀಡಿ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾನಸಿಕ ಆರೋಗ್ಯ ಕಾಯ್ದೆ ಕುರಿತು ಅರಿವು ಅಗತ್ಯ ಸತ್ರ ನ್ಯಾಯಾಧೀಶ ರೋಣ ವಾಸುದೇವ.!ಪಿಎಂ ಕಿಸಾನ್‌ ಯೋಜನೆ: ಖಾತೆಗೆ 2000 ರೂ.ಕೇಂದ್ರ ಬಜೆಟ್-2025-26: ಕರ್ನಾಟಕದ ಬೇಡಿಕೆಗಳೇನು..? ಇಲ್ಲಿದೆ ಮಾಹಿತಿಬೆಂಗಳೂರು – ಮಂಗಳೂರು ಬಸ್ಸು ತಡೆದು ಮಾರಕಾಸ್ತ್ರದಿಂದ ಹಲ್ಲೆ- ಪುಡಿ ರೌಡಿಯ ಕಾಲಿಗೆ ಗುಂಡೇಟು, ಅರೆಸ್ಟ್‌'ವಿದೇಶಿ ಶಕ್ತಿಗಳಿಲ್ಲದೆ ನಡೆಯುವ ಮೊದಲ ಅಧಿವೇಶನ'- ರಾಹುಲ್​ಗೆ ಮೋದಿ ತಿರುಗೇಟು'ಮಾರಣಾಂತಿಕ ಗಂಭೀರ ರೋಗದಿಂದ ಬಳಲುತ್ತಿರುವವರಿಗೆ ದಯಾಮರಣ ಹಕ್ಕು'- ರಾಜ್ಯ ಸರ್ಕಾರ ಮಹತ್ವದ ಆದೇಶನಾಳೆಯಿಂದ ವಿಶೇಷ ಅಕ್ಷರ- ಚಿಹ್ನೆ ಹೊಂದಿರುವ ಯುಪಿಐ ಐಡಿಯಿಂದ ಹಣ ಸ್ವೀಕಾರ ಆಗುವುದಿಲ್ಲಇಸ್ರೇಲಿ ವೈಮಾನಿಕ ದಾಳಿಯಲ್ಲಿ ಮೊಹಮ್ಮದ್ ಡೀಫ್ ಸಾವನ್ನಪ್ಪಿರುವುದು ದೃಢಗೃಹ ಸಚಿವ ಕೊಠಡಿಯಲ್ಲಿ ನಾಲ್ವರು ಸಚಿವ ರಹಸ್ಯ ಸಭೆ: ಕುತೂಹಲ ಮೂಡಿಸಿದ ನಡೆಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಸಮಾರಂಭ ರದ್ದು