LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಅಡಿಪಾಯ ತೆಗೆಯುವಾಗ ಸಿಕ್ತು ಕೆಜಿ ಅಷ್ಟು ಬಂಗಾರ.!

 

ಗದಗ:  ಮನೆಯ ಅಡಿಪಾಯ ತೆಗೆಯುವಾಗ ತಂಬಿಗೆಯೊಂದರಲ್ಲಿ ಒಂದು ಕೆ.ಜಿಯಷ್ಟು ನಿಧಿ ಪತ್ತೆಯಾಗಿರುವ ಘಟನೆ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ.

ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ್ ರಿತ್ತಿ ಎಂಬುವವರ ಮನೆಯ ಜಾಗದಲ್ಲಿ ನಿಧಿ ಪತ್ತೆಯಾಗಿದೆ. ಮನೆ ಕಟ್ಟಲೆಂದು ಅಡಿಪಾಯ ತೆಗೆಯುತ್ತಿದ್ದ ವೇಳೆ ತಂಬಿಗೆಯಲ್ಲಿ ನಿಧಿ ಪತ್ತೆಯಾಗಿದೆ. ಸುಮಾರು ಒಂದು ಕೆ.ಜಿಯಷ್ಟು ಬಂಗಾರದ ಒಡವೆ, ಗಟ್ಟಿ ಸೇರಿದಂತೆ ಚಿನ್ನಾಭರಣಗಳು ಸಿಕ್ಕಿವೆ.

ತಂಬಿಗೆಯಲ್ಲಿ ಸಿಕ್ಕ ನಿಧಿಯನ್ನು ಮನೆಯವರು ಗ್ರಾಮದ ಗಣೇಶ ದೇಗುಲದಲ್ಲಿ ಇಟ್ಟಿದ್ದಾರೆ. ಬಳಿಕ ಪೊಲೀಸರು ಹಾಗೂ ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಲಕ್ಕುಂಡಿ ಗ್ರಾಮಕ್ಕೆ ತಹಶಿಲ್ದಾರ್, ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು, ನಿಧಿ ಸಿಕ್ಕ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ನಿಧಿ ಸಿಕ್ಕಿರುವ ಜಾಗಕ್ಕೆ ಹಾಗೂ ನಿಧಿ ನೋಡಲು ಭಾರಿ ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬರುತ್ತಿದೆ. ನಿಧಿಯನ್ನು ಇಟ್ಟಿರುವ ಗಣೇಶ ದೇಗುಲಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 10-02-2026 .!ವಚನ:- --ಬಿಬ್ಬಿ ಬಾಚಯ್ಯ ..!ಅಪ್ಪರ್ ಭದ್ರಾ ಯೋಜನೆ ಪ್ರಾರಂಭಕ್ಕೆ ರಾಜಕೀಯ ಇಚ್ಚಾಶಕ್ತಿ ಕೊರತೆ: ಈಚಘಟ್ಟದ ಸಿದ್ದವೀರಪ್ಪಬಿಜೆಪಿ ಜಿಲ್ಲಾ ಘಟಕಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ ಪಟ್ಟಿ ಇಲ್ಲಿದೆ.!ಕಬೀರಾನಂದಾಶ್ರಮ: ಫೆ. 11 ರಿಂದ 15ರವರೆಗೆ 96ನೇ ಮಹಾ ಶಿವರಾತ್ರಿ ಮಹೋತ್ಸವಬೆಳಗಟ್ಟ: ಫೆ.19ರಂದು ಶ್ರೀಗುರು ಕರಿಬಸವೇಶ್ವರಜ್ಜಯ್ಯ ಸ್ವಾಮಿಯ ಮಹಾರಥೋತ್ಸವಮಂಗಳೂರು: ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ : ಚೂರಿ ಇರಿದು ಪರಾರಿಯಾದ ದುಷ್ಕರ್ಮಿಗಳು…!!ಬ್ಯಾಂಕ್ ಆಫ್ ಬರೋಡಾದಲ್ಲಿ 419 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ'ಶೀಘ್ರದಲ್ಲೇ ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸೇವೆ ಆರಂಭ'- ಅಶ್ವಿನಿ ವೈಷ್ಣವ್ಸರಗಳ್ಳರಿದ್ದಾರೆ ಎಚ್ಚರ.! ಕುಸಿದು ಬಿದ್ದ ಮಹಿಳೆಸಾವು