ಉಡುಪಿ: ದಕ್ಷಿಣ ಭಾರತದ ಖ್ಯಾತ ನಟಿ ಪೂಜಾ ಹೆಗ್ಡೆ ತಮ್ಮ ಮೂಲವಾದ ಉಡುಪಿ ಜಿಲ್ಲೆಯ ಕುತ್ಯಾರು ಮೂಲದಬೆಟ್ಟು ನಾಗ ಬ್ರಹ್ಮಸ್ಥಾನದಲ್ಲಿ ನಡೆದ ಪವಿತ್ರ ಡೆಕ್ಕೆ ಬಲಿ ಸೇವೆಯಲ್ಲಿ ಭಾಗವಹಿಸಿ ಭಕ್ತರ ಗಮನ ಸೆಳೆದಿದ್ದಾರೆ.
ಚಿತ್ರರಂಗದಲ್ಲಿ ಎತ್ತರಕ್ಕೇರಿದರೂ ತಮ್ಮ ಸಂಸ್ಕೃತಿ ಹಾಗೂ ಪರಂಪರೆಯ ನಂಟನ್ನು ಉಳಿಸಿಕೊಂಡಿರುವ ಪೂಜಾ, ಅಪ್ಪಟ ‘ಕುಡ್ಲದ ಪೊಣ್ಣು’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕುತ್ಯಾರು ಮೂಲದಬೆಟ್ಟು ನಾಗ ಬ್ರಹ್ಮಸ್ಥಾನದಲ್ಲಿ ಸಂಪ್ರದಾಯಬದ್ಧವಾಗಿ ನಡೆದ ಡೆಕ್ಕೆ ಬಲಿ ಸೇವೆಯಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡ ಅವರು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸ್ಥಳೀಯರೊಂದಿಗೆ ಸರಳವಾಗಿ ಬೆರೆತ ಪೂಜಾ, ನಾಗದರ್ಶನ ಮತ್ತು ಡಮರು ಮೇಳದ ನಡುವೆ ನಡೆದ ಈ ಸೇವೆಯಲ್ಲಿ ಭಕ್ತಿ ಭಾವ ಮೆರೆದರು.