K2kannadanews.in
Health Tip's ಆರೋಗ್ಯ ಭಾಗ್ಯ : ನಮ್ಮ ಮನೆಯಲ್ಲಿ ಸಿಗುವ ವಸ್ತುಗಳು ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳು ತಮ್ಮ ಪ್ರಯೋಜನಗಳು ಸಿಗುವುದು ಅನೇಕರಿಗೆ ತಿಳಿದಿಲ್ಲ. ಮುಖ್ಯವಾಗಿ ಚಳಿಗಾಲದಲ್ಲಿ ಕಾಣಿಸುವ ಕೆಮ್ಮ ಮತ್ತು ಜೀರ್ಣಕ್ರಿಯೆಗೆ ರಾಮಬಾಣದಂತೆ ಕೆಲಸ ಮಾಡುತ್ತವೆ.
https://youtu.be/4M131IDgnpc?si=2baTSfNDWjV8_g8j
ಬೆಲ್ಲ ಮತ್ತು ಓಮ ಕಾಳನ್ನು ಒಟ್ಟಿಗೆ ನಿಯಮಿತವಾಗಿ ಸೇವಿಸುವುದರಿಂದ ಆಗುವ ಪ್ರಯೋಜನೆಗಳು...
* ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ : ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿ, ಮಲಬದ್ಧತೆಯ ಸಮಸ್ಯೆ ಸುಧಾರಿಸಬೇಕಾದರೆ ಬೆಲ್ಲ ಮತ್ತು ಓಮ ಕಾಳನ್ನು ಸೇವಿಸಬಹುದು.
* ಶೀತ ಮತ್ತು ಕೆಮ್ಮಿಗೆ ಉಪಶಮನ :
ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ಹೋಗಲಾಡಿಸಲು ಬೆಲ್ಲ ಮತ್ತು ಓಮಕಾಳನ್ನು ಸೇವಿಸಬೇಕು.ಇದು ನಿಮಗೆ ಗಂಟಲು ನೋವು, ಕೆಮ್ಮು, ನೆಗಡಿಯಿಂದ ತ್ವರಿತ ಪರಿಣಾಮ ಬೀರುತ್ತದೆ.
* ಬೆನ್ನು ನೋವಿನಿಂದ ಪರಿಹಾರ : ಬೆಲ್ಲ ಮತ್ತು ಓಮಕಾಳು ಬೆನ್ನುನೋವಿಗೆ ಪರಿಹಾರವಾಗಿ ಕೆಲಸ ಮಾಡುತ್ತದೆ. ಪ್ರತಿದಿನ ಮಲಗುವ ಮುನ್ನ ಅರ್ಧ ಟೀಚಮಚ ಓಮಕಾಳು ಮತ್ತು ಬೆಲ್ಲವನ್ನು ಉಗುರುಬೆಚ್ಚಗಿನ ನೀರಿಗೆ ಬೆರೆಸಿ ಸೇವಿಸಬೇಕು. ಹೀಗೆ ಮಾಡುತ್ತಾ ಬಂದರೆ ಬೆನ್ನು ನೋವಿನಿಂದ ಪರಿಹಾರ ಸಿಗುತ್ತದೆ.
* ಪಿರಿಯಡ್ಸ್ ನೋವು : ಪಿರಿಯಡ್ಸ್ ಸಮಯದಲ್ಲಿನ ಕಾಡುವ ನೋವಿಗೆ ಬೆಲ್ಲ ಮತ್ತು ಓಮಕಾಳು ಪರಿಹಾರ ನೀಡುತ್ತದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿನ ರಕ್ತದ ಹರಿವನ್ನು ಸುಧಾರಿಸಬಹುದು. ಇದು ಪಿರಿಯಡ್ಸ್‌ನಲ್ಲಿ ಕಾಣಿಸುವ ನೋವು ಮತ್ತು ಸೆಳೆತದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
https://youtu.be/TKIhYTiyJHY?si=bfGaoomb7Fo7P_3J
* ಅಸ್ತಮಾದಿಂದ ಪರಿಹಾರ :
ಬೆಲ್ಲ ಮತ್ತು ಓಮಕಾಳು ಅಸ್ತಮಾದಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಪ್ರಯೋಜನಕಾರಿ ಎನ್ನಲಾಗಿದೆ. ಬೆಲ್ಲ ಮತ್ತು ಓಮಕಾಳು ಶ್ವಾಸಕೋಶದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ.ದಿನಕ್ಕೆ 4 ರಿಂದ 5 ಗ್ರಾಂ ಓಮಕಾಳನ್ನು ತಿನ್ನಬಹುದು.ಇದರಿಂದ ಸಾಕಷ್ಟು ಅನುಕೂಲವಾಗಲಿದೆ.