Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮಹಿಳೆಯರ ಮೇಲಿನ ಹಲ್ಲೆ ಪ್ರಕರಣಗಳಿಗೆ ಮದ್ಯವೇ ಪ್ರಮುಖ ಕಾರಣ: ಅಬಕಾರಿ ಇಲಾಖೆ ವರದಿ

ಹೈಲೈಟ್ಸ್‌:
ರಾಜ್ಯದಲ್ಲಿ ಮದ್ಯಾಸಕ್ತಿಯಿಂದ ಮಹಿಳೆಯರ ಮೇಲಿನ ಗೃಹಹಿಂಸೆ ಪ್ರಕರಣಗಳು ಏರಿಕೆ
ಮದ್ಯ ಸೇವನೆ ಮಾಡುವ ಪತಿಯರಿಂದ ಪತ್ನಿಯರ ಮೇಲಿನ ದೌರ್ಜನ್ಯ ಹೆಚ್ಚಳ ಎಂಬ ಆತಂಕಕಾರಿ ಅಂಶ ಬಹಿರಂಗ
ಅಬಕಾರಿ ಸುಧಾರಣಾ-2026 ವರದಿ ಹಾಗೂ ವೈದ್ಯಕೀಯ ಅಧ್ಯಯನದಲ್ಲಿ ಮದ್ಯ ವ್ಯಸನದ ಕರಾಳ ಪರಿಣಾಮ ಬಯಲು

ಬೆಂಗಳೂರು: ರಾಜ್ಯದ ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಜನರು ಮದ್ಯಾಸಕ್ತರಾಗಿದ್ದು, ಈ ವ್ಯಸನವು ಕುಟುಂಬಗಳ ಮೇಲೆ ಗಂಭೀರ ಸಾಮಾಜಿಕ ಪರಿಣಾಮ ಬೀರುತ್ತಿದೆ ಎಂಬ ಸಂಗತಿ ಅಬಕಾರಿ ಸುಧಾರಣಾ-2026 ವರದಿಯಲ್ಲಿ ಬೆಳಕಿಗೆ ಬಂದಿದೆ. ವಿಶೇಷವಾಗಿ ವಿವಾಹಿತ ಮಹಿಳೆಯರ ಮೇಲಿನ ದೈಹಿಕ ಹಿಂಸೆ ಮತ್ತು ಗೃಹ ದೌರ್ಜನ್ಯ ಪ್ರಕರಣಗಳಲ್ಲಿ ಮದ್ಯಪಾನದ ನೇರ ಸಂಬಂಧ ಕಂಡುಬಂದಿದೆ.

ಅಬಕಾರಿ ವಲಯದ ಅಭಿವೃದ್ಧಿ ಹಾಗೂ ಮದ್ಯಪಾನದ ಸಾಮಾಜಿಕ ಪರಿಣಾಮಗಳ ಅಧ್ಯಯನಕ್ಕಾಗಿ ರಚಿಸಲಾದ ಸಂಪನ್ಮೂಲ ಕ್ರೋಢೀಕರಣ ಸಮಿತಿಯ ವರದಿಯ ಆಧಾರದಲ್ಲಿ ಸರ್ಕಾರ ಈ ವರದಿಯನ್ನು ಪ್ರಕಟಿಸಿದೆ. ಕರ್ನಾಟಕವು ದೇಶದ ವೇಗವಾಗಿ ವಿಸ್ತರಿಸುತ್ತಿರುವ ಮದ್ಯ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ರಾಜ್ಯದ ಆರ್ಥಿಕತೆಗೆ ಮಹತ್ವದ ಆದಾಯ ತಂದುಕೊಡುತ್ತಿದ್ದರೂ, ಅದರ ದುಷ್ಪರಿಣಾಮಗಳು ಸಮಾಜದಲ್ಲಿ ಆತಂಕ ಮೂಡಿಸುತ್ತಿವೆ ಎಂದು ವರದಿ ತಿಳಿಸಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಅಂಕಿಅಂಶಗಳನ್ನು ಆಧರಿಸಿ ಸಿದ್ಧಪಡಿಸಿದ ವರದಿಯ ಪ್ರಕಾರ, ಮದ್ಯಪಾನ ಮಾಡುವ ಪುರುಷರು ಪತ್ನಿ ಹಾಗೂ ಕುಟುಂಬದ ಮಹಿಳಾ ಸದಸ್ಯರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ದೌರ್ಜನ್ಯ ನಡೆಸುತ್ತಿದ್ದಾರೆ. ಪ್ರತಿದಿನ ಮದ್ಯ ಸೇವಿಸಿ ಮನೆಗೆ ಬರುವ ಪುರುಷರಲ್ಲಿ ಶೇ.71ರಷ್ಟು ಮಂದಿ ಪತ್ನಿಯರ ಮೇಲೆ ಹಿಂಸೆ ಎಸಗುತ್ತಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.

ಸಾಂದರ್ಭಿಕವಾಗಿ ಮದ್ಯ ಸೇವಿಸುವವರಲ್ಲಿ ಶೇ.46ರಷ್ಟು ಹಾಗೂ ವ್ಯಸನ ಇದ್ದರೂ ಮನೆಗೆ ಮದ್ಯ ಸೇವಿಸಿ ಬಾರದವರಲ್ಲಿ ಶೇ.33ರಷ್ಟು ಮಂದಿ ಪತ್ನಿಯರ ಮೇಲೆ ಹಿಂಸಾಚಾರ ನಡೆಸುತ್ತಿರುವುದು ಕಂಡುಬಂದಿದೆ. ಮದ್ಯ ಸೇವಿಸದವರಲ್ಲಿಯೂ ಶೇ.23ರಷ್ಟು ಮಂದಿ ಪತ್ನಿಯರನ್ನು ಕಿರುಕುಳ ನೀಡುತ್ತಿರುವುದು ವರದಿಯಲ್ಲಿ ಉಲ್ಲೇಖವಾಗಿದ್ದು, ಸೇವನೆಯ ಪ್ರಮಾಣ ಮತ್ತು ನಶೆಯ ತೀವ್ರತೆ ಹಿಂಸಾಚಾರದ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಶೇ.11ರಷ್ಟು ಮಂದಿ ಮದ್ಯ ಸೇವನೆ ಮಾಡುವವರಾಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದ್ದರೂ, ತಲಾ ಮದ್ಯ ಸೇವನೆಯ ಪ್ರಮಾಣ ರಾಜ್ಯದಲ್ಲಿ ಹೆಚ್ಚು ದಾಖಲಾಗಿದೆ. ಕರ್ನಾಟಕದಲ್ಲಿ ವಾರ್ಷಿಕ ತಲಾ ಮದ್ಯ ಸೇವನೆ 9.1 ಲೀಟರ್ ಇದ್ದು, ದೇಶದ ಸರಾಸರಿ 6.4 ಲೀಟರ್‌ಗೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ.

ಅಬಕಾರಿ ತೆರಿಗೆಯಿಂದ ರಾಜ್ಯದ ಜಿಎಸ್‌ಡಿಪಿಗೆ ಶೇ.1.4ರಷ್ಟು, ಒಟ್ಟು ತೆರಿಗೆ ಆದಾಯಕ್ಕೆ ಶೇ.11ರಷ್ಟು ಹಾಗೂ ಸ್ವಂತ ತೆರಿಗೆ ಆದಾಯಕ್ಕೆ ಶೇ.20.3ರಷ್ಟು ಕೊಡುಗೆ ದೊರೆಯುತ್ತಿದೆ. ದಕ್ಷಿಣ ಭಾರತದ ಐದು ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಮದ್ಯ ಮಾರಾಟದಲ್ಲಿ ದೊಡ್ಡ ಪಾಲು ಹೊಂದಿದೆ ಎಂದು ವರದಿ ವಿವರಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಾಂತ್ವನ ಯೋಜನೆ ಹಾಗೂ ನಿರ್ಭಯಾ ಯೋಜನೆಯ ಒನ್‌ ಸ್ಟಾಪ್‌ ಸೆಂಟರ್‌ಗಳಲ್ಲಿ ದಾಖಲಾಗಿರುವ ಅನೇಕ ಗೃಹಹಿಂಸೆ ಮತ್ತು ವೈವಾಹಿಕ ಕಲಹ ಪ್ರಕರಣಗಳಿಗೆ ಮನೆಗಳಲ್ಲಿ ಮದ್ಯಪಾನದ ವಾತಾವರಣವೇ ಪ್ರಮುಖ ಕಾರಣವಾಗಿರುವುದು ತಿಳಿದುಬಂದಿದೆ.

ಇನ್ನೊಂದೆಡೆ, ನಿಮ್ಹಾನ್ಸ್‌ ವ್ಯಸನ ಕೇಂದ್ರ ನಡೆಸಿದ ಅಧ್ಯಯನದಲ್ಲೂ ಮದ್ಯಾಸಕ್ತ ಪುರುಷರ ಹಿಂಸಾತ್ಮಕ ವರ್ತನೆ ದೃಢಪಟ್ಟಿದೆ. ಪರೀಕ್ಷೆಗೆ ಒಳಪಡಿಸಿದ 150 ಮಂದಿ ಮದ್ಯವ್ಯಸನಿಗಳ ಪೈಕಿ ಬಹುತೇಕರು ತಮ್ಮ ಆಪ್ತ ಸಂಗಾತಿಗಳ ಮೇಲೆ ದೌರ್ಜನ್ಯ ನಡೆಸಿರುವುದು ಕಂಡುಬಂದಿದ್ದು, ಮದ್ಯ ವ್ಯಸನದ ತೀವ್ರತೆ ಹೆಚ್ಚಿದಂತೆ ಹಿಂಸಾಚಾರದ ಪ್ರಮಾಣವೂ ಏರುತ್ತದೆ ಎಂದು ಅಧ್ಯಯನ ತಿಳಿಸಿದೆ.

ಪತ್ನಿಯರ ಮೇಲಿನ ಮದ್ಯವ್ಯಸನಿ ಪುರುಷರ ದೌರ್ಜನ್ಯ ಪ್ರಕರಣಗಳು:
2022-23 : 8,143
2023-24 : 8,171
2024-25 : 8,111
2025-26 : 9,168

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗಮಂಗಲ: ತಾಲೂಕಿನ ರಾ ಹೆ 75ರ ವರಾಹಸಂದ್ರ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ : ಬಸ್ ಚಾಲಕ ದುರ್ಮರಣದೇವರಾಜ್ ಎಂಬ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ, ಪೊಲೀಸ್ ತನಿಖೆಗೆ ಗ್ರಾಮಸ್ಥರ ಒತ್ತಾಯಉತ್ತಮ ವ್ಯಕ್ತಿತ್ವ, ಚಾಣಾಕ್ಷ ಕಾರ್ಯವೈಖರಿ; ವರ್ಗಾವಣೆಯಾದ ಚಾ ವಿ ಸ ನಿ ನಿ ಯ AE ಮತ್ತು ಪ್ರಭಾರ AEE ಅವರಿಗೆ ಭಾವಪೂರ್ಣ ಬೀಳ್ಕೊಡುಗೆಹಾಸನ: ನಿರ್ಮಾಣ ಹಂತದ ಮನೆಯ ಕ್ಯೂರಿಂಗ್ ವೇಳೆ ವಿದ್ಯುತ್ ಅವಘಡ – ಕುಣಿಗಲ್ ಆರ್‌ಎಫ್‌ಒ ಜಗದೀಶ್ ಸಾವುಟಾಟಾ ಪವರ್ ಲೈಸೆನ್ಸ್‌ಗೆ ವಿರೋಧ: ಹೆಚ್.ಡಿ. ರೇವಣ್ಣರಿಂದ ಸಂಪೂರ್ಣ ಬೆಂಬಲವಿದ್ಯುತ್ ವಿತರಣಾ ಖಾಸಗೀಕರಣ ವಿರೋಧಿಸಿ ಸಂಸದರಿಗೆ ಮನವಿಇರಾನ್–ಅಮೆರಿಕ ಶಾಂತಿ ಮಾತುಕತೆ ನಡುವೆ ಖಮೇನಿ ಅಂತ್ಯಕ್ರಿಯೆ ದಿನಾಂಕ ಘೋಷಣೆಮಧ್ಯಪ್ರಾಚ್ಯದಲ್ಲಿ ಕಾಳಗದ ಕಾವು: US ನೌಕಾನೆಲೆ ಮೇಲೆ ಇರಾನ್ ದಾಳಿ, ಪ್ರತೀಕಾರ ಅನಿವಾರ್ಯ ಎಂದ ಟ್ರಂಪ್13 ಕಿ.ಮೀ ಕಾಮಗಾರಿ ಪೂರ್ಣಗೊಂಡ ತುಮಕೂರು–ಚಿತ್ರದುರ್ಗ ರೈಲು ಯೋಜನೆ; ಸಂಪೂರ್ಣ ಮಾರ್ಗ ಯಾವಾಗ ಸಿದ್ಧ?ಬಂಡೀಪುರದಲ್ಲಿ ಭದ್ರತಾ ಲೋಪ: ರೌಡಿ ಶೀಟರ್ ಗ್ಯಾಂಗ್‌ನ ಎಣ್ಣೆ ಪಾರ್ಟಿ ಬಹಿರಂಗ