E-PAPER
23 Nov 2026, 01:17:14 PM|
Gold₹12413/gGold24K ₹12,413/g - 22K ₹11,369/gTap for full detailsWEATHER28°AQI 82WeatherBelagavi · 28° · Mainly clearTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

Bisleri ಕುಡಿಯುವ ನೀರಿನಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ: ಬಿಸ್ಲೆರಿ ಇಂಟರ್‌ನ್ಯಾಷನಲ್ ಹೇಳಿದ್ದೇನು?

ಹೊಸದಿಲ್ಲಿ: ಬಿಸ್ಲೆರಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ನ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿ ʼಸುರಕ್ಷಿತವಲ್ಲʼ ಎಂದು ಪ್ರಯೋಗಾಲಯ ಪರೀಕ್ಷೆಯಲ್ಲಿ ಪತ್ತೆಯಾದ ಬಳಿಕ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ಬಿಸ್ಲೆರಿ ಕಂಪೆನಿಯ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿತ್ತು. ಇದರ ಬೆನ್ನಲ್ಲೆ ಪ್ರತಿಕ್ರಿಯಿಸಿದ ಬಿಸ್ಲೆರಿ, “ಕುಡಿಯುವ ನೀರಿನ ಸುರಕ್ಷತೆ ನಮ್ಮ ಆದ್ಯತೆಯಾಗಿದೆ. ಕಂಪೆನಿಯು ಗುಣಮಟ್ಟದ ನಿಯಂತ್ರಣ ಕ್ರಮಗಳನ್ನು ಪಾಲಿಸುತ್ತಿದೆ. ಈ ವಿಚಾರವನ್ನು ಬಗೆಹರಿಸಲು FSSAI ಜೊತೆ ಸಹಕಾರ ಮುಂದುವರಿಸುತ್ತೇವೆ" ಎಂದು ತಿಳಿಸಿದೆ.

ಪ್ರಯೋಗಾಲಯ ಪರೀಕ್ಷೆಯಲ್ಲಿ ಬಿಸ್ಲೆರಿಯ ಯಾವ ಮಾದರಿಯ ಕುಡಿಯುವ ನೀರು ಸುರಕ್ಷಿತವಲ್ಲ ಎಂದು ಕಂಡುಬಂದಿದೆ ಎಂಬುದನ್ನು FSSAI ಸ್ಪಷ್ಟಪಡಿಸಿಲ್ಲ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ (FSS Act), 2006ರ ಅಡಿಯಲ್ಲಿ ಸುರಕ್ಷಿತವಲ್ಲದ ಪ್ಯಾಕೇಜ್ಡ್ ಕುಡಿಯುವ ನೀರಿಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಗಾಗಿ ಕಂಪೆನಿಯ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಲಾಗಿದೆ ಎಂದು FSSAI ತಿಳಿಸಿದೆ.

ಬಿಸ್ಲೆರಿ ಇಂಟರ್‌ನ್ಯಾಷನಲ್ 'ಮಿನರಲ್ ವಾಟರ್ ಅಲ್ಲದ ಪ್ಯಾಕೇಜ್ಡ್ ಕುಡಿಯುವ ನೀರಿನ' ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಕ್ರಮವು ನಿರ್ದಿಷ್ಟವಾಗಿ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಗೆ ಮಾತ್ರ ಸಂಬಂಧಿಸಿದ್ದು ಹೊರತು ಮಿನರಲ್ ವಾಟರ್‌ಗೆ ಸಂಬಂಧಿಸಿದ್ದಲ್ಲ ಎಂದು FSSAI ತಿಳಿಸಿದೆ.

ಬಿಸ್ಲೆರಿ ಹೇಳಿದ್ದೇನು?

"ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಬಿಸ್ಲೆರಿಗೆ ನೋಟಿಸ್ ನೀಡಿದೆ ಎಂಬ ಇತ್ತೀಚಿನ ಮಾಧ್ಯಮ ವರದಿಗಳ ಬಗ್ಗೆ ನಮಗೆ ತಿಳಿದಿದೆ. ಈ ವಿಷಯವು ಸುಮಾರು 14 ತಿಂಗಳ ಹಿಂದಿನದು. ಅಂದರೆ, 2025ರ ಸೆಪ್ಟೆಂಬರ್‌ನಲ್ಲಿ ಬಿಸ್ಲೆರಿಯ 143 ಉತ್ಪಾದನಾ ಘಟಕಗಳ ಪೈಕಿ ಒಂದಾದ ಗೋವಾದಲ್ಲಿರುವ ಉತ್ಪಾದನಾ ಘಟಕದಲ್ಲಿ ತಯಾರಿಸಿದ ಒಂದು ಬ್ಯಾಚ್‌ಗೆ ಸಂಬಂಧಿಸಿದೆ. 2025ರ ಸೆಪ್ಟೆಂಬರ್ 30ರಂದು FSSAI ಗೋವಾ ಘಟಕದಿಂದ ಆರು ಮಾದರಿಗಳನ್ನು ಸಂಗ್ರಹಿಸಿತ್ತು. ಆರಂಭಿಕ ಪರೀಕ್ಷೆಯಲ್ಲಿ ಐದು ಮಾದರಿಗಳು ಅನ್ವಯವಾಗುವ ಎಲ್ಲ ಮಾನದಂಡಗಳನ್ನು ಪೂರೈಸಿರುವುದು ಕಂಡುಬಂದಿತ್ತು. ಆದರೆ, ಆರನೇ ಮಾದರಿಯಲ್ಲಿ ಪ್ರತಿ ಲೀಟರ್‌ಗೆ 12 ಮೈಕ್ರೋಗ್ರಾಂಗಳಷ್ಟು ಬ್ರೋಮೇಟ್ ಪ್ರಮಾಣ ಇರುವುದು ಕಂಡು ಬಂದಿತ್ತು. ಇದು ಗರಿಷ್ಠ ಮಿತಿ ಪ್ರತಿ ಲೀಟರ್‌ಗೆ 10 ಮೈಕ್ರೋಗ್ರಾಂಗಳಷ್ಟಿರಬೇಕಿತ್ತು.

2025ರ ನವೆಂಬರ್ 22ರಂದು ಬಿಸ್ಲೆರಿ ಸಲ್ಲಿಸಿದ ಮೇಲ್ಮನವಿಯ ಬಳಿಕ, FSSAI ಆ ಮಾದರಿಯನ್ನು ಮರುಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಪ್ರಯೋಗಾಲಯದ ಪರೀಕ್ಷಾ ಮಾದರಿಯಲ್ಲಿನ ಬ್ರೋಮೇಟ್ ಪ್ರಮಾಣ ನಿಗದಿತ ಮಿತಿಯೊಳಗಿರುವುದು ಕಂಡುಬಂದಿತ್ತು. ಆದರೆ, ಅದೇ ಮಾದರಿಯಲ್ಲಿ ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು(PAHs) ಇರುವುದನ್ನು ಪ್ರತ್ಯೇಕವಾಗಿ ಗುರುತಿಸಲಾಗಿತ್ತು. ಎರಡು ಪರೀಕ್ಷೆಗಳ ಫಲಿತಾಂಶಗಳ ನಡುವಿನ ವ್ಯತ್ಯಾಸವು ಸ್ಪಷ್ಟನೆ ಅಗತ್ಯವಿರುವ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಬಿಸ್ಲೆರಿ ಭಾವಿಸಿತ್ತು. ಹೀಗಾಗಿ, ಅದೇ ಮಾದರಿಯನ್ನು FSSAI ಅನುಮೋದಿತ ಪ್ರಯೋಗಾಲಯದಲ್ಲಿ ಸ್ವತಂತ್ರವಾಗಿ ಪರೀಕ್ಷಿಸಲು ಬಿಸ್ಲೆರಿ ವ್ಯವಸ್ಥೆ ಮಾಡಿತ್ತು. ಈ ಪರೀಕ್ಷೆಯಲ್ಲಿಯೂ ಬ್ರೋಮೇಟ್ ಪ್ರಮಾಣ ನಿಗದಿಪಡಿಸಲಾದ ಮಿತಿಯೊಳಗಿರುವುದು ದೃಢಪಟ್ಟಿದೆ" ಎಂದು ತಿಳಿಸಿದೆ.

ನಾವು 2026ರ ಫೆಬ್ರವರಿ 2ರಂದು ಈ ಬಗ್ಗೆ ಔಪಚಾರಿಕ ಪತ್ರದೊಂದಿಗೆ, ಸ್ವತಂತ್ರ ಪರೀಕ್ಷಾ ಫಲಿತಾಂಶಗಳನ್ನು FSSAI ನ ಪಶ್ಚಿಮ ಪ್ರಾದೇಶಿಕ ಕಚೇರಿಗೆ ಸಲ್ಲಿಸಿದ್ದೆವು. ಆ ನಂತರ FSSAI ನಿಂದ ನಮಗೆ ಯಾವುದೇ ಪ್ರತಿಕ್ರಿಯೆ ಅಥವಾ ಮಾಹಿತಿ ಬಂದಿಲ್ಲ. ಆದ್ದರಿಂದ ಈ ವಿಷಯವು ಮುಕ್ತಾಯಗೊಂಡಿದೆ ಎಂದು ನಾವು ಭಾವಿಸಿದ್ದೆವು. ಇಲ್ಲಿಯವರೆಗೆ, ಬಿಸ್ಲೆರಿಗೆ ಇಮೇಲ್ ಮೂಲಕವಾಗಲಿ ಅಥವಾ ಮುದ್ರಿತ ಪ್ರತಿಯ ರೂಪದಲ್ಲಾಗಲೀ ಅಥವಾ FSSAI ವೆಬ್‌ಸೈಟ್‌ನಲ್ಲಿಯೂ ಅಂತಹ ಯಾವುದೇ ನೋಟಿಸ್ ನಮಗೆ ಕಂಡುಬಂದಿಲ್ಲ. ಕುಡಿಯುವ ನೀರಿನ ಸುರಕ್ಷತೆಯು ಬಿಸ್ಲೆರಿಗೆ ಅತ್ಯಂತ ಆದ್ಯತೆಯ ವಿಷಯವಾಗಿದೆ" ಎಂದು ತಿಳಿಸಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಡಾನೆಗಳನ್ನು ಎಲ್ಲಿಗೆ ಸ್ಥಳಾಂತರಿಸಬೇಕೆಂಬುದನ್ನು ಚಿಕ್ಕಮಗಳೂರು ಭಾಗದ ಶಾಸಕರೇ ನಿರ್ಧರಿಸಲಿ : ಸಚಿವ ರಾಮಲಿಂಗಾರೆಡ್ಡಿಚಿನ್ನದ ಬೆಲೆಯಲ್ಲಿ ಏರಿಕೆ; ಇಂದಿನ ದರವೆಷ್ಟು?Bisleri ಕುಡಿಯುವ ನೀರಿನಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ: ಬಿಸ್ಲೆರಿ ಇಂಟರ್‌ನ್ಯಾಷನಲ್ ಹೇಳಿದ್ದೇನು?Tamil Nadu | ತಿರುಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಗೈ ದೀಪ ಬೆಳಗಿಸಲು ಅನುಮತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸರ್ಕಾರದಿಂದ ಅರ್ಜಿ; ಆದೇಶ ಮರುಪರಿಶೀಲನೆಗೆ ಮನವಿ2024ರಲ್ಲಿ ಎನ್‌.ಚಂದ್ರಬಾಬು ನಾಯ್ಡು ಗೆಲುವಿಗಾಗಿ ಸಂಜೆ 6 ಗಂಟೆಯ ನಂತರ ನಂಬಲಸಾಧ್ಯವಾದ ಮತದಾನ ದಾಖಲಿಸಿದ ಚುನಾವಣಾ ಆಯೋಗ; ನಂತರ ತನಿಖೆಯನ್ನೇ ನಡೆಸಲಿಲ್ಲ!ಇಂದು ರಾತ್ರಿಯೊಳಗೆ ಕಾಡಾನೆಗಳನ್ನು ಹಾಸನಕ್ಕೆ ವಾಪಸ್ ಕಳುಹಿಸದಿದ್ದರೆ ನಾಳೆ ರಾಜೀನಾಮೆ: ಶಾಸಕಿ ನಯನ ಮೋಟಮ್ಮ