E-PAPER
23 Nov 2026, 01:17:14 PM|
Gold₹12413/gGold24K ₹12,413/g - 22K ₹11,369/gTap for full detailsWEATHER28°AQI 82WeatherBelagavi · 28° · Mainly clearTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಚಿನ್ನದ ಬೆಲೆಯಲ್ಲಿ ಏರಿಕೆ; ಇಂದಿನ ದರವೆಷ್ಟು?

ಡಾಲರ್ ಮೌಲ್ಯದ ಏರಿಳಿತ ಮತ್ತು ಒಟ್ಟು ಹಣಕಾಸು ಮಾರುಕಟ್ಟೆಯ ಬೆಳವಣಿಗೆಗಳಿಂದ ಚಿನ್ನದ ದರ ತೀವ್ರ ಒತ್ತಡ ಎದುರಿಸಿದೆ.

ನ. 9ರಿಂದ ಸತತ ಕುಸಿತದ ಹಾದಿಯಲ್ಲಿದ್ದ ಚಿನ್ನದ ದರ ಇಂದು ಸ್ವಲ್ಪ ಏರಿಕೆ ಕಂಡಿದೆ. ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಕಂಡುಬಂದಿದ್ದ ಗರಿಷ್ಠ ಮಟ್ಟದಿಂದ ಚಿನ್ನದ ಬೆಲೆಯು ಸುಮಾರು ಶೇ. 33ರಷ್ಟು ಕುಸಿದಿದೆ. ಜನವರಿ ನಂತರದಲ್ಲಿ ಜಾಗತಿಕ ಭೌಗೋಳಿಕ- ರಾಜಕೀಯ ಉದ್ವಿಗ್ನತೆಗಳ ನಡುವೆ ಚಿನ್ನ-ಬೆಳ್ಳಿ ದರ ಕುಸಿತದ ಹಾದಿಯಲ್ಲಿದೆ. 2026ರ ಆರಂಭದಲ್ಲಿ ಚಿನ್ನ ಪ್ರತಿ 10 ಗ್ರಾಂಗೆ 1.8 ಲಕ್ಷದ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು. ನಂತರ ಬೆಲೆ ಇಳಿಕೆಗೆ ತಡೆಯೇ ಕಾಣುತ್ತಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸುಮಾರು ಶೇ 37ರಷ್ಟು ಕುಸಿದಿದ್ದು, ಕಳೆದ ಒಂದು ವರ್ಷದಲ್ಲೇ ಅತ್ಯಂತ ಕನಿಷ್ಠ ದರಕ್ಕೆ ಇಳಿದಿದೆ. ಡಾಲರ್ ಮೌಲ್ಯದ ಏರಿಳಿತ ಮತ್ತು ಒಟ್ಟು ಹಣಕಾಸು ಮಾರುಕಟ್ಟೆಯ ಬೆಳವಣಿಗೆಗಳಿಂದ ಚಿನ್ನದ ದರ ತೀವ್ರ ಒತ್ತಡ ಎದುರಿಸಿದೆ.

ಒಂದು ವರ್ಷಕ್ಕೂ ಹೆಚ್ಚಿನ ಅವಧಿಯ ಕನಿಷ್ಠ ಮಟ್ಟಕ್ಕೆ ಕುಸಿದ ನಂತರ ಈ ವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮತ್ತಷ್ಟು ಮಾರಾಟದ ಒತ್ತಡ ಎದುರಿಸಬಹುದು. ಬಡ್ಡಿದರಗಳು ಯಾವ ದಿಕ್ಕಿನಲ್ಲಿ ಸಾಗುತ್ತಿವೆ ಎಂಬುದರ ಸುಳಿವುಗಳಿಗಾಗಿ ಹೂಡಿಕೆದಾರರು ಅಮೆರಿಕದ ಹಣದುಬ್ಬರ ಅಂಕಿ-ಅಂಶಗಳು ಮತ್ತು ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್‌ನ ಸಂಕೇತಗಳನ್ನು ಗಮನಿಸಲಿದ್ದಾರೆ. ಫೆಡ್‌ನ ಹಣಕಾಸು ನೀತಿಯ ಕುರಿತ ನಿರೀಕ್ಷೆಗಳನ್ನು ರೂಪಿಸುವಲ್ಲಿ ಹಣದುಬ್ಬರದ ದತ್ತಾಂಶವು ಮಹತ್ವದ್ದಾಗಿರುತ್ತದೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರ ಹೆಚ್ಚಿಸಬಹುದು ಎಂಬ ನಿರೀಕ್ಷೆಯಿಂದ ಡಾಲರ್ ಮೌಲ್ಯ ಹೆಚ್ಚಾಗಿದೆ. ಸಾಮಾನ್ಯವಾಗಿ ಡಾಲರ್ ಬಲಗೊಂಡಾಗ ಚಿನ್ನದ ಬೆಲೆ ಇಳಿಯುತ್ತದೆ. ಹಣದುಬ್ಬರ ನಿಯಂತ್ರಣಕ್ಕೆ ಬಾರದ ಕಾರಣ ಸರ್ಕಾರಿ ಬಾಂಡ್‌ಗಳ ಲಾಭಾಂಶ ಹೆಚ್ಚಾಗುತ್ತದೆ. ಚಿನ್ನ ಯಾವುದೇ ಬಡ್ಡಿ ನೀಡದ ಕಾರಣ ಹೂಡಿಕೆದಾರರು ಚಿನ್ನದ ಬದಲು ಬಾಂಡ್‌ಗಳತ್ತ ತಿರುಗುತ್ತಿದ್ದಾರೆ. ಒಟ್ಟು ಷೇರು ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ನಷ್ಟ ಉಂಟಾದಾಗ ಹೂಡಿಕೆದಾರರು ನಷ್ಟ ಸರಿದೂಗಿಸಲು ಅಥವಾ ನಗದು ಹೊಂದಿಸಲು ಚಿನ್ನವನ್ನು ಅನಿವಾರ್ಯವಾಗಿ ಮಾರುತ್ತಿದ್ದಾರೆ. ಇದು ಬೆಲೆಯನ್ನು ಮತ್ತಷ್ಟು ಕೆಳಕ್ಕೆ ತಳ್ಳಿದೆ.

ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ:

ನವೆಂಬರ್ 23ರಂದು ಸೋಮವಾರ 11 ಗಂಟೆಯ ವಹಿವಾಟಿನಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶನಿವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 148 ರೂ. ಏರಿಕೆಯಾಗಿದ್ದು, ಹತ್ತು ಗ್ರಾಂ ಬೆಲೆ 1,26,560 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 135 ರೂ. ಏರಿದ್ದು, ಹತ್ತು ಗ್ರಾಂಗೆ 1,16,000 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 110 ರೂ. ಹೆಚ್ಚಾಗಿ, ಹತ್ತು ಗ್ರಾಂಗೆ 94,910 ರೂ. ಗೆ ತಲುಪಿದೆ.

ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?

ನವೆಂಬರ್ 23ರಂದು ಸೋಮವಾರ ಬೆಳಗಿನ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಸ್ವಲ್ಪ ಏರಿಕೆ ದಾಖಲಿಸಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 12,656 (+148) ರೂ. ರಷ್ಟಕ್ಕೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 11,600 (+135) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ 9,491 (+110) ರೂ. ಬೆಲೆಗೆ ಬಂದು ನಿಂತಿದೆ.

ಬೆಳ್ಳಿಯ ದರದಲ್ಲಿ ಸ್ಥಿರತೆ

ಜನವರಿಯಲ್ಲಿ ಗರಿಷ್ಠ ಮಟ್ಟಕ್ಕೆ ಹೋಗಿದ್ದ ಬೆಳ್ಳಿಯ ಬೆಲೆ ನಂತರ ಕುಸಿತದ ಹಾದಿಯಲ್ಲಿತ್ತು. ಮಂಗಳೂರಿನಲ್ಲಿ ಜುಲೈ 11ರಿಂದ ಬೆಳ್ಳಿಯ ದರ ಬಹುತೇಕ ಪ್ರತಿ ಕೆಜಿಗೆ 2,35,000 ರೂ.ಗೆ ಸ್ಥಿರವಾಗಿತ್ತು. ಆದರೆ ಆಗಸ್ಟ್ ಆರಂಭದ ವಾರಗಳಲ್ಲಿ ಮತ್ತೆ ಏರಿಕೆಯಾಗಿ ಪ್ರತಿ ಕೆಜಿಗೆ 2,60,000 ರೂ. ವರೆಗೆ ಏರಿತ್ತು. ಆಗಸ್ಟ್ ಕೊನೆ ವಾರದಲ್ಲಿ ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಬೆಳ್ಳಿಯ ದರ ಕುಸಿದು ಪ್ರತಿ ಕೆಜಿಗೆ 2,45,000 ರೂ.ಗೆ ಬಂದು ನಿಂತಿತ್ತು.

ಸೆಪ್ಟೆಂಬರ್ ನಂತರದ ವಾರಗಳಲ್ಲಿ ಸ್ವಲ್ಪ ಏರಿಳಿತ ಕಂಡು, ಅಕ್ಟೋಬರ್ ತಿಂಗಳಲ್ಲಿ ಕುಸಿದ ಬೆಳ್ಳಿಯ ದರ ಅಕ್ಟೋಬರ್ 15ರಂದು ಪ್ರತಿ ಗ್ರಾಂಗೆ 5 ರೂ ಇಳಿದು ಮತ್ತೆ ಪ್ರತಿ ಕೆಜಿಗೆ 2,30,000 ರೂ.ಗೆ ತಲುಪಿ ಸ್ಥಿರವಾಗಿತ್ತು.

ಅಕ್ಟೋಬರ್‌ ತಿಂಗಳ ಅಂತ್ಯದಲ್ಲಿ ಬೆಳ್ಳಿಯ ದರ ಪ್ರತಿ ಕೆಜಿಗೆ 2,00,000 ರೂ.ಗೆ ತಲುಪಿತ್ತು. ನವೆಂಬರ್ 14ರ ನಂತರ ಮತ್ತೆ ನಿರಂತರ ಕುಸಿದಿರುವ ಬೆಳ್ಳಿಯ ದರ ನವೆಂಬರ್ 18ರಂದು ಪ್ರತಿ ಕೆಜಿಗೆ 1,85,000ಕ್ಕೆ ತಲುಪಿತ್ತು. ನವೆಂಬರ್ 19ರಂದು ಮತ್ತೆ ಪ್ರತಿ ಗ್ರಾಂಗೆ 5 ರೂ ಇಳಿದಿರುವ ಬೆಳ್ಳಿಯ ದರ ಪ್ರತಿ ಕೆಜಿಗೆ 1,80,000ಕ್ಕೆ ಇಳಿದಿತ್ತು. ನವೆಂಬರ್ 20ರಂದು ಮತ್ತೆ ಪ್ರತಿ ಗ್ರಾಂಗೆ 5 ರೂ ಇಳಿದಿರುವ ಬೆಳ್ಳಿಯ ದರ ಪ್ರತಿ ಕೆಜಿಗೆ 1,75,000ಕ್ಕೆ ತಲುಪಿದೆ. ಅಂದಿನಿಂದ ಅದೇ ಬೆಲೆಗೆ ಸ್ಥಿರವಾಗಿದೆ.

ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?

ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 12,671 (+148) ರೂ., 22 ಕ್ಯಾರೆಟ್ ಚಿನ್ನದ ದರ 11,615 (+135) ರೂ.

ಮುಂಬೈ: 24 ಕ್ಯಾರೆಟ್ ಚಿನ್ನದ ದರ 12,656 (+148) ರೂ., 22 ಕ್ಯಾರೆಟ್ ಚಿನ್ನದ ದರ 11,600 (+135) ರೂ.

ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 12,661 (+148) ರೂ., 22 ಕ್ಯಾರೆಟ್ ಚಿನ್ನದ ದರ 11,605 (+135) ರೂ.

ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 12,656 (+148) ರೂ., 22 ಕ್ಯಾರೆಟ್ ಚಿನ್ನದ ದರ 11,600 (+135) ರೂ.

ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 12,656 (+148) ರೂ., 22 ಕ್ಯಾರೆಟ್ ಚಿನ್ನದ ದರ 11,600 (+135) ರೂ.

ಹೈದರಾಬಾದ್‌: 24 ಕ್ಯಾರೆಟ್ ಚಿನ್ನದ ದರ 12,656 (+148) ರೂ., 22 ಕ್ಯಾರೆಟ್ ಚಿನ್ನದ ದರ 11,600 (+135) ರೂ.

ಜೈಪುರ: 24 ಕ್ಯಾರೆಟ್ ಚಿನ್ನದ ದರ 12,671 (+148) ರೂ., 22 ಕ್ಯಾರೆಟ್ ಚಿನ್ನದ ದರ 11,615 (+135) ರೂ.

ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 12,671 (+148) ರೂ., 22 ಕ್ಯಾರೆಟ್ ಚಿನ್ನದ ದರ 11,615 (+135) ರೂ.

ಲಖನೌ: 24 ಕ್ಯಾರೆಟ್ ಚಿನ್ನದ ದರ 12,671 (+148) ರೂ., 22 ಕ್ಯಾರೆಟ್ ಚಿನ್ನದ ದರ 11,615 (+135) ರೂ.

ಕೊಚ್ಚಿ: 24 ಕ್ಯಾರೆಟ್ ಚಿನ್ನದ ದರ 12,656 (+148) ರೂ., 22 ಕ್ಯಾರೆಟ್ ಚಿನ್ನದ ದರ 11,600 (+135) ರೂ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಡಾನೆಗಳನ್ನು ಎಲ್ಲಿಗೆ ಸ್ಥಳಾಂತರಿಸಬೇಕೆಂಬುದನ್ನು ಚಿಕ್ಕಮಗಳೂರು ಭಾಗದ ಶಾಸಕರೇ ನಿರ್ಧರಿಸಲಿ : ಸಚಿವ ರಾಮಲಿಂಗಾರೆಡ್ಡಿಚಿನ್ನದ ಬೆಲೆಯಲ್ಲಿ ಏರಿಕೆ; ಇಂದಿನ ದರವೆಷ್ಟು?Bisleri ಕುಡಿಯುವ ನೀರಿನಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ: ಬಿಸ್ಲೆರಿ ಇಂಟರ್‌ನ್ಯಾಷನಲ್ ಹೇಳಿದ್ದೇನು?Tamil Nadu | ತಿರುಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಗೈ ದೀಪ ಬೆಳಗಿಸಲು ಅನುಮತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸರ್ಕಾರದಿಂದ ಅರ್ಜಿ; ಆದೇಶ ಮರುಪರಿಶೀಲನೆಗೆ ಮನವಿ2024ರಲ್ಲಿ ಎನ್‌.ಚಂದ್ರಬಾಬು ನಾಯ್ಡು ಗೆಲುವಿಗಾಗಿ ಸಂಜೆ 6 ಗಂಟೆಯ ನಂತರ ನಂಬಲಸಾಧ್ಯವಾದ ಮತದಾನ ದಾಖಲಿಸಿದ ಚುನಾವಣಾ ಆಯೋಗ; ನಂತರ ತನಿಖೆಯನ್ನೇ ನಡೆಸಲಿಲ್ಲ!ಇಂದು ರಾತ್ರಿಯೊಳಗೆ ಕಾಡಾನೆಗಳನ್ನು ಹಾಸನಕ್ಕೆ ವಾಪಸ್ ಕಳುಹಿಸದಿದ್ದರೆ ನಾಳೆ ರಾಜೀನಾಮೆ: ಶಾಸಕಿ ನಯನ ಮೋಟಮ್ಮ