K2kannadanews.in
MLC election ರಾಯಚೂರು : ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ, ಜೂನ್ 3ರಂದು ನಡೆಯಲಿದ್ದು, ನೊಂದಣಿಯಾದ ಎಲ್ಲಾ ಪದವಿ ಮತದಾರರು, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ರಾಯಚೂರು ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ್ ನಾಯಕ್ ಕರೆ ನೀಡಿದರು.
https://youtu.be/4JwAa_B1VbM?si=ZErZhqMkFZKh9_rd
ರಾಯಚೂರು ಜಿಲ್ಲೆಯ ಆದ್ಯಂತ 20,317 ಹೆಚ್ಚು ಮತದಾರರು ಇದ್ದು, ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ. ಜಿಲ್ಲೆಯ ಆದ್ಯಂತ 30 ಮತ ಕೇಂದ್ರಗಳನ್ನ ಸ್ಥಾಪಿಸಲಾಗಿದ್ದು, ಅಂದು ಬೆಳಗ್ಗೆ 8 ಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಎಲ್ಲಾ ಮತದಾರರು ಕೂಡ ತಮ್ಮ ತಮ್ಮ ಮತ ಕೇಂದ್ರಗಳಿಗೆ ಹೋಗಿ ಕಡ್ಡಾಯವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು.