
ಚಾಮರಾಜನಗರ ಜಿಲ್ಲೆ ಉಪ್ಪಾರ ಸಮಾಜದ ಹಿರಿಯರಾದ ದಾರಾ ಸಿಂಗ್ ಚೌಹಾಣ್ ಅವರು 2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೇರುವ ಮೊದಲು ಬಹುಜನ ಸಮಾಜ ಪಕ್ಷದಲ್ಲಿದ್ದರು. ಅದಾದ ಬಳಿಕ 2022 ರ ಚುನಾವಣೆಗೆ ಮೊದಲು ಎಸ್‌ಪಿಗೆ ಸೇರಿದರು. ಬಳಿಕ ಬಿಜೆಪಿಗೆ ಮರಳಿದ್ದರು. ಸದ್ಯ , ಪೂರ್ವ ಉತ್ತರಪ್ರದೇಶದಲ್ಲಿ ಉಪ್ಪಾರ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ.

2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ SP ಅಭ್ಯರ್ಥಿಯಾಗಿ ಚೌಹಾಣ್ ಘೋಸಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2017 ಮತ್ತು 2022 ರ ನಡುವೆ ಯೋಗಿ ಸರ್ಕಾರದಲ್ಲಿ ಸಚಿವರಾಗಿದ್ದರು. ಈಗ ವಿಧಾನಪರಿಷತ್ ಸದಸ್ಯರಾಗಿದ್ದು ಮತ್ತೇ ಯೋಗಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ದಾರಾಸಿಂಗ್ ಚೌಹಾಣ್ ಅವರಿಗೆ ಅಭಿನಂದನೆಗಳು ಹಾಗೂ ಶುಭಹಾರೈಕೆಗಳು.