LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಂಚೆ ಮೂಲಕ ಗ್ರಾಹಕರಿಗೆ ಮಾವಿನ ಹಣ್ಣು ಪಾರ್ಸಲ್ಗೆ ಚಾಲನೆ

ಬೆಂಗಳೂರು: ಭಾರತೀಯ ಅಂಚೆ ಇಲಾಖೆಯು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಮತ್ತು ವಿವಿಧ ಮಾವು ಬೆಳೆಗಾರರ ಸಹಯೋಗದೊಂದಿಗೆ ಮಾವಿನ ಹಣ್ಣುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಈ ವರ್ಷದ ಸೇವೆಯನ್ನು ದಿನಾಂಕ 07.04.2025ರಿಂದ ಪ್ರಾರಂಭಿಸಿದೆ ಎಂದು ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್  ಎಸ್ ರಾಜೇಂದ್ರ ಕುಮಾರ್ ಅವರು ತಿಳಿಸಿದರು.

ಬೆಂಗಳೂರಿನ  ಜಿಪಿಓದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,2019 ರಿಂದ, ಪ್ರತಿ ಮಾವಿನ ಋತುವಿನಲ್ಲಿ, ಕರ್ನಾಟಕ ವೃತ್ತದ ಅಂಚೆ ಇಲಾಖೆಯು ಮಾವು ವಿತರಣಾ ಸೇವೆಯನ್ನು ಯಶಸ್ವಿಯಾಗಿ ವಿಸ್ತರಿಸುತ್ತಿದೆ. ಈ ಬಾರಿಯೂ ಸಹ ರೈತರಿಂದ ಉತ್ತಮ ಸ್ಪಂದನೆ ಬಂದಿದ್ದು, ಅಂಚೆ ಮೂಲಕ ಮಾರಾಟ ಮಾಡಲು ರೈತರು ಉತ್ತುಕರಾಗಿದ್ದಾರೆ ಎಂದರು.  ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ದೂರದ ದೆಹಲಿಯವರೆಗೂ ಸಹ ಪಾರ್ಸೆಲ್ ಸೇವೆ ಅಂತ್ಯಮೂಲಕ ಲಭ್ಯವಿದೆ. ಮೊದಲು ಬೆಂಗಳೂರು ನಗರದಲ್ಲಿ ಮಾತ್ರ ಅಂಚೆ ಮೂಲಕ ಮಾವಿನ ಹಣ್ಣಿನ ಪಾರ್ಸೆಲ್ ಸೇವೆ ಮಾಡಲಾಗುತ್ತೆ ಎಂದರು.

ಅಂಚೆ ಇಲಾಖೆಯು BNPL (ಬುಕ್ ನೌ. ಪೇ ಲೇಟರ್) ಒಪ್ಪಂದದ ಅಡಿಯಲ್ಲಿ ಮಾವು ಬೆಳೆಗಾರರಿಗೆ ಪಾರ್ಸೆಲ್ ಸೇವೆಯನ್ನು (Business Parcel) ಒದಗಿಸುತ್ತಿದೆ. ಈ ಒಪ್ಪಂದವು ರೈತರು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಉತ್ತಮ ಬೆಲೆಯನ್ನು ಪಡೆಯುವುದು ಮತ್ತು ಗ್ರಾಹಕರು ಅಂಚೆ ಇಲಾಖೆಯ ಮೂಲಕ ತಮ್ಮ ಮನೆ ಬಾಗಿಲಿಗೆ ಉತ್ತಮ ಗುಣಮಟ್ಟದ ತಾಜಾ ಮಾವಿನ ಹಣ್ಣುಗಳನ್ನು ಪಡೆಯುವುದು ಎಂಬ ಎರಡು ಪ್ರಯೋಜನಗಳನ್ನು ಹೊಂದಿದೆ.

ಅಂಚೆ ಇಲಾಖೆ ಹಾಗೂ ರೈತರ ನಡುವೆ ನೇರ ಒಪ್ಪಂದ


ಮಾವಿನ ಹಣ್ಣುಗಳನ್ನು ರೈತರು ತಲಾ 3 ಕೆಜಿಯ ಡಬ್ಬಗಳಲ್ಲಿ ವ್ಯಾಕ್ ಮಾಡಿ ಗ್ರಾಹಕರಿಗೆ ತಲುಪಿಸಲು ಅಂಚೆ ಇಲಾಖೆಗೆ ಸಂಜೆಯ ಒಳಗೆ ನೀಡುತ್ತಾರೆ. ಬಾ‌ರ್ ಕೋಡ್ ಸ್ಟಿಕ್ಕರ್‌ಗಳನ್ನು ಅಂಟಿಸುವ ಮೂಲಕ ಅವುಗಳನ್ನು ಬಿಸಿನೆಸ್ ಪಾರ್ನೆಲ್ ನಲ್ಲಿ ಬುಕ್ ಮಾಡಲಾಗುತ್ತದೆ. ಮಾವಿನಹಣ್ಣುಗಳನ್ನು ಹೊಂದಿರುವ ಪಾರ್ಸೆಲ್‌ಗಳನ್ನು ಬುಕ್ ಮಾಡಿದ ನಂತರ, ಮರುದಿನವೇ ಗ್ರಾಹಕರಿಗೆ ತಲುಪಿಸಲು ಬೆಂಗಳೂರಿನಾದ್ಯಂತ ವಿವಿಧ ಅಂಚೆ ಕಚೇರಿಗಳಿಗೆ ಕಳುಹಿಸಲಾಗುತ್ತದೆ. ನಂತರ ಈ ಪಾರ್ಸಲ್ ಗಳನ್ನು ಪೋಸ್ಟ್ ಮ್ಯಾನ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಪ್ರಸ್ತುತ ಈ ಸೌಲಭ್ಯವು ಬೆಂಗಳೂರು ನಗರದಲ್ಲಿ ಲಭ್ಯವಿರುತ್ತದೆ.

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸಿ ಜಿ ನಾಗರಾಜ ಮಾತನಾಡಿ, 2019 ರಿಂದಲೂ ಸಹ ಅಂಚೆ ಇಲಾಖೆ ಹಾಗೂ ರೈತರ ನಡುವೆ ಒಪ್ಪಂದ ಮಾಡಿಕೊಂಡು ಬಂದಿದ್ದು, ಅಂಚೆ ಮೂಲಕ ಮಾವಿನ ಹಣ್ಣಿನ ಮಾರಾಟವನ್ನು ಮಾಡುವ ಕೆಲಸವನ್ನು ಮಾಡುತ್ತಿದೆ. ಅಂಚೆ ಮೂಲಕ ತೆಗೆದುಕೊಳ್ಳುವ ಮಾವಿನ ಹಣ್ಣಿಗೂ ಹಾಗೂ ಮಾರುಕಟ್ಟೆಯಲ್ಲಿ ಸಿಗುಮಾವಿನಹಣ್ಣಿಗೂ ಸಾಕಷ್ಟು ವ್ಯತ್ಯಾಸಗಳಿದ್ದು ರೈತರಿಂದ ಕೊಂಡುಕೊಳ್ಳುವ ಮಾವಿನಹಣ್ಣಿಗೆ ಯಾವುದೇ ರಾಸಾಯನಿಕ ಸಿಂಪಡಿಸದೆ ಹಣ್ಣು ಮಾಡಲಾಗುತ್ತದೆ. ಬೆಲೆಯಲ್ಲಿ ಸಹ ಮಾರುಕಟ್ಟೆ ಹಾಗೂ ಹಂಸಿ ಇಲಾಖೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.

ಅಂಚೆ ಮೂಲಕ ಮಾರಾಟ ಮಾಡಲು ಕೋಲಾರ ರಾಮನಗರ ಮಾಗಡಿ ಕಡೆಯಿಂದ ಸಹ ರೈತರು ಅಂಚೆ ಮೂಲಕ ಮಾವಿನ ಹಣ್ಣನ್ನು ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಸುಲಭವಾಗಿ ಹಾಗೂ ಸುರಕ್ಷಿತವಾಗಿ ಅಂಚೆ ಮೂಲಕ ಹಣ್ಣುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

ಶ್ರೀನಿವಾಸಪುರದ ಯುವ  ರೈತ ಕಿರಣ್ ಪಿವಿ, ಚಿಂತಾಮಣಿಯ ಯುವ ರೈತ ಸಾಗರ್


ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಯುವ ರೈತ ಕಿರಣ್ ಪಿವಿ ಅವರು ಅಂಚೆ ಇಲಾಖೆ ಜೊತೆ ಮಾವಿನಹಣ್ಣಿನ ಮಾರಾಟದ ಒಪ್ಪಂದ ಮಾಡಿಕೊಳ್ಳಲಾಗಿದೆ. ಕೋಲಾರ ಜಿಲ್ಲೆ ಶ್ರೀನಿವಾಸ್ ಪುರವನ್ನು ಲ್ಯಾಂಡ್ ಆಫ್ ದ ವರ್ಲ್ಡ್ ಎಂದು ಕರೆಯುತ್ತಾರೆ. ಮಾವಿನ ಹಣ್ಣುಗಳಿಗೆ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ ಹಾಗೆ ರುಚಿಕರವಾಗಿರುತ್ತದೆ. 2019 ರಿಂದ ಅಂಚೆ ಇಲಾಖೆಯ ಜೊತೆಗೆ ಒಪ್ಪಂದ ಮಾಡಿಕೊಂಡು ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ರಾಸಾಯನಿಕ ಔಷಧಿಗಳನ್ನು ಸಿಂಪಡಣೆ ಮಾಡದೆ ಸಾವಯವ ಮೂಲಕ ಮಾವನ್ನು ಹಣ್ಣು ಮಾಡಲಾಗುತ್ತದೆ. ಅಲ್ಲದೆ ಮಾವಿನ ಹಣ್ಣುಗಳನ್ನು ನೈಸರ್ಗಿಕವಾಗಿ ಪ್ಯಾಕ್ ಮಾಡಲಾಗುತ್ತದೆ.

ಕೋಲಾರ ಜಿಲ್ಲೆಯಲ್ಲಿ ಬರುವ ಶ್ರೀನಿವಾಸಪುರ ಹಾಗೂ ಚಿಂತಾಮಣಿ ಹತ್ತಕ್ಕಿಂತ ಹೆಚ್ಚು ವಿವಿಧ ಬಗೆಯ ಮಾವಿನ ಹಣ್ಣುಗಳು ಇಲ್ಲಿ ದೊರೆಯುತ್ತವೆ. ಅದರಲ್ಲಿ ರಸಪೂರಿ, ಅಲ್ಪಾನ್ಸ್,ಬಾದಾಮಿ,ಮಲ್ಲಿಕಾ,ಇಮಾಂ ಪಸಂದ್, ಮಲಗೋವಾ,ಸಿಂಧೂರ, ಬೀಬಿ ಶುಗರ್, ಕಲ್ಪಡ್,ತೋತಪುರಿ, ನೀಲಂ ಸೇರಿ ಅನೇಕ ಬಗೆಯ ಮಾವಿನ ತಳಿಗಳು ಈ ಪ್ರದೇಶದಲ್ಲಿ ದೊರೆಯುತ್ತವೆ . ಶ್ರೀನಿವಾಸಪುರದಿಂದ ಭಾರತದ ಅನೇಕ ಕಡೆಗಳಿಗೆ ಮಾವಿನ ಹಣ್ಣುಗಳು ವಿವಿಧ ಬಗೆಯಲ್ಲಿ ರಫ್ತು ಆಗುತ್ತಿರುವುದನ್ನು ನೋಡಬಹುದು. ಕಡಿಮೆ ಬೆಲೆಯಲ್ಲಿ ರುಚಿಕರ ಹಾಗೂ ವೈಜ್ಞಾನಿಕವಾಗಿ ಹಣ್ಣುಗಳನ್ನು ಮಾಡಿ ಗ್ರಾಹಕರಿಗೆ ಉಣಬಡಿಸುವ ಕೆಲಸವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ.

ಅದೇ ರೀತಿ ಚಿಂತಾಮಣಿಯ ರೈತ ಸಾಗರ್ ಸಹಾ ಅಂಚೆ ಮೂಲಕ  2019ರಿಂದಲು ಮಾವಿನ ಹಣ್ಣನ್ನು ಮಾರಾಟ ಮಾಡಲಾಗುತ್ತಿದ್ದಾರೆ. ಚಿಂತಾಮಣಿ ಇಲ್ಲಿಯೂ ಸಹ ವೈಜ್ಞಾನಿಕವಾಗಿ ಮಾವಿನ ಹಣ್ಣುಗಳನ್ನು ಬೆಳೆದು ಗ್ರಾಹಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಹಣ್ಣುಗಳನ್ನು ನೀಡುವ ಪರಿಪಾಠವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಗ್ರಾಹಕರು ಆನ್ಲೈನ್ ಮೂಲಕ ಸಹ ಕೊಂಡುಕೊಳ್ಳಬಹುದು. ರೈತರನ್ನೇ ನೇರವಾಗಿ ಸಂಪರ್ಕಿಸಿ ಮಾವಿನ ಹಣ್ಣುಗಳನ್ನು ಕೊಂಡುಕೊಳ್ಳಬಹುದಾಗಿದೆ. ರೈತರು ಬೆಳೆದ ಮಾವಿನಹಣ್ಣಿನ ವಿಚಾರಗಳ ಬಗ್ಗೆ ಆನ್ಲೈನ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಯಾವ ರೀತಿಯಲ್ಲಿ ಮಾವಿನ ಹಣ್ಣು ಸಿಗುತ್ತದ? ಎಷ್ಟು ಪ್ರಮಾಣದಲ್ಲಿ? ತಳಿಯಾವುದು? ಎಂಬುದನ್ನು ಸುಲಭವಾಗಿ ತಿಳಿಯಬಹುದು.

Lush Green Farms www.LushGreenFarms.com ಗೆ ಭೇಟಿ ನೀಡಬಹುದು, facebook.com/lushgreenfarmsindia, instagram.com/lushgreenfarms, [email protected] 


9743668090 ಗೆ ಕರೆ ಮಾಡಿ ಮಾಹಿಯನ್ನು ಪಡೆಯಬಹುದಾಗಿದೆ.


                                 -

ಚಿಂತಾಮಣಿಯ ಯುವ ರೈತ ಸಾಗರ್ ಎಂಬುವವರು ಸಹ ಅಂಚೆ ಇಲಾಖೆ ಜೊತೆ ಮಾವಿನ ಹಣ್ಣಿನ ಮಾರಾಟ ಮಾಡಲು ಮೊದಲಿನಿಂದಲೂ (2019) ರಿಂದಲ್ಲೂ ಮುಂದೆ ಬಂದು ಮಾರಾಟ ಮಾಡುತ್ತಿದ್ದಾರೆ, ಹೆಚ್ಚಿನ ಮಾಹಿತಿಗಾಗಿ   ಇವರನ್ನು ಸಂಪರ್ಕಿಸಲು +91 99029 00562 ಗೆ ಕರೆ ಮಾಡಿ, ಅಥವಾ https://www.fruitsofnature.in ಗೆ ಭೇಟಿ ನೀಡಿ ಹೆಚ್ಚಿನ  ಮಾಹಿತಿ ಪಡೆಯಬಹುದು ಎಂದರು.

ಈ ವರ್ಷದ ಮಾವು ಸೇವೆಯನ್ನು ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶ್ರೀ.ಎಸ್. ರಾಜೇಂದ್ರ ಕುಮಾ‌ರ್ ಮತ್ತು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ಡಾಕ್ಟರ್ ಸಿಜಿ ನಾಗರಾಜು,. ಈ ಸಂದರ್ಭದಲ್ಲಿ ಮುಖ್ಯಾಲಯ ಕ್ಷೇತ್ರದ ಅಂಚೆ ಕ್ಷೇತ್ರದ ಅಂಚೆ ಸೇವೆಗಳ ನಿರ್ದೇಶಕ  ಸಂದೇಶ್ ಮಹದೇವಪ್ಪ, ಬೆಂಗಳೂರು ಮುಖ್ಯಾಲಯ ಕ್ಷೇತ್ರದ ಅಂಚೆ ಸೇವೆಗಳ ನಿರ್ದೇಶಕಿ ವಿ.ತಾರಾ ಮತ್ತು ಬೆಂಗಳೂರು ಜಿಪಿಒ ದ ಮುಖ್ಯ ಪೋಸ್ಟ್ ಮಾನ್ಸರ್.ಎಚ್.ಎಂ.ಮಂಜೇಶ ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ