LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೀದಿ ನಾಯಿಗಳಿಗೆ ಪ್ರಾಯೋಗಿಕ ಮೈಕ್ರೋ ಚಿಪ್ ಅಳವಡಿಕೆ: ಸುರಳ್ಕರ್ ವಿಕಾಸ್ ಕಿಶೋರ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪಶ್ಚಿಮ ವಲಯದ ಮತ್ತಿಕೆರೆ ಮತ್ತು ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೋ ಚಿಪ್ ಅಳವಡಿಕೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಆರೋಗ್ಯ ಹಾಗೂ ಪಶುಪಾಲನಾ ವಿಭಾಗದ ವಿಶೇಷ ಆಯುಕ್ತರಾದ  ಸುರಳ್ಕರ್ ವಿಕಾಸ್ ಕಿಶೋರ್ ರವರು ತಿಳಿಸಿದರು.

ನಗರದ ಪಶ್ಚಿಮ ವಲಯದ ಮತ್ತಿಕೆರೆ ಹಾಗೂ ಮಲ್ಲೇಶ್ವರಂ ವ್ಯಾಪ್ತಿಯಲ್ಲಿನ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅನ್ನು ಪ್ರಾಯೋಗಿಕವಾಗಿ ಅಳವಡಿಸಲಾಗುತ್ತಿದ್ದು, ಮೈಕ್ರೋ ಚಿಪ್ ತಂತ್ರಜ್ಞಾನದಿಂದ ನಾಯಿಯ ವಾಸಸ್ಥಳ, ಲಸಿಕೆ ನೀಡಿದ ದಿನಾಂಕ, ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ದಿನಾಂಕ ಹಾಗೂ ಇನ್ನಿತರ ಅಂಶಗಳನ್ನು ಶಾಶ್ವತವಾಗಿ ಅದರಲ್ಲಿ ಶೇಖರೀಡಿಸಬಹುದಾಗಿರುತ್ತದೆ.

ಮೈಕ್ರೋ ಚಿಪ್ ತಂತ್ರಜ್ಞಾನವನ್ನು ಈಗಾಗಲೇ ಹಲವಾರು ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳಿಗೆ ಅಳವಡಿಸಿಕೊಂಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ BIZ ORBIT ಎಂಬ ಸಂಸ್ಥೆಯ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಬೀದಿ ನಾಯಿಗಳಿಗೆ ಅಳವಡಿಕೆ ಮಾಡಲಾಗುತ್ತಿದೆ.

ಅಕ್ಕಿಕಾಳು ಗಾತ್ರದ ಮೈಕ್ರೋ ಚಿಪ್ ಅಳವಡಿಕೆ:

ಮೈಕ್ರೋಚಿಪ್ ಒಂದು ಅಕ್ಕಿಕಾಳು ಗಾತ್ರದ ಸಾಧನವಾಗಿದ್ದು, ಪ್ರಾಣಿಗಳಲ್ಲಿ ಶಾಶ್ವತ ಗುರುತಿನ ವಿಧಾನವಾಗಿರುತ್ತದೆ. ಇದನ್ನು ಪ್ರಾಣಿಗಳ ಚರ್ಮದ ಕೆಳಗೆ ಇಂಜೆಕ್ಷನ್ ಮೂಲಕ ಇರಿಸಲಾಗುವುದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ ಮತ್ತು ಇದು ಪ್ರಾಣಿಗಳ ಜೀವನ ಪರ್ಯಂತ ಶಾಶ್ವತ ಗುರುತಾಗಿ ಬಳಸಬಹುದಾಗಿರುತ್ತದೆ. ಇದು ಪ್ರಪಂಚದಾದ್ಯಂತ ಬಳಸಲಾಗುವ ಯೂನಿಕ್ ಸಂಖ್ಯೆಯಾಗಿರುತ್ತದೆ.

[video width="848" height="478" mp4="https://beestimes.com/wp-content/uploads/2024/09/VID-20240922-WA0019.mp4"][/video]

ಯಶಸ್ವಿಯಾದರೆ ಇರತೆ ವಲಯಗಳಲ್ಲೂ ಅಳವಡಿಕೆ:

ಪ್ರಾಯೋಗಿಕ ಮೈಕ್ರೋ ಚಿಪ್ ಅಳವಡಿಸುವ ಕಾರ್ಯ ಯಶಸ್ವಿಯಾದರೆ, ಅದನ್ನು ಪಾಲಿಕೆಯ ಎಲ್ಲಾ ವಲಯಗಳಲ್ಲಿಯೂ ಬೀದಿ ನಾಯಿಗಳಿಗೆ ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆ ವತಿಯಿಂದ ಬೀದಿ ನಾಯಿಗಳಿಗೆ ಸಂಯೋಜಿತ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಮೈಕ್ರೋ ಚಿಪ್ ಅಳವಡಿಸುವ ತಂತ್ರಜ್ಞಾನದಿಂದ ಬೀದಿ ನಾಯಿಗಳಿಗೆ ಮತ್ತೆ-ಮತ್ತೆ ಲಿಸಿಕೆ ಹಾಕುವುದನ್ನು ತಡೆಯಬಹುದಾಗಿರುತ್ತದೆ.

ಪ್ರಸ್ತುತ ಬಣ್ಣ ಬಳಸಿ ಗುರುತಿಸಲಾಗುತ್ತಿದೆ:

ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ಲಸಿಕೆ ಹಾಕಿದ ಬೀದಿನಾಯಿಗಳಿಗೆ ಬಣ್ಣವನ್ನು ಬಳಸಿ ಗುರುತಿಸಲಾಗುತ್ತಿದ್ದು, ಒಂದು ವಾರ ಮಾತ್ರ ಬಣ್ಣದ ಗುರುತು ಪತ್ತೆಹಚ್ಚಬಹುದಾಗಿರುತ್ತದೆ. ಆದುದರಿಂದ ಬೀದಿನಾಯಿಗಳಿಗೆ ಪದೇ ಪದೇ ಲಸಿಕೆ ಹಾಕುವ ಸಾಧ್ಯತೆಯಿರುತ್ತದೆ. ಮೈಕ್ರೋ ಚಿಪ್ ತಂತ್ರಜ್ಞಾನದಿಂದ ಈ ನ್ಯೂನತೆಯನ್ನು ಸರಿಪಡಿಸಬಹುದಾಗಿರುತ್ತದೆ ಹಾಗು ನಾಯಿಗಳಲ್ಲಿ ಲಸಿಕೆ ಹಾಕಿರುವ ಮಾಹಿತಿಯನ್ನು ನಿಖರವಾಗಿ ತಿಳಿಯಬಹುದಾಗಿರುತ್ತದೆ.

ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಸುವ ಕಾರ್ಯದಿಂದ, ಬೀದಿ ನಾಯಿಗಳ ನಿಖರವಾದ ಮಾಹಿತಿಯನ್ನು ಪಡೆಯಬಹುದಾಗಿದೆ. ಅಲ್ಲದೆ ಬೀದಿ ನಾಯಿಗಳಿಗೆ ಮತ್ತೆ-ಮತ್ತೆ ಲಸಿಕೆ ಹಾಕುವುದನ್ನು ತಡೆಯಬಹುದಾಗಿರುತ್ತದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು: ಸಿಎಂ ಸಿದ್ದರಾಮಯ್ಯಉತ್ತರಾಖಂಡದ ಹರಿದ್ವಾರದಲ್ಲಿರುವ ಬಿಎಚ್‌ಇಎಲ್ ಕಾರ್ಖಾನೆಗೆ ಭೇಟಿ ನೀಡಿದ ಹೆಚ್.ಡಿ. ಕುಮಾರಸ್ವಾಮಿಗಂಭೀರ ರಕ್ತಹೀನತೆಯಿಂದ ಬಳಲುತ್ತಿದ್ದ ಯುವಕನಿಗೆ ಸ್ಟೆಮ್ ಸೆಲ್ ದಾನ ಮಾಡಿ ಜೀವರಕ್ಷಕಿಯಾದ ಬೆಂಗಳೂರಿನ ಮಹಿಳೆಫೋರ್ಟಿಸ್ ಹೆಲ್ತ್ಕೇರ್ ನಿಂದ 4 ವಿಶೇಷ ಚಿಕಿತ್ಸಾಲಯ ಆರಂಭಬೆಂಗಳೂರಿನಲ್ಲಿ ಕಲಾಮಂದಿರದ 4ನೇ ಶೋರೂಂ ಆರಂಭ96 ರನ್ ಗಳಿಂದ ನ್ಯೂಜಿಲೆಂಡ್ ವಿರುದ್ಧ ಭಾರತ ಟಿ20 ವಿನ್ಫೋನ್ ಕದ್ದಾಲಿಕೆ; ಸಿಎಂ ಸಿದ್ದರಾಮಯ್ಯ ಸುಳ್ಳಿಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿನಗರದ ಐದು ವಿಭಾಗ, ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರ ಸಭೆಯಲ್ಲಿ ಮತನಾಡಿದ ಜಿಬಿಎ ಅಧ್ಯಕ್ಷರುಬೇಸಿಗೆಯಲ್ಲಿ ನೀರಿನ ತೊಂದರೆ ಎದುರಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ: ಎ ಸಿ ಎಸ್ ತುಷಾರ್ ಗಿರಿನಾಥ್ ಸೂಚನೆಜಲಮಂಡಳಿಯ ಪ್ರೋ-ರೇಟಾ - ಜೈನ್ ಇಂಟರ್‌ನ್ಯಾಷನಲ್ ಶಾಲೆಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್