Anunay Sood Death: ಸೂದ್ ಅವರು ದೊಡ್ಡ ಮಟ್ಟದಲ್ಲಿ ಹಿಂಬಾಲಕರನ್ನು ಪಡೆದಿದ್ದು ತಮ್ಮ ಕಂಟೆಂಟ್ನಿಂದಾಗಿ. ಅವರು ಟ್ರಾವೆಲ್ ಫೋಟಗ್ರಫಿ ಮತ್ತು ಅದ್ಭುತ ರೀಲ್ಸ್ಗಳನ್ನು ಹಂಚಿಕೊಂಡು ಗಮನ ಸೆಳೆದರು
ದುಬೈ ಮೂಲದ ಟ್ರಾವೆಲ್ ಇನ್ಫ್ಲುಯೆನ್ಸರ್ ಹಾಗೂ ಫೋಟೋಗ್ರಾಫರ್ ಅನುನಯ್ ಸೂದ್ ಅವರು 32ನೇ ವಯಸ್ಸಿಗೆ ನಿಧನ ಹೊಂದಿದ್ದಾರೆ. ಕುಟುಂಬದವರು ಹಾಗೂ ಗೆಳೆಯರು ಇನ್ಸ್ಟಾಗ್ರಾಮ್ನಲ್ಲಿ ಗುರುವಾರ (ನವೆಂಬರ್ 6) ಈ ವಿಚಾರವನ್ನು ಖಚಿತಪಡಿಸಿದರು. ಅವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಇದನ್ನು ಬಹಿರಂಗಪಡಿಸಬೇಕು ಎಂದು ಎಲ್ಲರೂ ಆಗ್ರಹಿಸುತ್ತಾ ಇದ್ದಾರೆ.
ಸೂದ್ ಅವರು ದೊಡ್ಡ ಮಟ್ಟದಲ್ಲಿ ಹಿಂಬಾಲಕರನ್ನು ಪಡೆದಿದ್ದು ತಮ್ಮ ಕಂಟೆಂಟ್ನಿಂದಾಗಿ. ಅವರು ಟ್ರಾವೆಲ್ ಫೋಟಗ್ರಫಿ ಮತ್ತು ಅದ್ಭುತ ರೀಲ್ಸ್ಗಳನ್ನು ಹಂಚಿಕೊಂಡು ಗಮನ ಸೆಳೆದರು. ಅವರು ಲಾಸ್ ವೇಗಸ್ನಲ್ಲಿ ಇದ್ದರು. ಎರಡು ದಿನಗಳ ಹಿಂದೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಸೂದ್ ಕುಟುಂಬ ಈ ಬಗ್ಗೆ ಮಾಹಿತಿ ನೀಡಿದೆ. ‘ನಮ್ಮ ಪ್ರೀತಿಯ ಅನುನಯ್ ಸೂದ್ ಅವರ ನಿಧನದ ಸುದ್ದಿಯನ್ನು ಹಂಚಿಕೊಳ್ಳಲು ನಮಗೆ ತುಂಬಾ ದುಃಖವಾಗುತ್ತಿದೆ. ಈ ಕಷ್ಟದ ಸಮಯದಲ್ಲಿ ನಮ್ಮ ಖಾಸಗಿತನ ಗೌರವಿಸಿ. ನಮ್ಮ ಮನೆಯ ಬಳಿ ಬರುವುದನ್ನು ಮಾಡಬೇಡಿ ಎಂದು ವಿನಮ್ರವಾಗಿ ವಿನಂತಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಅವರ ಖಾತೆಯ ಮೂಲಕವೇ ಪೋಸ್ಟ್ ಮಾಡಲಾಗಿದೆ.
ಅನುನಯ್ ಸೂದ್ ಅವರಿಗೆ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಇದೆ. ಅವರಿಗೆ 14 ಲಕ್ಷ ಹಿಂಬಾಲಕರು ಇನ್ಸ್ಟಾಗ್ರಾಮ್ನಲ್ಲಿ ಇದ್ದಾರೆ. ಯೂಟ್ಯೂಬ್ನಲ್ಲಿ 38 ಲಕ್ಷ ಸಬ್ಸ್ಕ್ರೈಬರ್ ಇದ್ದಾರೆ. ಅವರು ಸಾಮಾನ್ಯವಾಗಿ ವಿದೇಶದ ಟೂರಿಸಮ್ ಬೋರ್ಡ್ ಹಾಗೂ ಬ್ರ್ಯಾಂಡ್ಗಳ ಜೊತೆ ಕೈ ಜೋಡಿಸುತ್ತಾ ಇದ್ದರು. 2022, 2023 ಹಾಗೂ 2024ರಲ್ಲಿ ಅವರು ಫೋರ್ಬ್ಸ್ ಇಂಡಿಯಾದ ಟಾಪ್ 100 ಡಿಜಿಟಲ್ ಸ್ಟಾರ್ಸ್ ಲಿಸ್ಟ್ನಲ್ಲಿ ಸ್ಥಾನ ಪಡೆದಿದ್ದರು ಎಂಬುದು ವಿಶೇಷ.