ಬೆಂಗಳೂರು: ಹುಬ್ಬಳ್ಳಿಗೆ ಇಳಿಯಬೇಕಿದ್ದ FLY91 ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಪ್ರಯಾಣಿಕರು ಭಯಭೀತರಾದ ಘಟನೆ ನಡೆದಿದೆ. ಹೈದರಾಬಾದ್‌ನಿಂದ ಹೊರಟಿದ್ದ ವಿಮಾನವು ಸುಮಾರು 4 ಗಂಟೆಗಳ ಕಾಲ ಗಗನದಲ್ಲೇ ಹಾರಾಟ ನಡೆಸಿ ಕೊನೆಗೆ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಏಪ್ರಿಲ್ ಎರಡನೇ ವಾರದಿಂದ ಹೈದರಾಬಾದ್, ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಸೇವೆ ಆರಂಭಿಸಿದ್ದ ಫ್ಲೈ91 ವಿಮಾನದಲ್ಲಿ ಭಾನುವಾರ (ಏ.19) ಮಧ್ಯಾಹ್ನ 3 ಗಂಟೆಗೆ ಟೇಕ್‌ಆಫ್ ಆಗಿತ್ತು. ಆದರೆ ಸಂಜೆ 4.30ಕ್ಕೆ ಹುಬ್ಬಳ್ಳಿಯಲ್ಲಿ ಇಳಿಯಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಲ್ಯಾಂಡಿಂಗ್ ಸಾಧ್ಯವಾಗದೆ ಗಗನದಲ್ಲೇ ಸುತ್ತಾಟ ಮುಂದುವರಿದಿತ್ತು.
ಈ ಸಂದರ್ಭದಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರು ಆತಂಕಕ್ಕೊಳಗಾಗಿ ಕೆಲವರು ಕಣ್ಣೀರಿಟ್ಟ ಘಟನೆ ನಡೆದಿದೆ. “ದೇವ್ರೇ ಕಾಪಾಡು…” ಎಂದು ಮಹಿಳೆಯೊಬ್ಬರು ಪ್ರಾರ್ಥಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪಕ್ಕದಲ್ಲಿದ್ದವರು ಅವರನ್ನು ಸಮಾಧಾನಪಡಿಸಲು ಯತ್ನಿಸಿದರೂ ಭಯ ಕಡಿಮೆಯಾಗಿರಲಿಲ್ಲ.
ಇದಕ್ಕೆ ಪ್ರತಿಕ್ರಿಯಿಸಿದ ಪೈಲಟ್, “ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದ್ದೇವೆ. ತಾಳ್ಮೆಯಿಂದಿರಿ, ಎಲ್ಲ ಮಾಹಿತಿಯನ್ನೂ ನಿಮಗೆ ನೀಡುತ್ತೇವೆ” ಎಂದು ಪ್ರಯಾಣಿಕರಿಗೆ ಭರವಸೆ ನೀಡಿದ್ದಾರೆ. ಕೆಲ ಪ್ರಯಾಣಿಕರು ವಿಮಾನವನ್ನು ಬೆಳಗಾವಿ ಅಥವಾ ಬೆಂಗಳೂರಿಗೆ ತಕ್ಷಣ ಇಳಿಸುವಂತೆ ಸಲಹೆ ನೀಡಿದ ಘಟನೆ ಕೂಡ ನಡೆದಿದೆ.
ಈ ಕುರಿತು ಫ್ಲೈ91 ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಹವಾಮಾನ ವೈಪರೀತ್ಯ ಮತ್ತು ತಾಂತ್ರಿಕ ಕಾರಣಗಳಿಂದ ವಿಮಾನವು ನಿರ್ದಿಷ್ಟ ಸಮಯದಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಪೈಲಟ್‌ಗಳು ನಿರ್ಧಾರ ತೆಗೆದುಕೊಂಡು ವಿಮಾನವನ್ನು ಬೆಂಗಳೂರಿಗೆ ಕೊಂಡೊಯ್ದಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ಇಂತಹ ಸಂದರ್ಭಗಳಲ್ಲಿ ವಿಮಾನವನ್ನು ತಕ್ಷಣ ಇಳಿಸುವ ಬದಲು ಗಗನದಲ್ಲೇ ಕಾಯುವ ಅಥವಾ ಬೇರೆ ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಿಸುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಘಟನೆಯಲ್ಲಿ ತೆಗೆದುಕೊಂಡ ಕ್ರಮದಿಂದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಉಳಿದಿದ್ದಾರೆ ಎಂದು ಅವರು ತಿಳಿಸಿದ್ದ