LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ವಧರ್ಮ ಸಮನ್ವಯತೆ ಸಾರುವ ಗಣೇಶನಿಗೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರ

ಜನಮನ ಗೆದ್ದ ಭಾವೈಕ್ಯತೆಯ ಗಣೇಶ ಮೂರ್ತಿ


ವಿಜಯನಗರವಾಣಿ ಸುದ್ದಿ
ಕುರುಗೋಡು.
ವಿವಿಧತೆಯಲ್ಲಿ ಏಕತೆ ಸಾರುವ ದೇಶ ಭಾರತ. ಇಲ್ಲಿ ಎಲ್ಲಾ ಧರ್ಮೀಯರು ವಾಸಿಸುತ್ತಿದ್ದಾರೆ. ಪರಸ್ಪರ ಸಾಮರಸ್ಯ, ಬಾಂಧವ್ಯ, ಸಹೋದರತೆ ಇನ್ನು ಕೂಡ ಜೀವಂತವಾಗಿವೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.


ಪಟ್ಟಣದ ಶ್ರೀ ದೊಡ್ಡ ಬಸವೇಶ್ವರ ದೇವಾಲಯದ ಬಳಿಯ ರೈತ ಸಮುದಾಯ ಭವನದಲ್ಲಿ  ಪಟ್ಟಣದ ಯುವಕರ ತಂಡ  "ಸ್ನೇಹಿತರ ಬಳಗ ಕುರುಗೋಡು" ಎಂಬ ಯುವಕರ ತಂಡವೊಂದನ್ನು ರಚಿಸಿಕೊಂಡು  ಪ್ರತಿಷ್ಠಾಪಿಸಿರುವ ಭಾವೈಕ್ಯತೆಯ ಗಣೇಶ ಮೂರ್ತಿ ಸದ್ಯ ಮನೆ ಮಾತಾಗಿದೆ.
ಈ ಮೂಲಕ ಯುವಕರು ಸಮಾಜಕ್ಕೆ ಸೌಹಾರ್ದತೆಯ ಸಂದೇಶ ಸಾರಿದ್ದಾರೆ.
ಇನ್ನೂ ಗಣೇಶ ಮೂರ್ತಿ ಹಿಂದೂ ,ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇಧಭಾವವಿಲ್ಲದೆ. ಮಾನವರು ನಾವೆಲ್ಲಾ ಒಂದೇ ಎಂಬ ತತ್ವದಲ್ಲಿ ಜೀವನ ಸಾಗಿಸಬೇಕೆಂಬ ಸಂದೇಶ ಸಾರುತ್ತಿದೆ.
ಈ ಯುವಕರ ತಂಡದಲ್ಲೂ  ಹಿಂದೂ ಮತ್ತು  ಮುಸ್ಲಿಂ ಯುವಕರಿದ್ದು ಯಾವುದೇ ಭೇಧ ಭಾವವಿಲ್ಲದೆ ಪರಸ್ಪರ ಸಹೋದರರಂತೆ ಜೀವನ ನಡೆಸುತ್ತಿರುವುದು ಮತ್ತೊಂದು ವಿಶೇಷ.


ಗಣೇಶ ಮೂರ್ತಿಯ ಮುಂಭಾಗದಲ್ಲಿ "ಏನಾದರೂ ಆಗು ಮೊದಲು ಮಾನವನಾಗು" ಎಂಬ ಸಂದೇಶದ ಜೊತೆಗೆ ಜಗಜ್ಯೋತಿ ಬಸವೇಶ್ವರ ವಚನಗಳು,ಮಿಸೈಲ್ ಮ್ಯಾನ್ (ಕ್ಷಿಪಣಿ ಮನುಷ್ಯ) ಅಬ್ದುಲ್ ಕಲಾಂ,ಮಾನವತಾವಾದಿ ಇಬ್ರಾಹಿಂ ಸುತಾರ, ಕುಷ್ಠರೋಗಿಗಳಿಗೆ ಸೇವೆ ಸಲ್ಲಿಸಿದ ಮಹಾ ತಾಯಿ ಮದರ್ ತೆರೇಸಾರವರ,ಭಾವಚಿತ್ರಗಳು ಹಾಗೂ ಅವರ ಪ್ರಸಿದ್ದ ಹೇಳಿಕೆಗಳು ಗಮನ ಸೆಳೆಯುತ್ತವೆ. ಈ ಸಂದರ್ಭದಲ್ಲಿ ಸ್ನೇಹಿತರ ಬಳಗದ ಅಧ್ಯಕ್ಷ ಬಾದನಹಟ್ಟಿಯ ಚಾನಾಳ್ ವಿಶ್ವನಾಥ ಮಾತನಾಡಿ ಜಾತಿ, ಧರ್ಮಕ್ಕಿಂತ ಸ್ನೇಹ ಮಿಗಿಲಾಗಿದ್ದು. ಗಣೇಶ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಎಂಬ ಭೇಧ ಭಾವವಿಲ್ಲದೆ ನಾವೆಲ್ಲಾ ಒಂದೇ ಎಂಬ  ಏಕತೆಯ ಭಾವನೆಗಳನ್ನು ಮೂಡಿಸುವುದು. ಜಾತಿ, ಧರ್ಮ, ಪಂಥಗಳ ಮೀರಿ ಇಂದಿನ ಮಕ್ಕಳು , ಯುವಕರು  ಬದುಕು ನಡೆಸುವಂತಾಗಬೇಕುಎಂಬ ಸಂದೇಶವನ್ನು ರವಾನಿಸುವುದು ನಮ್ಮ ತಂಡದ ಮುಖ್ಯ ಉದ್ದೇಶವಾಗಿದೆ.  ಎಲ್ಲರಿಗೂ ದೇವರು ಒಬ್ಬನೇ... ಈ ಸಂದೇಶವನ್ನು  ಯುವಕರಿಗೆ ಹಾಗೂ ಸಾರ್ವಜನಿಕರಿಗೆ  ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.ಯುವಕರ ಈ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈಸಂದರ್ಭದಲ್ಲಿ  ಸ್ನೇಹಿತರ ಬಳಗದ ಉಪಾಧ್ಯಕ್ಷ ಮೈನೂದ್ದೀನ್ , ಹರಿ, ಸಿದ್ದೇಶ,ವೀರೇಶ್,ಸಂತೋಷ, ಮನ್ಸುರ್,ಭರತ್,ಉಮೇಶ್, ಮೇಘ,ಮೌನೇಶ್ , ಅನಿಲ್,ದೇವರಾಜ,ಪಂಪಾ,ಮಹೇಶ್,ಮಲ್ಲಿ,ಕೃಷ್ಣ,ದೊಡ್ಡ ಬಸವ,ರಫಿಕ್,ಶೇಕ್ಷಾವಲಿಆಲ್ತಫ್,ರಾಜಾ,ರಘು,ತಿಪ್ಪೇಶ,ಅಲ್ಲಾಭಕ್ಷಿ,ಶ್ರೀಕಾಂತ್,ಸೇರಿದಂತೆ ಅನೇಕ ಸ್ನೇಹಿತರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು