ಕೋಲ್ಕತ್ತಾ: Howrah ನಗರದಲ್ಲಿ ಜನರಿಗೆ ಬೆದರಿಕೆ ಸೃಷ್ಟಿಸುತ್ತಿದ್ದ ಕುಖ್ಯಾತ ರೌಡಿ ಹಾಗೂ ಗ್ಯಾಂಗ್‌ಸ್ಟರ್ Akash Singh ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.
ಕೇವಲ ಬನಿಯನ್ ಮತ್ತು ಅಂಡರ್‌ವೇರ್ ಧರಿಸಿದ ಸ್ಥಿತಿಯಲ್ಲಿ ಸಾರ್ವಜನಿಕರ ಎದುರು ರಸ್ತೆಯುದ್ದಕ್ಕೂ ಪರೇಡ್ ನಡೆಸುವ ಮೂಲಕ ಹೌರಾ ಪೊಲೀಸರು ಕಾನೂನಿನ ಬಲವನ್ನು ತೋರಿಸಿದ್ದಾರೆ.
ಹೌರಾದಲ್ಲಿ ತಾನೇ ದೊಡ್ಡ ಡಾನ್ ಎಂಬಂತೆ ವರ್ತಿಸುತ್ತಿದ್ದ ಆಕಾಶ್ ಸಿಂಗ್ ಹಫ್ತಾ ವಸೂಲಿ, ಬೆದರಿಕೆ ಹಾಗೂ ಹಲವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದನೆಂದು ಆರೋಪಿಸಲಾಗಿದೆ.
ಇತ್ತೀಚೆಗೆ ಬಂಧಿತನಾದ ಆತನನ್ನು ಪೊಲೀಸರು ಮಾಲಿಪಾಂಚ್‌ಘರಾ ಮತ್ತು ಗೋಲಾಬಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪರಾಧ ಸ್ಥಳಗಳಿಗೆ ಕರೆದೊಯ್ದು ಮಹಜರು ಪ್ರಕ್ರಿಯೆ ನಡೆಸಿದರು.
ಈ ವೇಳೆ ಆತನ ತಲೆ ಹಾಗೂ ಗಡ್ಡವನ್ನು ಸಂಪೂರ್ಣ ಬೋಳಿಸಿ, ಒಳಉಡುಪಿನಲ್ಲೇ ಸಾರ್ವಜನಿಕ ರಸ್ತೆಯಲ್ಲಿ ನಡೆಸಿಕೊಂಡು ಹೋಗಿರುವ ದೃಶ್ಯಗಳು ಚರ್ಚೆಗೆ ಗ್ರಾಸವಾಗಿವೆ.
ಅಪರಾಧಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡುವುದು ಹಾಗೂ ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.