LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಾಯ್-ಕಲ್ಪಾ ಸಂಸ್ಥೆಗೆ ಖ್ಯಾತ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಬ್ರಾಂಡ್ ಅಂಬಾಸಿಡರ್

ಬೆಂಗಳೂರು: ಪ್ರಾಯೋಗಿಕ ಕಲಿಕೆ ಮತ್ತು ಸಮಗ್ರ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ಹಾಯ್- ಕಲ್ಪಾ ಗ್ರೂಪ್ ಆಫ್ ಸ್ಕೂಲ್ಸ್ ಗೆ ಭಾರತದ ಖ್ಯಾತ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಪಾಲುದಾರ ಮತ್ತು ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಈ ಸಹಭಾಗಿತ್ವವು ಶೈಕ್ಷಣಿಕ, ಶಿಸ್ತು ಮತ್ತು ಸರ್ವತೋಮುಖ ಅಭಿವೃದ್ಧಿಯಲ್ಲಿ ಶ್ರೇಷ್ಠತೆಗಾಗಿ ಹಾಯ್-ಕಲ್ಪಾದ ಬದ್ಧತೆಯನ್ನು ಇನ್ನಷ್ಟು ಬಲವರ್ಧನೆಗೊಳಿಸುತ್ತದೆ.

ಈ ಪಾಲುದಾರಿಕೆ ಮೂಲಕ ಕ್ರೀಡಾಪಟುವಾಗಿ ಚಾಹಲ್ ಅವರ ಸ್ಪೂರ್ತಿದಾಯಕ ಪ್ರಯಾಣವು ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಕ್ರೀಡಾ ಮನೋಭಾವದ ಮೌಲ್ಯಗಳನ್ನು ಹೊಂದಲು ಸಹಕಾರಿಯಾಗಲಿದೆ ಎಂದು ಹಾಯ್-ಕಲ್ಪಾ ತಿಳಿಸಿದೆ. ಜಾಗತಿಕ ಕ್ರಿಕೆಟ್ ಲೋಕದ ಐಕಾನ್ ಮತ್ತು ಯುವ ಸಮುದಾಯಕ್ಕೆ ರೋಲ್ ಮಾಡೆಲ್ ಆಗಿ, ಶಾಲೆಯೊಂದಿಗೆ ಚಾಹಲ್ ಅವರ ಪಾಲುದಾರಿಕೆಯು ಕ್ರೀಡೆ-ಸಂಯೋಜಿತ ಕಲಿಕೆ. ನಾಯಕತ್ವ ಮತ್ತು ಪಾತ್ರ-ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಚಾಹಲ್‌ ಅವರು ವಿಶೇಷ ಸಭೆ ಪಾಲ್ಗೊಂಡು ತಮ್ಮ ಪಾಲುದಾರಿಕೆಯ ಬಗ್ಗೆ ಮಾತುಗಳನ್ನಾಡಿದರು, `ಶಿಕ್ಷಣ ಮತ್ತು ಕ್ರೀಡೆಗಳು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಉದಯೋನ್ಮುಖ ಕ್ರೀಡಾ ಪ್ರತಿಭೆಗಳನ್ನು ಪೋಷಿಸಲು ಬದ್ಧವಾಗಿರುವ ಸಂಸ್ಥೆಯಾಗಿರುವ ಹಾಯ್-ಕಲ್ಪಾ ಗ್ರೂಪ್ ಆಪ್ ಸ್ಕೂಲ್ಸ್ ಜೊತೆಗೆ ಸೇರಲು ನಾನು ಉತ್ಸುಕನಾಗಿದ್ದೇನೆ. ಭಾರತದಾದ್ಯಂತ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಇದರ ಭಾಗವಾಗಿರುವುದನ್ನು ನಾನು ಎದುರು ನೋಡುತ್ತಿದ್ದೇನೆ" ಎಂದು ತಿಳಿಸಿದರು.

ಮಕ್ಕಳಿಗೆ ಕ್ರೀಡೆಯನ್ನು ಕಲಿಯಲು ಅನುಕೂಲವಾಗಲಿದೆ, ಅವರ ವಯಸ್ಸಿನ ಅನುಗುಣವಾಗಿ ಕ್ರೀಡೆ ಬಹಳ ಮುಖ್ಯ,  ಬೇಗೂರು, ಹುಳಿಮಾವು, ಬನ್ನೇರುಘಟ್ಟ ಸೇರಿದಂತೆ ಬೆಂಗಳೂರಿನ 6 ಕಡೆ ಕೇಂದ್ರವಿದೆ,ಮಕ್ಕಳಿಗೆ ನಮ್ಮ ಅನುಭವವನ್ನು ಹಂಚುವ ಕೆಲಸ ಮಾಡಲಾಗುತ್ತದೆ, ಅದು ಅವರ ವಿದ್ಯಾಭ್ಯಾಸದಲ್ಲಿ ಅನುಕೂವಾಗುತ್ತದೆ, ಶಿಕ್ಷಣದ ಜೊತೆ ಆಟಗಳಲ್ಲಿ ಹೆಚ್ಚು ಭಾಗವಹಿಸುವ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಹಾಯ್-ಕಲ್ಪಾ ಗ್ರೂಪ್ ಆಫ್ ಸ್ಕೂಲ್ಸ್ ನ ಸಂಸ್ಥಾಪಕ ಮತ್ತು ನಿರ್ದೇಶಕರಾದ ಶಾಲಿನಿ ಶರ್ಮಾ ಮತ್ತು ವಿಕಾಸ್ ಶರ್ಮಾ ಅವರು, `ಯಜಯವೇಂದ್ರ ಚಾಹಲ್ ಅವರು ನಮ್ಮ ವಿದ್ಯಾರ್ಥಿಗಳಲ್ಲಿ ನಾವು ಆಳವಾಗಿ ತುಂಬುವ ಶ್ರೇಷ್ಠತೆ ಮತ್ತು ನಿರ್ಣಯದ ಮನೋಭಾವವನ್ನು ಸಾಕಾರಗೊಳಿಸಿದ್ದಾರೆ. ಹಾಯ್-ಕಲ್ಪಾ ಅವರೊಂದಿಗಿನ ಒಡನಾಟವು ಯುವ ಮನಸ್ಸುಗಳನ್ನು ದೊಡ್ಡ ಕನಸನ್ನು ಕಾಣಲು, ಶ್ರಮವಹಿಸಿ ಕೆಲಸ ಮಾಡಲು ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಶ್ರೇಷ್ಠತೆಯನ್ನು ಸಾಧಿಸಲು ಪ್ರೇರೇಪಣೆ ನೀಡುತ್ತದೆ" ಎಂದು ಅಭಿಪ್ರಾಯಪಟ್ಟರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿದ್ಯಾರ್ಥಿಗಳು SPRINTFEST 2026 ನಲ್ಲಿ ₹40 ಲಕ್ಷ ಸಂಗ್ರಹಿಸುವ ಗುರಿಸಂಧ್ಯಾ ಜನ ಸಂಸ್ಕೃತಿ ಟ್ರಸ್ಟ್ ನಿಂದ 8ನೇ ವರ್ಷದ ವಾರ್ಷಿಕೋತ್ಸವ ಮಹಿಳಾ ದಿನಾಚರಣೆ ಪ್ರಯುಕ್ತ ಮಾಜಿ ಪ್ರಧಾನಿ ಸ್ಮರಣೆಯಲ್ಲಿ ಇಂದಿರಾ ಕ್ರೀಡೋತ್ಸವ-2026ಆಸ್ತಿ ತೆರಿಗೆ ಬಾಕಿ: ಸುಸ್ತಿದಾರರ ಆಸ್ತಿಗಳನ್ನು ನಗರ ಪಾಲಿಕೆಯ ಹೆಸರಿಗೆ ಬದಲಾಯಿಸಿಕೊಳ್ಳಲು ಕ್ರಮಸ್ವಚ್ಛ ಸರ್ವೇಕ್ಷಣ 2025-26 ರ ವಿಶೇಷ: ಉದ್ಯಾನವನ ಆಟದ ಮೈದಾನ ಸ್ವಚ್ಛಜಿಬಿಎಯಿಂದ ಬೀದಿ ನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಯಶಸ್ವಿನ್ಯಾಯವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು:ಮುಖ್ಯಮಂತ್ರಿ ಸಿದ್ದರಾಮಯ್ಯದಕ್ಷಿಣ ನಗರ ಪಾಲಿಕೆ 2026-27ನೇ ಸಾಲಿನ ಆಯವ್ಯಯ ಅಂದಾಜು ಪ್ರಸ್ತುತಿ ಪಡಿಸುವಿಕೆ ಕಾರ್ಯಕ್ರಮಕೆ ಎಸ್ ಆರ್ ಟಿ ಸಿ ಗೆ ಪ್ರತಿಷ್ಠಿತ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ-2026ಸರ್ಕಾರ ಶಿಕ್ಷಣ, ಕಾನೂನು ವ್ಯವಸ್ಥೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ