LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಳ: ರಾಮ್ ಮನೋಹರ

ಬೆಂಗಳೂರು: ಸಂಸ್ಕರಿಸಿದ ನೀರಿನ ಸದ್ಬಳಕೆಯಲ್ಲಿ ಬೆಂಗಳೂರು ಜಲಮಂಡಳಿ ದೇಶಕ್ಕೆ ಉತ್ತಮ ಮಾದರಿಯಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಮಂತ್ರಾಲಯದಿಂದ ಪ್ರಶಂಸೆಗೆ ಪಾತ್ರವಾಗಿದೆ.

ನಗರದ ಸಂಸ್ಕರಿಸಿದ ನೀರಿನ ಬಳಕೆಯ ಬಗ್ಗೆ ಹಾಗೂ ಅದರಿಂದ ಆಗಿರುವ ಪರಿಣಾಮಗಳ ಬಗ್ಗೆ ಮಾಹಿತಿ ಪಡೆಯಲು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಮಂತ್ರಾಲಯದ ಅಪರ ಕಾರ್ಯದರ್ಶಿ ಶ್ರೀಮತಿ ಡಿ ತಾರಾ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಜೊತೆಗೆ ಸಭೆ ನಡೆಸಿದರು.

ಸಂಸ್ಕರಿಸಿದ ನೀರಿನ ಸದ್ಬಬಳಕೆಯಲ್ಲಿ ದೇಶಕ್ಕೆ ಉತ್ತಮ ಮಾದರಿ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬೆಂಗಳೂರು ನಗರದ 1.3 ಕೋಟಿ ಜನರಿಗೆ ನೀರು ಒದಗಿಸುವ ಕಾರ್ಯದಲ್ಲಿ ತೊಡಗಿದೆ. ಬೆಂಗಳೂರು ನಗರದಲ್ಲಿ 1,480 ಎಂ ಎಲ್ ಡಿ ತ್ಯಾಜ್ಯ ನೀರು ಉತ್ಪಾದನೆ ಆಗುತ್ತದೆ. 1,381 ಎಂ ಎಲ್ ಡಿ ನೀರನ್ನು ಶುದ್ಧಿಕರಿಸುವ ಸೌಕರ್ಯ ಈಗಾಗಲೇ ನಿರ್ಮಿಸಲಾಗಿದ್ದು, ಪ್ರಸ್ತುತ 1,212 ಎಂ ಎಲ್ ಡಿ ತ್ಯಾಜ್ಯ ನೀರನ್ನು ಶುದ್ಧಿಕರಿಸಲಾಗುತ್ತಿದೆ. ಇದರ ಬಹುಪಾಲು 850 ಎಂ ಎಲ್ ಡಿ, ನೀರನ್ನು ಸದ್ಬಳಕೆ ಮಾಡಲಾಗುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ಎನ್ ಜಿ ಟಿ ಮಾನದಂಡಗಳ ಆಧಾರದ ಮೇಲೆ ಶುದ್ಧಿಕರಣ ನಡೆಸಲಾಗುತ್ತಿದೆ. ಇದರಿಂದ ಉತ್ಪತ್ತಿಯಾಗುವ ಸಂಸ್ಕರಿಸಿದ ನೀರನ್ನು ಸದ್ಬಳಕೆ ಮಾಡುವ ಮೂಲಕ ಬೆಂಗಳೂರು ನಗರದ ಸಾರಕ್ಕಿ ಕೆರೆ, ಅಗರಮ್ ಕೆರೆ, ವೇಂಗಯ್ಯ ನ ಕೆರೆ, ನಾಯಂಡ ಹಳ್ಳಿ ಕೆರೆ, ಮಾದವಾರ ಕೆರೆ, ಚಿಕ್ಕ ಬಾಣಾವರ ಕೆರೆ, ಕಲ್ಕೆರೆ ಕೆರೆ, ಅಲ್ಲಾಸಂದ್ರ ಕೆರೆ, ಜಕ್ಕುರು ಕೆರೆ, ಮಡಿವಾಳ ಕೆರೆ, ಹುಳಿಮಾವು ಕೆರೆ, ಎಲೆ ಮಲ್ಲಪ್ಪ ಚೆಟ್ಟಿ ಕೆರೆ, ಹಲಸೂರು ಕೆರೆ, ಮಾದವಾರ ಕೆರೆ, ಕೆಂಗೇರಿ ಕೆರೆ ಸೇರಿದಂತೆ 20 ಕೆರೆಗಳನ್ನು ತುಂಬಿಸಲಾಗುತ್ತಿದೆ. ಇದರಿಂದ ಆಯಾ ಪ್ರದೇಶದ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆ ಕಂಡಿದೆ ಎಂದು ಜಲಮಂಡಳಿ ಅಧ್ಯಕ್ಷರು ವಿವರಿಸಿದರು.

ನಗರದಲ್ಲಿ ಸಂಸ್ಕರಿಸಿದ ನೀರಿನ ಬಳಕೆಗೆ ವಿನೂತನ ಯೋಜನೆಗಳು

ಕಟ್ಟಡ ನಿರ್ಮಾಣ ಕಾಮಗಾರಿ ಗಳಿಗೆ ಸಂಸ್ಕರಿಸಿದ ನೀರು ಬಳಸುವುದನ್ನ ಕಡ್ಡಾಯಗೊಳಿಸಿರುವುದು. ಸಂಸ್ಕರಿಸಿದ ನೀರನ್ನು ಗೃಹ ಬಳಕೆಗೆ ಹೊರತು ಪಡಿಸಿ ಸ್ವಚ್ಛತೆ ಕಾರ್ಯಗಳಿಗೆ, ಗಾರ್ಡನಿಂಗ್ ಸೇರಿದಂತೆ ಹಲವಾರು ಇತರೆ ಕಾರ್ಯಗಳಿಗೆ ಬಳಸುವುದಕ್ಕೆ ಉತ್ತೇಜನ ನೀಡುತ್ತಿರುವುದು. ಗ್ರೀನ್ ಸ್ಟಾರ್ ಚಾಲೆಂಜ್ ಮೂಲಕ ಎಲ್ಲಾ ಬಳಕೆದಾರರಲ್ಲೂ ನೀರಿನ ಉಳಿತಾಯದ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿರುವುದು, ಕೈಗಾರಿಕೆಗಳಿಗೆ, ವಾಣಿಜ್ಯ ಸಂಸ್ಥೆಗಳಲ್ಲಿ ವ್ಯಾಪಕವಾಗಿ ಸಂಸ್ಕರಿಸಿದ ನೀರನ್ನು ಬಳಸುವಂತೆ ಸೂಚಿಸಿರುವುದು ಕೇಂದ್ರ ಜಲಸಂಪನ್ಮೂಲ ಮಂತ್ರಾಲಯದ ಅಧಿಕಾರಿಗಳಿಗೆ ಬಹಳ ಮೆಚ್ಚುಗೆಯಾಯಿತು.

ಸಂಸ್ಕರಿಸಿದ ನೀರಿನ ಸಮರ್ಪಕ ಬಳಕೆಯಿಂದ ನಾವು ಬೆಂಗಳೂರು ನಗರದ ನೀರಿನ ಕೊರತೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದಾಗಿದೆ. 850 ಎಂ ಎಲ್ ಡಿ ಸಂಸ್ಕರಿಸಿದ ನೀರನ್ನು ಮರುಬಳಕೆ ಮಾಡುತ್ತಿದ್ದೇವೆ. ಇನ್ನುಳಿದ 271 ಎಂ ಎಲ್ ಡಿ ಯಷ್ಟು ಸಂಸ್ಕರಿಸಿದ ನೀರನ್ನು ಸಮರ್ಪಕವಾಗಿ ಬಳಸಲು ಈಗಾಗಲೇ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಪ್ರಶಂಸಿಸಿರುವುದು ನಮ್ಮ ಮಂಡಳಿಯ ಉತ್ತಮ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬೆಂಗಳೂರಿನಲ್ಲಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಸಂತಸ ವ್ಯಕ್ತಪಡಿಸಿದರು.

 

 

 

 

 

 

 

 

 

 

 

 

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಡಿಸ್ಸಾ ಕಾಂಗ್ರೆಸ್ ಶಾಸಕರಿಗೆ ತಲಾ ಐದು ಕೋಟಿ ಆಮಿಷ: ಡಿಸಿಎಂ ಡಿ.ಕೆ. ಶಿವಕುಮಾರ್ಜಿಬಿಎ ವ್ಯಾಪ್ತಿಯಲ್ಲಿ ಮತ್ತಷ್ಟು ಜೈವಿಕ ಅನಿಲ ಘಟಕಗಳ ಸ್ಥಾಪನೆಗೆ ಕ್ರಮ : ಮಹೇಶ್ವರ್ ರಾವ್ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ನೂತನ ಬಸ್ಸುಗಳ ಉದ್ಘಾಟನೆಹೆಚ್.ವೈ.ಮೇಟಿಯವರ ಕನಸು ನನಸು :ಮುಖ್ಯಮಂತ್ರಿ ಸಿದ್ದರಾಮಯ್ಯಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಿಸಿ ಫಾರಂನಲ್ಲಿ ₹14 ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣಕ್ಕೆ ಅಡಿಗಲ್ಲು ಹಾಕಿದ ಕೇಂದ್ರ ಸಚಿವರುನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು: ಸಿಎಂ ಸಿದ್ದರಾಮಯ್ಯಉತ್ತರಾಖಂಡದ ಹರಿದ್ವಾರದಲ್ಲಿರುವ ಬಿಎಚ್‌ಇಎಲ್ ಕಾರ್ಖಾನೆಗೆ ಭೇಟಿ ನೀಡಿದ ಹೆಚ್.ಡಿ. ಕುಮಾರಸ್ವಾಮಿಗಂಭೀರ ರಕ್ತಹೀನತೆಯಿಂದ ಬಳಲುತ್ತಿದ್ದ ಯುವಕನಿಗೆ ಸ್ಟೆಮ್ ಸೆಲ್ ದಾನ ಮಾಡಿ ಜೀವರಕ್ಷಕಿಯಾದ ಬೆಂಗಳೂರಿನ ಮಹಿಳೆಫೋರ್ಟಿಸ್ ಹೆಲ್ತ್ಕೇರ್ ನಿಂದ 4 ವಿಶೇಷ ಚಿಕಿತ್ಸಾಲಯ ಆರಂಭ