LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತೈಲ ವರ್ಣ ಚಿತ್ರಗಳ ಮೂಲಕ ಪೌರಾಣಿಕ ಕಥೆಗಳ ಅನಾವರಣ, ಕನ್ನಡಿಗನ ಅದ್ಭುತ ಸಾಧನೆ

ಬೆಂಗಳೂರು: ಭಾರತೀಯ ಪುರಾಣಗಳ ಶ್ರೀಮಂತ ಇತಿಹಾಸದಲ್ಲಿ ಮಹಾಭಾರತವು ಸದಾ ಪ್ರಸ್ತುತವಾಗಿರುವ ಮಹಾಕಾವ್ಯವಾಗಿದೆ. ಮಹಾಭಾರತವು ಕುರುವಂಶದ ಕಥೆ, ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ಮತ್ತು ಪಾಂಡವರ ನಡುವಿನ ಧರ್ಮಯುದ್ಧದ ಕತೆಯನ್ನು ಮಹಾಭಾರತ ನವಿರಾಗಿ ಹೇಳುತ್ತದೆ. ಮಹಾಭಾರತದ ಯುದ್ಧದ ಕಥೆಯನ್ನು ಕಲೆಗಾರ ಸ್ವಾಮಿ ಸಿ.ಜೆ ಅವರು ಚಿತ್ರ ಕಲೆಯಲ್ಲಿವಿ ಶೇಷವಾಗಿ ಕಟ್ಟಿಕೊಟ್ಟಿದ್ದಾರೆ.

ವೃತ್ತಿಯಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿ ಆಗಿದ್ದರು, ಪ್ರೌವೃತ್ತಿಯಲ್ಲಿ ಕಲಾವಿದ , ಸಿ.ಜೆ ಅವರ ಮಹಾಭಾರತ ಸರಣಿಯು ಕೇವಲ ತೈಲ ವರ್ಣ ಚಿತ್ರಗಳ ಸಂಗ್ರಹವಲ್ಲ, ಬದಲಿಗೆ ಕಾಲಾತೀತವಾದ ಸಾಹಸಗಾಥೆಯ ಸೊಗಸಾದ ನಿರೂಪಣೆಯಾಗಿದೆ. ಸ್ವಾಮಿ ಅವರು ಕಾರ್ಪೊರೇಟ್ ಜಗತ್ತಿನಲ್ಲಿ 27 ವರ್ಷಕ್ಕೂ ಅಧಿಕ ಅನುಭವ ಹೊಂದಿರುವ ಅನುಭವಿ ಮ್ಯಾನೇಜ್‍ಮೆಂಟ್ ವೃತ್ತಿಪರರಾಗಿದ್ದು, ಕಲೆಯ ಬಗ್ಗೆ ಅತ್ಯುತ್ಸಾಹ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಈ ಸೃಜನಶೀಲ ಪ್ರಯಾಣವನ್ನು ಅವರು 2018 ರಲ್ಲಿ ಪ್ರಾರಂಭಿಸಿ ಫೆಬ್ರವರಿ 2023 ರವರೆಗೆ 5 ವರ್ಷಗಳ ಅವಧಿಯಲ್ಲಿ 178ಕ್ಕೂ ಅಧಿಕ ಮಹಾಭಾರತದ ಕಲಾಕೃತಿಗಳನ್ನು ರಚಿಸುವ ಮೂಲಕ ಮಹಾಭಾರತ ಕಲಾರಸಿಕರಿಗೆ ಕೊಡುಗೆಯನ್ನು ನೀಡಿದ್ದಾರೆ.

ಮಹಾಭಾರತದ ಸರಣಿಯನ್ನು ಅನಾವರಣಗೊಳಿಸಿದ ಬಳಿಕ ಸ್ವಾಮಿ ಸಿ.ಜೆ ಅವರು ಮಾತನಾಡಿ, ನಿಜಕ್ಕೂ ನಾನು ರೋಮಾಂಚಿತನಾಗಿದ್ದೇನೆ. ಐದು ವರ್ಷಗಳ ಅವಧಿಯನ್ನು ಮೀಸಲಿಟ್ಟು 24’’ * 30’’ ಅಳತೆಯ ಕ್ಯಾನ್ವಾಸ್‍ಗಳಲ್ಲಿ ರಚಿಸಿರುವ ಮಹಾಭಾರತದ ಸರಣಿಯ 178 ತೈಲವರ್ಣ ಫ್ರೇಮ್-ಟು-ಫ್ರೇಮ್ ತೈಲವರ್ಣ ಕಲಾಕೃತಿಗಳನ್ನು ಚಿತ್ರಕಲಾ ರಸಿಕರಿಗೆ ಹಾಗು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಭಾಗ್ಯ ನನ್ನದಾಗಿದೆ. ಈ ಸರಣಿಗಾಗಿ ತೆಗೆದುಕೊಂಡಿರುವ ಸಮಯವು ಇಟಲಿಯ ಕಲಾವಿದ ಜಿಯಂಪಾವ್ಲ್ವ್ ಥೋಮಸೆಟ್ಟಿ ಅವರ ಟೈಮ್‍ಲೈನ್ ಅನ್ನು ಮೀರಿಸಿದೆ. ಭಾರತೀಯ ಸಂಸ್ಕøತಿ ಮತ್ತು ಮಹಾಭಾರತದ ಅಧ್ಯಯನಕ್ಕಾಗಿ ಹೋಲಿಸಬಹುದಾದ ಅವಧಿಯನ್ನು ಮೀಸಲಿಟ್ಟರೂ, ಇಟಾಲಿಯನ್ ಕಲಾವಿದ ದೊಡ್ಡ ಕ್ಯಾನ್ವಾಸ್‍ಗಳಲ್ಲಿ ಮಹಾಭಾರತದ 25 ವರ್ಣಚಿತ್ರಗಳನ್ನು ರಚಿಸಲು 12 ವರ್ಷಗಳನ್ನು (ಅಧ್ಯಯನಕ್ಕಾಗಿ 5 ವರ್ಷ ಮತ್ತು ಕಲಾಕೃತಿ ರಚಿಸಲು 7 ವರ್ಷ) ತೆಗೆದುಕೊಂಡರು. ವಾಸ್ತವವಾಗಿ ಈ ಮಟ್ಟದ ಯಶಸ್ಸು ಸಾಧಿಸಲು ಜಿಯಂಪಾವ್ಲ್ವ್ ಥೋಮಸೆಟ್ಟಿ ಅವರೇ ನನಗೆ ಸ್ಫೂರ್ತಿ.ಶೌರ್ಯ, ನೈತಿಕತೆ ಮತ್ತು ಬ್ರಹ್ಮಾಂಡದ ಸಮತೋಲನವೇ ಮಹಾಭಾರತದ ಮೂಲತಿರುಳಾಗಿದೆ ಎಂದರು.

ಇವರ ತೈಲ ವರ್ಣದ ಚಿತ್ರಗಳು ಎಲ್ಲವೂ ಒಂದೇ ಫ್ರೀಂನಲ್ಲಿ ಮೂಡಿಬಂದಿರುವುದು ಮತ್ತೊಂದು ವಿಶೇಷವಾಗಿದೆ. ಸನ್ನಿವೇಶಗಳು ಸಣ್ಣ, ದೊಡ್ಡದು, ಇದ್ದಾಗ ಸರಿದೂಗಿಸುವುದು ಕಷ್ಟದ ಸಂಗತಿ, ಆದರೂ ಅವೆಲ್ಲವನ್ನೂ ಮೆಟ್ಟಿ ನಿಂತು ಚಿತ್ರ ಕಲೆಯನ್ನು ಮಾಡಿದ್ದೇನೆ ಎಂದರು.

ಕಥೆ ಹೇಳುವ ಕಲಾತ್ಮಕ ತಂತ್ರ:

ಕಲಾಕೃತಿಗಳ ಜತೆಯಲ್ಲಿಯೇ ಶ್ರೀ ಸ್ವಾಮಿ ಅವರು ಯುಟ್ಯೂಬ್‍ನಲ್ಲಿ 39 ಆಕರ್ಷಕ ಸಂಚಿಕೆಗಳಲ್ಲಿ ಮಹಾಭಾರತದ ಕಥೆಯನ್ನು ಮೂರು ಭಾಷೆಗಳಲ್ಲಿ (ಕನ್ನಡ, ಹಿಂದಿ ಮತ್ತು ಇಂಗ್ಲಿಷ್) ಹೇಳಲಿದ್ದಾರೆ. ಶ್ರೀ ಪ್ರಕಾಶ್ ಹೆಗಡೆ ಅವರ ಮಧುರವಾದ ಸಂಗೀತ ಸಂಯೋಜನೆಯು ಕಲಾಪಯಣಕ್ಕೆ ಮಾಧುರ್ಯದ ರಂಗು ತುಂಬಿದೆ.

ಬಿಡುಗಡೆ ಮತ್ತು ಲಭ್ಯತೆ: ಮಹಾಭಾರತ ಕಲಾಕೃತಿಗಳ ಮುದ್ರಿತ ಚಿತ್ರಗಳು (Print on Canvas and Print on Paper) ಮಕರ ಸಂಕ್ರಾಂತಿಯ ಮಹತ್ವದ ದಿನವಾದ ಜನವರಿ 14, 2024 ರಿಂದ www.swamyarts.com ನಲ್ಲಿ ಖರೀದಿಗೆ ಲಭ್ಯವಿದೆ. ಅದೇವೇಳೆ ಯುಟ್ಯೂಬ್ ಸರಣಿಯೂ @Swamychannel ನಲ್ಲಿ ಪ್ರಸಾರವಾಗಲಿದೆ. ಭಾರತದ ಶ್ರೇಷ್ಠ ಮತ್ತು ಕಾಲಾತೀತ ಮಹಾಕಾವ್ಯದಲ್ಲಿ ಲೀನಗೊಳ್ಳುವ ಅನುಭವ ಪಡೆಯುವುದಕ್ಕಾಗಿ ಯೂಟ್ಯೂಬ್ ಚಾನೆಲ್ (@Swamychannel) ಗೆ ಚಂದಾದಾರರಾಗಬಹುದು (Subscribe to YouTube: @swamychannel).
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಸ್ತಿ ತೆರಿಗೆ ಬಾಕಿ: ಸುಸ್ತಿದಾರರ ಆಸ್ತಿಗಳನ್ನು ನಗರ ಪಾಲಿಕೆಯ ಹೆಸರಿಗೆ ಬದಲಾಯಿಸಿಕೊಳ್ಳಲು ಕ್ರಮಸ್ವಚ್ಛ ಸರ್ವೇಕ್ಷಣ 2025-26 ರ ವಿಶೇಷ: ಉದ್ಯಾನವನ ಆಟದ ಮೈದಾನ ಸ್ವಚ್ಛಜಿಬಿಎಯಿಂದ ಬೀದಿ ನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಯಶಸ್ವಿನ್ಯಾಯವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು:ಮುಖ್ಯಮಂತ್ರಿ ಸಿದ್ದರಾಮಯ್ಯದಕ್ಷಿಣ ನಗರ ಪಾಲಿಕೆ 2026-27ನೇ ಸಾಲಿನ ಆಯವ್ಯಯ ಅಂದಾಜು ಪ್ರಸ್ತುತಿ ಪಡಿಸುವಿಕೆ ಕಾರ್ಯಕ್ರಮಕೆ ಎಸ್ ಆರ್ ಟಿ ಸಿ ಗೆ ಪ್ರತಿಷ್ಠಿತ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ-2026ಸರ್ಕಾರ ಶಿಕ್ಷಣ, ಕಾನೂನು ವ್ಯವಸ್ಥೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯಪ್ರತಿಯೊಬ್ಬರೂ ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯವಿಶ್ವ ಕರ್ಮ ಸಮಾಜದ ಮಹಿಳಾ ವಿಭಾಗದಿಂದ ಮಹಿಳಾ ದಿನಾಚಾರಣೆಕಿಸ್ನಾ ವಜ್ರ ಮತ್ತು ಚಿನ್ನದ ಆಭರಣಗಳ ಸಂಸ್ಥೆಯಿಂದ ಮಹಿಳಾ ದಿನಾಚರಣೆ