Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

3 ವರ್ಷಗಳ ಬಳಿಕ ನೀರಿನಿಂದ ಹೊರಬಂದ KRS ಪುರಾತನ ದೇವಾಲಯ

ಮಂಡ್ಯ: ಹಳೇ ಮೈಸೂರು ಭಾಗದ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಅಣೆಕಟ್ಟೆಯ ನೀರಿನ ಮಟ್ಟ ದಿನೇದಿನೇ ಇಳಿಕೆಯಾಗುತ್ತಿದ್ದು, ಕೆಆರ್‌ಎಸ್‌ ಹಿನ್ನೀರಿನಲ್ಲಿ ಮುಳುಗಿದ್ದ ಶ್ರೀ ನಾರಾಯಣಸ್ವಾಮಿ ದೇಗುಲ (Sri Narayanaswamy Temple) ಮೂರು ವರ್ಷಗಳ ಬಳಿಕ ಮತ್ತೆ ಸಂಪೂರ್ಣವಾಗಿ ಗೋಚರಿಸಿದೆ. ಕೆಆರ್‌ಎಸ್‌ (KRS) ಹಿನ್ನೀರಿನ ಬೋರೆ ಆನಂದೂರು ಸಮೀಪ ನೀರಿನಲ್ಲಿ ಮುಳುಗಿದ್ದ ಈ ಪುರಾತನ ದೇಗುಲ ಇದೀಗ ಮತ್ತೆ ಮೇಲಕ್ಕೆ ಕಾಣಿಸಿಕೊಂಡಿದೆ. ಕೃಷ್ಣರಾಜಸಾಗರ ಅಣೆಕಟ್ಟೆ ನಿರ್ಮಾಣದ ವೇಳೆ ಸ್ಥಳಾಂತರಗೊಂಡಿದ್ದ ಈ ದೇವಾಲಯದ ಗೋಪುರ ಹಾಗೂ ಕಂಬಗಳು ಮಾತ್ರ ಈಗಲೂ ಉಳಿದಿವೆ. ಸುತ್ತಮುತ್ತಲಿನ ಹತ್ತುಕ್ಕೂ ಹೆಚ್ಚು ಗ್ರಾಮಗಳ ಮನೆದೇವರಾಗಿರುವ ಶ್ರೀ ನಾರಾಯಣಸ್ವಾಮಿಗೆ ಈಗ ಮಜ್ಜಿಗೆಪುರ ಗ್ರಾಮದಲ್ಲಿ ಹೊಸ ದೇವಸ್ಥಾನ ನಿರ್ಮಿಸಲಾಗಿದ್ದು, ಅಲ್ಲೇ ಮೂಲ ಮೂರ್ತಿಗೆ ಪ್ರತಿದಿನ ಪೂಜೆ ನಡೆಯುತ್ತಿದೆ. 2019ರ ಬಳಿಕ 2023ರಲ್ಲಿ ದೇಗುಲ ಕಾಣಿಸಿಕೊಂಡಿದ್ದು, ಇದೀಗ ಮತ್ತೊಮ್ಮೆ ಹಿನ್ನೀರಿನಲ್ಲಿ ಹೊರಹೊಮ್ಮಿದೆ. ಅಣೆಕಟ್ಟೆ ನಿರ್ಮಾಣದ ಸಂದರ್ಭದಲ್ಲಿ ಗ್ರಾಮಗಳ ಜೊತೆಗೆ ದೇವರನ್ನೂ ಮಜ್ಜಿಗೆಪುರಕ್ಕೆ ಸ್ಥಳಾಂತರಿಸಲಾಗಿತ್ತು. ಇತ್ತೀಚೆಗೆ ಮಳೆಯ ಕೊರತೆಯಿಂದ ಹಿನ್ನೀರಿನ ಪ್ರದೇಶಗಳಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದೆ ರೈತರು ಸಂಕಷ್ಟ ಎದುರಿಸುತ್ತಿದ್ದು, ಅಣೆಕಟ್ಟೆಯ ನೀರಿನ ಮಟ್ಟ ನಿರಂತರ ಕುಸಿಯುತ್ತಿರುವುದು ನೀರಿನ ಅಭಾವದ ಆತಂಕವನ್ನು ಹೆಚ್ಚಿಸಿದೆ. ಬೋರೆ ಆನಂದೂರು ಗ್ರಾಮದ ಸಮೀಪದ ಕಗ್ಗಲಿ ಅರಣ್ಯ ವಲಯದಲ್ಲಿ ಈರಣ್ಣ ಮತ್ತು ಸೂರಣ್ಣ ದೇವರ ಎರಡು ಕಲ್ಲಿನ ವಿಗ್ರಹಗಳೂ ಕಾಣಿಸಿಕೊಂಡಿವೆ. ಶಿವಪೂಜೆಯ ದೃಶ್ಯಗಳು ಹಾಗೂ ವಿವಿಧ ಭಂಗಿಗಳ ಕೆತ್ತನೆಗಳು ಈ ಶಿಲೆಗಳಲ್ಲಿ ಗಮನಸೆಳೆಯುತ್ತಿವೆ. ಹಳೆಗನ್ನಡದ ಶಾಸನಗಳೂ ಕಂಡುಬಂದಿದ್ದರೂ, ವರ್ಷಗಳ ಕಾಲ ಹಿನ್ನೀರಿನಲ್ಲಿ ಮುಳುಗಿದ್ದರಿಂದ ಅವು ಮಸುಕಾಗಿವೆ. ಹಿನ್ನೀರಿನ ಎತ್ತರ ಪ್ರದೇಶವಾಗಿರುವ ಕಾರಣ ನೀರಿನ ಸಂಗ್ರಹ ಕಡಿಮೆಯಾಗದಂತೆ ಇಲ್ಲಿ ಹಿಂದೆ ಅಡ್ಡಬಂಡೆ ನಿರ್ಮಿಸಲಾಗಿದ್ದು, ಆ ಸಮಯದಲ್ಲೇ ಈ ಕಲ್ಲುಗಳನ್ನು ಪ್ರತಿಷ್ಠಾಪಿಸಿರಬಹುದು ಎಂದು ಗ್ರಾಮದ ಹಿರಿಯರು ಅಭಿಪ್ರಾಯಪಟ್ಟಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗಮಂಗಲ: ತಾಲೂಕಿನ ರಾ ಹೆ 75ರ ವರಾಹಸಂದ್ರ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ : ಬಸ್ ಚಾಲಕ ದುರ್ಮರಣದೇವರಾಜ್ ಎಂಬ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ, ಪೊಲೀಸ್ ತನಿಖೆಗೆ ಗ್ರಾಮಸ್ಥರ ಒತ್ತಾಯಉತ್ತಮ ವ್ಯಕ್ತಿತ್ವ, ಚಾಣಾಕ್ಷ ಕಾರ್ಯವೈಖರಿ; ವರ್ಗಾವಣೆಯಾದ ಚಾ ವಿ ಸ ನಿ ನಿ ಯ AE ಮತ್ತು ಪ್ರಭಾರ AEE ಅವರಿಗೆ ಭಾವಪೂರ್ಣ ಬೀಳ್ಕೊಡುಗೆಹಾಸನ: ನಿರ್ಮಾಣ ಹಂತದ ಮನೆಯ ಕ್ಯೂರಿಂಗ್ ವೇಳೆ ವಿದ್ಯುತ್ ಅವಘಡ – ಕುಣಿಗಲ್ ಆರ್‌ಎಫ್‌ಒ ಜಗದೀಶ್ ಸಾವುಟಾಟಾ ಪವರ್ ಲೈಸೆನ್ಸ್‌ಗೆ ವಿರೋಧ: ಹೆಚ್.ಡಿ. ರೇವಣ್ಣರಿಂದ ಸಂಪೂರ್ಣ ಬೆಂಬಲವಿದ್ಯುತ್ ವಿತರಣಾ ಖಾಸಗೀಕರಣ ವಿರೋಧಿಸಿ ಸಂಸದರಿಗೆ ಮನವಿಇರಾನ್–ಅಮೆರಿಕ ಶಾಂತಿ ಮಾತುಕತೆ ನಡುವೆ ಖಮೇನಿ ಅಂತ್ಯಕ್ರಿಯೆ ದಿನಾಂಕ ಘೋಷಣೆಮಧ್ಯಪ್ರಾಚ್ಯದಲ್ಲಿ ಕಾಳಗದ ಕಾವು: US ನೌಕಾನೆಲೆ ಮೇಲೆ ಇರಾನ್ ದಾಳಿ, ಪ್ರತೀಕಾರ ಅನಿವಾರ್ಯ ಎಂದ ಟ್ರಂಪ್13 ಕಿ.ಮೀ ಕಾಮಗಾರಿ ಪೂರ್ಣಗೊಂಡ ತುಮಕೂರು–ಚಿತ್ರದುರ್ಗ ರೈಲು ಯೋಜನೆ; ಸಂಪೂರ್ಣ ಮಾರ್ಗ ಯಾವಾಗ ಸಿದ್ಧ?ಬಂಡೀಪುರದಲ್ಲಿ ಭದ್ರತಾ ಲೋಪ: ರೌಡಿ ಶೀಟರ್ ಗ್ಯಾಂಗ್‌ನ ಎಣ್ಣೆ ಪಾರ್ಟಿ ಬಹಿರಂಗ