LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರು ಉತ್ತರದಿಂದ ಕು.ಶೋಭಾ ಕರಂದ್ಲಾಜೆ, ಕೇಂದ್ರದಿಂದ ಪಿಸಿ ಮೋಹನ್ ನಾಮಪತ್ರ ಸಲ್ಲಿಕೆ

ಬೆಂಗಳೂರು: ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಎನ್‌.ಡಿ.ಎ ಅಭ್ಯರ್ಥಿಯಾದ ಕು.ಶೋಭಾ ಕರಂದ್ಲಾಜೆರವರು ಮೈಸೂರು ಬ್ಯಾಂಕ್ ವೃತ್ತದ ಕಂದಾಯ ಭವನದಲ್ಲಿ  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ನಾನು ಪಣತೊಟ್ಟು ಕೆಲಸ ಮಾಡುತ್ತೇನೆ, ನಿಮ್ಮೆಲ್ಲರ ಸಹಕಾರ ನನಗೆ ಅವಶ್ಯಕತೆ ಬೇಕಾಗಿದೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಕೈಜೋಡಿಸಿರುವುದು ಮತ್ತಷ್ಟು ಬಲಬಂದಂತಾಗಿದೆ ಎಂದರು.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಎರಡು ಶಕ್ತಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಕಾಂಗ್ರೆಸ್ನ ದುರಾಡಳಿತವನ್ನು ಈ ಚುನಾವಣೆಯಲ್ಲಿ ತೊಡಗಿಸುವ ನಿಟ್ಟಿನಲ್ಲಿ ಕೈಜೋಡಿಸಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು. ನರೇಂದ್ರ ಮೋದಿ ಅವರ ಸಾಧನೆಯನ್ನು ತಿಳಿಸಲು ಹಳ್ಳಿಯ ಪ್ರತಿಯೊಂದು ಮನೆ ಮನೆಗೆ ತೆರಳ ಅವರ ವಿಚಾರಧಾರೆಗಳನ್ನು ತಿಳಿಸುವ ಮಾಡಬೇಕೆಂದು ಕಾರ್ಯಕರ್ತರಿಗೆ ಮತ್ತು ಪಕ್ಷದ ನಾಯಕರಿಗೆ ತಿಳಿಸಿದರು.

ನನಗೆ ವಿಶ್ವಾಸವಿದ್ದು ರಾಜ್ಯದಲ್ಲಿ 28 ಕ್ಷೇತ್ರಗಳಿಗೆ ಬಿಜೆಪಿ 28 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿದರು.  ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷದವರು ಸೇರಿಕೊಂಡು ಬಿಜೆಪಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಚುನಾವಣೆಯನ್ನು ಎದುರಿಸಬೇಕಾಗಿದೆ ಎಂದರು. ಈ ಮೂಲಕ ಅತ್ಯಧಿಕ ಮತಗಳನ್ನು ಬಿಜೆಪಿಗೆ ಜನತೆಯ ಆಶೀರ್ವಾದ ನೀಡಿ ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ, ಮಹಾಲಕ್ಷ್ಮೀ ಲೇಔಟ್ʼನ ಶಾಸಕರಾದ  ಕೆ.ಗೋಪಾಲಯ್ಯ ಅವರು, ದಾಸರಹಳ್ಳಿ ಶಾಸಕರಾದ  ಎಸ್. ಮುನಿರಾಜು ಅವರು, ಕೆ.ಆರ್.ಪುರಂ ಶಾಸಕರಾದ ಭೈರತಿ ಬಸವರಾಜು ಅವರು, ವಿಧಾನಪರಿಷತ್‌ ಸದಸ್ಯರಾದ ಗೋಪಿನಾಥ್ ರೆಡ್ಡಿಯವರು, ಭಾರತೀ ಶೆಟ್ಟಿಯವರು, ಚಲವಾದಿ ನಾರಾಯಣ ಸ್ವಾಮಿಯವರು, ಜಿಲ್ಲಾಧ್ಯಕ್ಷರಾದ ಹರೀಶ್ ಅವರು, ಚುನಾವಣಾ ಸಂಚಾಲಕರಾದ ಸಚ್ಚಿದಾನಂದ ಮೂರ್ತಿಯವರು, ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ತಮ್ಮೇಶ್ ಗೌಡರು, ಜೆಡಿಎಸ್ ಯಶವಂತಪುರದ ಅಧ್ಯಕ್ಷರಾದ ಜವರಾಯಿ ಗೌಡರು, ಕಟ್ಟಾ ಜಗದೀಶ್ ಅವರು, ಮುರಳಿಯವರು, ಮಾಜಿ ಶಾಸಕರಾದ ನೆಲ ನರೇಂದ್ರ ಬಾಬುರವರು, ಮಾಜಿ ಜಿಲ್ಲಾಧ್ಯಕ್ಷರಾದ ನಾರಾಯಣ ಗೌಡರು ಹಾಗೂ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪಿ ಸಿ ಮೋಹನ್ ಉಮೇದುವಾರಿಕೆ ಸಲ್ಲಿಕೆ

ಇನ್ನು ಬೆಂಗಳೂರು ಕೇಂದ್ರದಿಂದ ಪಿಸಿ ಮೋಹನ್ ಅವರು ತಮ್ಮ ಉಮೇದುವಾರಿಕೆಯನ್ನು ಬಿಬಿಎಂಪಿ ಕಚೇರಿಯಲ್ಲಿ.

ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೆತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಪಿ.ಸಿ ಮೋಹನ್ ರವರು ಬುಧವಾರ ಪಾಲಿಕೆ ಕೆಂದ್ರ ಕಛೇರಿಯಲ್ಲಿರುವ ನಾಮಪತ್ರ ಸಲ್ಲಿಕೆಯ ಕೇಂದ್ರಕ್ಕೆ ತೆರಳಿ ಬೆಂಗಳೂರು ಕೇಂದ್ರ ಚುನಾವಣಾಧಿಕಾರಿಯಾದ ಡಾ. ಕೆ. ಹರೀಶ್ ಕುಮಾರ್ ರವರಿಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಂಗ್ರೆಸ್ ಪಕ್ಷಕ್ಕೆ ವಿಚ್ಛೇದನ ಕೊಟ್ಟಿದ್ದಕ್ಕೆ ಕಾರಣ ಕೊಟ್ಟ ಮಾಜಿ ಪ್ರಧಾನಿಗಳುಅಂಕಿ-ಅಂಶಗಳ ಬಜೆಟ್‌, ದಿಕ್ಕು ದಿಸೆಯಿಲ್ಲದ ಆಯವ್ಯಯ’: ಅರವಿಂದ ಬೆಲ್ಲದಮಾ.21ರಂದು ರಾಮಾನಂದಾಚಾರ್ಯರ ಆಧ್ಯಾತ್ಮಿಕ ಪ್ರವಚನಗ್ರಾಮ ಸಹಾಯಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಸಹಕಾರಿ ಧುರೀಣ ಕೆ.ಹೆಚ್ ಪಾಟೀಲರು ಅಪರೂಪದ ರಾಜಕಾರಣ: ಮುಖ್ಯಮಂತ್ರಿ ಸಿದ್ದರಾಮಯ್ಯಜನ್ಮಧಾತೆ ಕನ್ನಡ ಸಿನೆಮಾ ಮಾ.20 ರಂದು ಪ್ರದರ್ಶನಕನ್ನಡಿಗರ ಉದ್ಯೋಗಿಗಳನ್ನು ಕೇಂದ್ರ ಸರ್ಕಾರ ಅತಂತ್ರ ಸ್ಥಿತಿಗೆ ತಳ್ಳಿದೆ: ಸಿಎಂಹಲಸೂರು ಕೆರೆ ಹೂಳೆತ್ತುವುದರಿಂದ ನೀರು ಸಂಗ್ರಹ ಅಂತರ್ಜಲ ವೃದ್ಧಿ :ಚೋಳನ್ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆ, ಒಟ್ಟು 78 ಲಕ್ಷ ರೂ ದಂಡಎಲ್ ಪಿಜಿ ಸಿಲಿಂಡರ್ ಅಭಾವ ನೀಗಿಸಲು ಕೇಂದ್ರಕ್ಕೆ ಒತ್ತಾಯ-CM ಸಿದ್ದರಾಮಯ್ಯ