E-PAPER
13 Nov 2026, 08:21:26 PM|
Gold₹13793/gGold24K ₹13,793/g - 22K ₹12,633/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮೈಸೂರಿನಲ್ಲಿ ‘ಭಾರತ ವನ’ ಯೋಜನೆಗೆ ನಿರ್ಮಲಾ ಸೀತಾರಾಮನ್ ಚಾಲನೆ

ಮೈಸೂರು : ನಗರದ ಚಾಮುಂಡಿ ಬೆಟ್ಟ ರಸ್ತೆಯ ಕೆ.ಸಿ. ಉದ್ಯಾನವನದ ಒಟ್ಟು 4.5 ಎಕರೆ ಪ್ರದೇಶದಲ್ಲಿ 45 ಸಾವಿರ ಸ್ಥಳೀಯ ಪ್ರಭೇದಗಳ ಗಿಡಗಳನ್ನು ನೆಡುವ ಕಾರ್ಯಕ್ಕೆ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಚಾಲನೆ ನೀಡಿದರು.

ಕೆ.ಸಿ. ಬಡಾವಣೆ ಉದ್ಯಾನವನದಲ್ಲಿ ಸ್ವತಃ ಸಸಿಯನ್ನು ನೆಡುವ ಮೂಲಕ ‘ಭಾರತ ವನ’ ಯೋಜನೆಗೆ ಅವರು ವಿಧ್ಯುಕ್ತವಾಗಿ ಚಾಲನೆ ನೀಡಿದರು. ಈ ಯೋಜನೆಯಡಿ ಕ್ಯಾಚ್ ಫೌಂಡೇಶನ್ ವತಿಯಿಂದ ನಾಲ್ಕು ಎಕರೆ ಪ್ರದೇಶದಲ್ಲಿ 40 ಸಾವಿರ ಗಿಡಗಳು ಹಾಗೂ ಎನ್ವಿರೋ ಕ್ರಿಯೇಟರ್ಸ್ ಫೌಂಡೇಶನ್ ವತಿಯಿಂದ ಅರ್ಧ ಎಕರೆ ಪ್ರದೇಶದಲ್ಲಿ 5 ಸಾವಿರ ಗಿಡಗಳನ್ನು ನೆಡಲಾಗುತ್ತಿದೆ.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಸ್ಥಳೀಯ ಶಾಸಕರು, ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ, ಹಿರಿಯ ಸರ್ಕಾರಿ ಅಧಿಕಾರಿಗಳು, ಎಸ್‌ಬಿಐ, ಎಸ್‌ಬಿಐ ಫೌಂಡೇಶನ್ ಹಾಗೂ ಅನುಷ್ಠಾನ ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳು ಮತ್ತು 500ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯನಗರ 4ನೇ ಹಂತದ ಆರು ಉದ್ಯಾನವನಗಳಲ್ಲಿಯೂ ಹಸಿರೀಕರಣ :

ಕೆ.ಸಿ. ಬಡಾವಣೆ ಉದ್ಯಾನವನದ ಜೊತೆಗೆ ವಿಜಯನಗರ 4ನೇ ಹಂತದಲ್ಲಿರುವ ಆರು ಉದ್ಯಾನವನಗಳಲ್ಲಿಯೂ ಹಸಿರೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಉದ್ಯಾನವನಗಳಲ್ಲಿನ ಕಾರ್ಯಕ್ರಮಕ್ಕೆ ಗಣ್ಯರು ವರ್ಚುವಲ್ ಮೂಲಕ ಚಾಲನೆ ನೀಡಿದರು. ಇಲ್ಲಿಯೂ 500ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪರಿಸರ ಸಂರಕ್ಷಣೆಯ ಮಹತ್ವ ಸಾರಿದರು.

ಈ ಯೋಜನೆಯಡಿ ಕ್ಯಾಚ್ ಫೌಂಡೇಶನ್ ಮತ್ತು ಎನ್ವಿರೋ ಕ್ರಿಯೇಟರ್ಸ್ ಫೌಂಡೇಶನ್ ಸಂಸ್ಥೆಗಳು ತಲಾ ಒಂದು ಲಕ್ಷದಂತೆ ಒಟ್ಟು ಎರಡು ಲಕ್ಷ ಸ್ಥಳೀಯ ಪ್ರಭೇದಗಳ ಗಿಡಗಳನ್ನು ನೆಡುವ ಜವಾಬ್ದಾರಿ ವಹಿಸಿಕೊಂಡಿವೆ.

ಮೂರು ವರ್ಷಗಳ ಕಾಲ ಗಿಡಗಳ ನಿರ್ವಹಣೆ :

ಈ ಯೋಜನೆಯ ಪ್ರಮುಖ ವಿಶೇಷತೆಯೆಂದರೆ ಗಿಡಗಳನ್ನು ನೆಡುವುದಕ್ಕೆ ಮಾತ್ರ ಸೀಮಿತವಾಗದೆ, ನೆಡಲಾಗುವ ಎಲ್ಲಾ ಎರಡು ಲಕ್ಷ ಗಿಡಗಳನ್ನು ಮುಂದಿನ ಮೂರು ವರ್ಷಗಳವರೆಗೆ ಪೋಷಿಸುವ, ನಿರ್ವಹಿಸುವ ಹಾಗೂ ಸಂರಕ್ಷಿಸುವ ಜವಾಬ್ದಾರಿಯನ್ನು ಅನುಷ್ಠಾನ ಪಾಲುದಾರ ಸಂಸ್ಥೆಗಳೇ ವಹಿಸಿಕೊಂಡಿವೆ.

ಇದರಿಂದ ಗಿಡಗಳನ್ನು ನೆಡುವ ಸಂಖ್ಯೆಯಷ್ಟೇ ಅಲ್ಲದೆ, ಅವುಗಳ ಉಳಿವು, ಆರೋಗ್ಯಕರ ಬೆಳವಣಿಗೆ ಮತ್ತು ದೀರ್ಘಕಾಲೀನ ಪರಿಸರ ಪ್ರಯೋಜನಗಳಿಗೂ ಆದ್ಯತೆ ನೀಡಿದಂತಾಗಿದೆ.

ನಗರದ ವಿವಿಧ ಉದ್ಯಾನವನಗಳಲ್ಲಿ ದಟ್ಟ ಹಸಿರು ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದರಿಂದ ಜೀವವೈವಿಧ್ಯ ಸಂರಕ್ಷಣೆ, ಇಂಗಾಲದ ಹೀರಿಕೆ, ಧೂಳು ಮತ್ತು ವಾಯುಮಾಲಿನ್ಯ ನಿಯಂತ್ರಣ, ಸ್ಥಳೀಯ ತಾಪಮಾನ ತಗ್ಗಿಸುವುದು ಹಾಗೂ ನಗರದ ಒಟ್ಟಾರೆ ಪರಿಸರ ಗುಣಮಟ್ಟ ಸುಧಾರಿಸುವಂತಹ ದೀರ್ಘಕಾಲೀನ ಪ್ರಯೋಜನಗಳನ್ನು ನಿರೀಕ್ಷಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಒಟ್ಟಾರೆ 1,000ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿರುವುದು ವಿಶೇಷವಾಗಿತ್ತು. ಯುವ ಪೀಳಿಗೆಯಲ್ಲಿ ಪರಿಸರ ಜಾಗೃತಿ ಮೂಡಿಸುವುದರ ಜೊತೆಗೆ ಪ್ರಕೃತಿ ಸಂರಕ್ಷಣೆಯ ಬಗ್ಗೆ ಜವಾಬ್ದಾರಿಯುತ ಮನೋಭಾವ ಬೆಳೆಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ.

ಯೋಜನೆಯ ಯಶಸ್ಸು ನೆಡಲಾದ ಗಿಡಗಳ ಸಂಖ್ಯೆಯಿಂದ ಮಾತ್ರ ಅಳೆಯಲ್ಪಡದೆ, ಅವುಗಳಲ್ಲಿ ಎಷ್ಟು ಗಿಡಗಳು ಉಳಿದು ಬೆಳೆದು ಮುಂದಿನ ಪೀಳಿಗೆಗೆ ನೆರಳಾಗಿ ನಿಲ್ಲುತ್ತವೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಪ್ರತಿಯೊಂದು ಗಿಡವನ್ನೂ ಮರವಾಗಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಹಾಗೂ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದಲ್ಲಿ 15,600 ಕೋಟಿ ರೂ. ಗಳಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆಮೇಕೆದಾಟು ಯೋಜನೆಗೆ ಅನುಮತಿ ನೀಡಿ, ಕಸ್ತೂರಿರಂಗನ್ ವರದಿ ಹಿಂಪಡೆಯಿರಿ: ಪ್ರಧಾನಿಗೆ ಸಿಎಂ ಡಿ.ಕೆ.ಶಿವಕುಮಾರ್ ಮನವಿಬೆಂಗಳೂರು - ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಗೆ ಹಸಿರು ನಿಶಾನೆಮಂಗಳೂರು–ಬೆಂಗಳೂರು ರೈಲು ಮಾರ್ಗ ವಿದ್ಯುದೀಕರಣ ಪೂರ್ಣ : ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ವಿಶ್ವದ ಮೊದಲ ‘COSMOS-Mysuru’ ತಾರಾಲಯ ಲೋಕಾರ್ಪಣೆಗೆ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿಮೈಸೂರಿನಲ್ಲಿ ‘ಭಾರತ ವನ’ ಯೋಜನೆಗೆ ನಿರ್ಮಲಾ ಸೀತಾರಾಮನ್ ಚಾಲನೆಪ್ರಧಾನಿ ಭೇಟಿಗೆ ಸರ್ವಪಕ್ಷ ನಿಯೋಗಕ್ಕೆ ಅವಕಾಶ ನೀಡುತ್ತಿಲ್ಲ : ಈಶ್ವರ್‌ ಖಂಡ್ರೆ ಅಸಮಾಧಾನತುಂಗಭದ್ರಾ ಕಾಲುವೆಗಳಿಗೆ ನ.20 ರವರೆಗೆ ನೀರು ಹರಿಸುತ್ತೇವೆ : ಶಿವರಾಜ ತಂಗಡಗಿಮೆಟ್ರೋ ಯೋಜನೆಗಳ ಆರ್ಥಿಕ ಹೊರೆ ಕೇಂದ್ರ-ರಾಜ್ಯಗಳು ಸಮಾನವಾಗಿ ಹಂಚಿಕೊಳ್ಳಲಿ: ಸಿಎಂ ಡಿ.ಕೆ.ಶಿವಕುಮಾರ್ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ಪಿಂಕ್ ಲೈನ್‌ಗೆ ಚಾಲನೆ ನೀಡಿದ ಪ್ರಧಾನಿ ಮೋದಿ