
ಕಕ್ಷಿದಾರರ ಹಿತ ಮತ್ತು ಸಾಮಾಜಿಕ ಪರಿಕಲ್ಪನೆಯಡಿ ಮಹತ್ತರ ಪಾತ್ರವಹಿಸಿ, ಯಾವುದೇ ಅಸೆ ಆಮೀಷಗಳಿಗೆ ಬಲಿಯಾಗದಂತೆ ವೃತ್ತಿಯಲ್ಲಿ ತೊಡಬೇಕೆಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಡಾ.ಎ.ಸಿ.ದಾನಪ್ಪ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು!
ಅತಿಥಿಯಾಗಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಕೆ. ಶಿವಕುಮಾರ್ ಉಪಸ್ಥಿತಿಯಲ್ಲಿದ್ದರು!
ಇದೇ ಸಂದರ್ಭದಲ್ಲಿ ಕಂಪ್ಲಿ ತಾಲೂಕು ವ್ಯಾಪ್ತಿಯಲ್ಲಿ 2024-25 ನೇ ಸಾಲಿನಲ್ಲಿ ಕಾನೂನು ಪದವಿ ಮುಗಿಸಿ ನೂತನವಾಗಿ ವಕೀಲ ವೃತ್ತಿ ಪ್ರಾರಂಭಿಸಿದ ಕಂಪ್ಲಿಯ ಮನೋಜ್ ಕುಮಾರ್ ದಾನಪ್ಪ, ರೋಶನ್ ಯಾಳ್ಪಿ, ಎನ್. ಸೈಯದ್ ವಾರೀಶ್, ವಿ.ಟಿ.ಮೇಘ, ದೇವಲಾಪುರದ ಛಲವಾದಿ ಹುಲಿಗೆಮ್ಮ, ಸೋಮಲಾಪುರ ಗ್ರಾಮದ ಸಿ.ರವಿ ಚಂದ್ರ, ಲಕ್ಷ್ಮಿಕಾಂತ್ ಇವರಿಗೆ ಪಟ್ಟಣದಲ್ಲಿ ಸನ್ಮಾನಿಸಿ ಅಭಿನಂದಿಸಿದರು!