Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಶುಗರ್ ಫ್ಯಾಕ್ಟರಿಗಳಿಗೆ ಮುತ್ತಿಗೆ: ಬೆಂಗಳೂರಿಗೆ ಕೇಂದ್ರ ಸಮಿತಿ; ಬೆಳಗಾವಿಗೆ ಬರುವಂತೆ ಕಬ್ಬು ಬೆಳೆಗಾರರು ಪಟ್ಟು

ಬೆಳಗಾವಿ, ಅಕ್ಟೋಬರ್​​ 28: ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟ ಮತ್ತೊಂದು ಹಂತಕ್ಕೆ ತಲುಪಿದೆ. ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ನೀಡಿದ್ದ ಗಡುವು ಮುಕ್ತಾಯ ಬೆನ್ನಲ್ಲೇ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ಗೋದಾಮುಗಳಿಗೆ ರೈತರು ಮುತ್ತಿಗೆ ಹಾಕಿ, ಸಕ್ಕರೆ ಮಾರಾಟ ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಿದ್ದಾರೆ. ನಾಳೆ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರ ಜೊತೆಗೆ ದರ ನಿಗದಿ ಕುರಿತಾಗಿ ಮಹತ್ವದ ಸಭೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಕೇಂದ್ರದ ಸಮಿತಿ ಕೂಡ ಆಗಮಿಸುತ್ತಿದೆ.

ನಾಲ್ಕನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಹೋರಾಟ

ಕಬ್ಬಿಗೆ ನ್ಯಾಯಯುತ ಬೆಲೆ ಸಿಗಬೇಕೆಂಬ ಅನ್ನದಾತರ ಆಗ್ರಹಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪ್ರತಿ ಟನ್ ಕಬ್ಬಿಗೆ 5,500 ರೂ ದರ ನೀಡಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. ಇದರಲ್ಲಿ ಒಂದು ಸಾವಿರ ರೂ ಸರ್ಕಾರದ ಪ್ರೋತ್ಸಾಹ ಧನ, ಕಾರ್ಖಾನೆಯವರು ಕನಿಷ್ಟ 4,500 ರೂ ನೀಡಲೇಬೇಕೆಂಬ ಪಟ್ಟು ಹಿಡಿದಿದ್ದಾರೆ. ಗುರ್ಲಾಪುರದಲ್ಲಿ ರೈತರ ಅಹೋರಾತ್ರಿ ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ನಿಪ್ಪಾಣಿ-ಮೂಡಲಗಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಸಿಎಂ ಜತೆಗಿನ ಸಭೆಯಲ್ಲಿ ಬಗೆಹರಿಯದ ಕಬ್ಬು ಬೆಳೆಗಾರರ ಸಮಸ್ಯೆ: ಹೋರಾಟ ಮುಂದುವರಿಸಲು ನಿರ್ಧಾರ

ರೈತರ ಬೇಡಿಕೆ ಈಡೇರಿಸಲು ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ನೀಡಿರುವ ಗಡುವು ಇಂದು ರಾತ್ರಿ ಮುಕ್ತಾಯ ಆಗಲಿದೆ. ಈ ಬೆನ್ನಲ್ಲೇ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ರಾಜ್ಯಾಧ್ಯಕ್ಷ ಶಶಿಕಾಂತ ಗುರೂಜಿ ಹೋರಾಟ ಮತ್ತಷ್ಟು ತೀವ್ರಗೊಳಿಸಲು ಕರೆ ನೀಡಿದ್ದಾರೆ. ಸಕ್ಕರೆ ಕಾರ್ಖಾನೆಗಳಿಗೆ ಮುತ್ತಿಗೆ ಹಾಕಿ ಗೋದಾಮುಗಳಿಗೆ ಬೀಗ ಹಾಕುವ ಮೂಲಕ ರೈತರ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕಬ್ಬಿನ ಬೆಲೆ ನಿಗದಿಯಾಗುವವರೆಗೆ ಸಕ್ಕರೆ ಹೊರ ಹೋಗಬಾರದು ಎಂಬುದು ರೈತರ ಆಗ್ರಹವಾಗಿದೆ. ಅಲ್ಲದೆ, ಸಕ್ಕರೆಯ ಮಾರಾಟ ದರ ಪ್ರತಿ ಕೆಜಿ 50 ರೂಪಾಯಿಗಿಂತ ಕಡಿಮೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಚೂನಪ್ಪ ಪೂಜಾರಿ ಒತ್ತಾಯಿಸಿದ್ದಾರೆ.

15ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆ ಗೋದಾಮುಗಳಿಗೆ ಮುತ್ತಿಗೆ 

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ಜಿ. ಗ್ರಾಮದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ‌ ಒಡೆತನದ ಸತೀಶ್ ಶುಗರ್ಸ್ ಹಾಗೂ ಕತ್ತಿ ಕುಟುಂಬದ ಒಡೆತನದ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ್ ಸಕ್ಕರೆ ಕಾರ್ಖಾನೆ, ಮಾಜಿ ಸಚಿವ ಶ್ರೀಮಂತ್ ಪಾಟೀಲ್ ಒಡೆತನದ ಸಕ್ಕರೆ ಕಾರ್ಖಾನೆ ಸೇರಿ 15ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆ ಗೋದಾಮುಗಳಿಗೆ ರೈತರು ಮುತ್ತಿಗೆ ಹಾಕಿದ್ದಾರೆ.

LIVE TV

ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಕಾರ್ಖಾನೆ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿ, ಕಬ್ಬಿನ ಬೆಲೆ ನಿಗದಿಯಾಗುವವರೆಗೆ ಸಕ್ಕರೆ ಮಾರಾಟ ಮಾಡದಂತೆ ಒತ್ತಾಯಿಸಿದ್ದಾರೆ. ರೈತರ ಮನವಿಗೆ ಕಾರ್ಖಾನೆಯವರು ಸ್ಪಂದಿಸಿದ್ದಾರೆ. ಅಕ್ಟೋಬರ್ 31ರಂದು ಬೃಹತ್ ಹೋರಾಟಕ್ಕೆ ರೈತರು ಸಿದ್ಧತೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ರೈತರ ಒತ್ತಾಯಿಸಿದ್ದಾರೆ.

ನಾವು ಬೆಂಗಳೂರಿಗೆ ಬರಲ್ಲ; ಸಮಿತಿಯೇ ಬೆಳಗಾವಿಗೆ ಬರಲಿ

ಇದೆಲ್ಲದರ ನಡುವೆ ರಾಜ್ಯಕ್ಕೆ ನಾಳೆ ಕೇಂದ್ರ ಸರ್ಕಾರ ರಚನೆ ಮಾಡಿರುವ ಸಮಿತಿ ಕೂಡ ಆಗಮಿಸುತ್ತಿದೆ. ಆ ಮೂಲಕ ಸಮಿತಿ ರೈತರು ಮತ್ತು ಕಾರ್ಖಾನೆ‌ ಮಾಲೀಕರ ಸಮಸ್ಯೆ ಆಲಿಸಲಿದೆ. ಹೀಗಾಗಿ ಬೆಂಗಳೂರಿಗೆ ಬರುವಂತೆ ಶಶಿಕಾಂತ್ ಗೂರೂಜಿ ಹಾಗೂ ಚೂನಪ್ಪ ಪೂಜಾರಿಗೆ ಕರೆ ಮಾಡಲಾಗಿದೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಚೂನಪ್ಪ ಪೂಜಾರಿ, ‘ಕಬ್ಬು ಬೆಳೆ ಬೆಳಗಾವಿಗೆ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿದೆ. ಬೆಳಗಾವಿಯಲ್ಲಿ ಶೇಕಡಾ 90ರಷ್ಟು ಕಬ್ಬು ಬೆಳೆಯುತ್ತಾರೆ. ನಾವು ಬೆಂಗಳೂರಿಗೆ ಬರಲ್ಲ, ಸಮಿತಿಯೇ ಬೆಳಗಾವಿಗೆ ಬರಲಿ, ನಾವ್ಯಾರು ಬೆಂಗಳೂರಿಗೆ ಹೋಗುತ್ತಿಲ್ಲ’ ಎಂದಿದ್ದಾರೆ. ಆ ಮೂಲಕ ಬೆಳಗಾವಿಗೆ ಬಂದು ಸಮಸ್ಯೆ ಆಲಿಸುವಂತೆ ರೈತರು ಪಟ್ಟುಹಿಡಿದಿದ್ದಾರೆ.

ಇದನ್ನೂ ಓದಿ: ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಯಿತಾ? ಸಭೆ ಮುಗಿಸಿ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ

ಒಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಕೆರಳಿಸಿದರೆ, ಇತ್ತ ಗುರ್ಲಾಪುರದಲ್ಲಿ ರೈತರು ಹೋರಾಟವನ್ನು ಮತ್ತಷ್ಟು ಉಗ್ರಗೊಳಿಸಲು ಸಿದ್ಧತೆ ನಡೆಸಿದ್ದಾರೆ. ನಾಳೆ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ದರ ನಿಗದಿಯಾಗಿ ರೈತರಿಗೆ ಸ್ಪಂದಿಸಿದರೆ, ನಾಳೆಯೇ ಹೋರಾಟ ಹಿಂಪಡೆಯಲಿದ್ದಾರೆ. ಒಂದು ವೇಳೆ ಕಾರ್ಖಾನೆಯವರು ರೈತರು ನಿರೀಕ್ಷೆ ಇಟ್ಟುಕೊಂಡ ದರ ನಿಡದಿದ್ದರೆ ಹೋರಾಟದ ಸ್ವರೂಪ ಬದಲಾಗುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೆಹಲಿಯಲ್ಲಿ ಆಘಾತಕಾರಿ ಘಟನೆ: ಹೆಚ್ಚುವರಿ ಪಲ್ಯ ಕೇಳಿದ್ದಕ್ಕೆ ಚಾಲಕನಿಗೆ ಇರಿದು ಕೊಲೆ: ಆರೋಪಿ ಆಹಾರ ಮಾರಾಟಗಾರ ಅರೆಸ್ಟ್ಶುಗರ್ ಫ್ಯಾಕ್ಟರಿಗಳಿಗೆ ಮುತ್ತಿಗೆ: ಬೆಂಗಳೂರಿಗೆ ಕೇಂದ್ರ ಸಮಿತಿ; ಬೆಳಗಾವಿಗೆ ಬರುವಂತೆ ಕಬ್ಬು ಬೆಳೆಗಾರರು ಪಟ್ಟುದೆಹಲಿ ಎಸ್‌ಐಆರ್‌: ಮತದಾರರ ಹೆಸರು ಕೈಬಿಡುವ ಕ್ರಮಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪಗ್ರಾಮೀಣಾಭಿವೃದ್ಧಿಗೆ ಮೋದಿ ಸರ್ಕಾರದಿಂದ ಹೊಸ ಹೆಜ್ಜೆ: 7,395 ಕೋಟಿ ರೂ. ವೆಚ್ಚದ ‘ಪ್ರಧಾನ ಮಂತ್ರಿ ವಿಕಸಿತ ಗ್ರಾಮ ಸ್ವರಾಜ್ ಯೋಜನೆ’ಗೆ ಸಂಪುಟ ಅನುಮೋದನೆವೈಷ್ಣವಿ, ರಾವಲ್, ಶಫಾಲಿ ಮಿಂಚು: ಜಿಂಬಾಬ್ವೆ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 8 ವಿಕೆಟ್ ಗಳ ಜಯ: ಏಕದಿನ ಸರಣಿ ಕ್ಲೀನ್ ಸ್ವೀಪ್ಸ್ಪೇನ್ ನಲ್ಲಿ ಎರಡು ಹೈಸ್ಪೀಡ್ ರೈಲುಗಳು ಡಿಕ್ಕಿ: ಭೀಕರ ಅಪಘಾತದಲ್ಲಿ 46 ಜನ ದುರ್ಮರಣ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಕೇಂದ್ರ ನೌಕರರಿಗೆ ದೀಪಾವಳಿ ಬಂಪರ್‌ ಗಿಫ್ಟ್‌: DA ಶೇ. 3 ಹೆಚ್ಚಳಕ್ಕೆ ಮೋದಿ ಸಂಪುಟ ಅನುಮೋದನೆಸರ್ಚ್ ನೆಪದಲ್ಲಿ ದೌರ್ಜನ್ಯ ಎಸಗುವ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಬರೆದಿಟ್ಟುಕೊಳ್ಳಿ ಜೆಡಿಎಸ್ ಕಾರ್ಯಕರ್ತರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂದೇಶಡಿಪಿಎಲ್‌ನಲ್ಲಿ ಸದ್ದು ಮಾಡಿದ್ದ ದೆಹಲಿ ಲೆಗ್ ಸ್ಪಿನ್ನರ್‌ಗೆ ಒಲಿದ ಅದೃಷ್ಟ: ಆರ್‌ಸಿಬಿ, ಮುಂಬೈ ಕಣ್ಣು ಮೇಧಾವಿ ಬಿಧೂರಿ ಮೇಲಿದೆಯೇ?BREAKING : ಸ್ಪೇನ್‌ನಲ್ಲಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಭೀಕರ ಡಿಕ್ಕಿ; 10 ಮಂದಿ ಸಾವು