LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದಸರಾಗೆ ಹೆಚ್ಚಿಸಿದ ksrtc ಬಸ್ ದರ ಆ.30ಕ್ಕೆ ಮುಕ್ತಾಯ!

ಬೆಂಗಳೂರು: ದಸರಾ ನಿಮಿತ್ತ ಸೀಮಿತ ಅವಧಿಗೆ ಅನ್ವಯ ವಾಗುವಂತೆ ಮೈಸೂರು - ಬೆಂಗಳೂರು ನಡುವೆ ಕಾರ್ಯಾಚರಣೆಯಾಗುವ ದಸರಾ ವಿಶೇಷ ತಡೆರಹಿತ ಬಸ್ಸುಗಳಿಗೆ ನಿಯಮಾವಳಿಗಳನ್ವಯ ಶೇ.20 ಪ್ರಯಾಣ ದರ ಹೆಚ್ಚಿಸಿ‌ ಕಾರ್ಯಾಚರಣೆಯನ್ನು ಸದರಿ ಪ್ರಯಾಣ ದರವು ಸೀಮಿತ ಅವಧಿ ಆ.30ಕ್ಕೆ ಕೊನೆಗೊಂಡಿದೆ ಎಂದು ksrtc ಯ ಪತ್ರಿಕಾ ಪ್ರಕಟಣೆ ಹೊರಡಿಸಿದೆ.



ಕಳೆದ 4 ದಶಕಗಳಿಂದಲೂ ಪ್ರತಿ ವರುಷ ದಸರಾ ನಿಮಿತ್ತ 10 ದಿನಗಳ ಅಥವಾ ಸೀಮಿತ ಅವಧಿಗೆ ಅನ್ವಯವಾಗುವಂತೆ , ಮೈಸೂರು - ಬೆಂಗಳೂರು ನಡುವೆ ಕಾರ್ಯಾಚರಣೆಯಾಗುವ ದಸರಾ ವಿಶೇಷ ತಡೆರಹಿತ ಬಸ್ಸುಗಳಿಗೆ ನಿಯಮಾವಳಿಗಳನ್ವಯ ಶೇ.20 ಪ್ರಯಾಣ ದರ ಹೆಚ್ಚಿಸಿ‌ ಕಾರ್ಯಾಚರಣೆ ಮಾಡಲಾಗುತ್ತದೆ. ಸದರಿ ಪ್ರಯಾಣ ದರವು ಸೀಮಿತ ಅವಧಿ ಮುಗಿದ ಕೂಡಲೇ ಸ್ಥಗಿತಗೊಳ್ಳುತ್ತದೆ. ಅದರಂತೆ ಪ್ರಸ್ತುತ ದರವು ಕೂಡ ದಿನಾಂಕ 30.10.23 ಕ್ಕೆ ಕೊನೆಗೊಳ್ಳಲಿದ್ದು, ಮೊದಲಿನ ದರದಲ್ಲಿಯೇ ಬಸ್ಸುಗಳು ಕಾರ್ಯಾಚರಣೆಯಾಗುತ್ತದೆ.‌

ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಕರ ಒಂದು ಕಡೆ ಮಾತ್ರ ಜನ ಸಂದಣಿ ಇರುತ್ತದೆ. ಆದರೆ ಅದೇ ಬಸ್ಸುಗಳು ಮೈಸೂರಿನಿಂದ ವಾಪಸ್ಸು ಬರುವಾಗ ಪ್ರಯಾಣಿಕರಿಲ್ಲದೆ‌ ಕಾರ್ಯಾಚರಣೆ ಮಾಡಬೇಕಾಗಿರುತ್ತದೆ. ಆದ್ದರಿಂದ‌ ಕಾರ್ಯಾಚರಣೆ ವೆಚ್ಚವನ್ನು ಸರಿದೂಗಿಸಲು ಈ‌ ಕ್ರಮವನ್ನು ಮೊದಲಿನಿಂದಲೂ ಅನುಸರಿಸಲಾಗುತ್ತಿದೆ. (ಇತ್ತೀಚೆಗೆ ಅಂದರೆ ಕಳೆದ‌‌ ನಾಲ್ಕು ಐದು ವರುಷಗಳಲ್ಲಿಯೂ ಸಹ ಸೀಮಿತ ಅವಧಿಗೆ ಅನ್ವಯವಾಗುವಂತೆ ದಸರಾ ಸಮಯದಲ್ಲಿ ದರ ಹೆಚ್ಚಳ ಮಾಡಲಾಗಿರುತ್ತದೆ.)

ಮೈಸೂರು - ಬೆಂಗಳೂರು ನಡುವೆ ಈ‌ ಹಿಂದೆ ದರ ಹೆಚ್ಚಳವಾಗಿರುವುದಕ್ಕೆ ಕಾರಣ,ಮೈಸೂರು ಎಕ್ಸ್‌ಪ್ರೆಸ್‌ ವೇ ಎರಡು ಟೋಲ್ ಗಳ ದರದಲ್ಲಿ ಏಕಮಾರ್ಗದಲ್ಲಿಯೇ ( One way) ಹಠಾತ್ತನೆ ರೂ.1090 ಹೆಚ್ಚಳವಾಗಿದ್ದರಿಂದ, ಪ್ರಯಾಣ ದರದಲ್ಲಿ ಟೋಲ್ ಹಣವನ್ನು ಸೇರ್ಪಡೆಗೊಳಿಸಿ ಹೆಚ್ಚಳ ಮಾಡಲಾಗಿತ್ತು‌. ಈ ದರವು ಎಕ್ಸ್‌ಪ್ರೆಸ್ ವೇ ಅಲ್ಲಿ‌ ಕಾರ್ಯಾಚರಣೆಯಾಗುವ ತಡೆರಹಿತ ಬಸ್ಸುಗಳಿಗೆ ಮಾತ್ರ ಅನ್ವಯಿಸುತ್ತದೆ. ಎಕ್ಸ್‌ಪ್ರೆಸ್‌ ವೇ ಹೊರತುಪಡಿಸಿ ನೇರ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ವೇಗದೂತ ಸಾರಿಗೆಗಳಲ್ಲಿ ಈಗಲೂ ಹಳೆಯ ಪ್ರಯಾಣ ದರವೇ ಚಾಲ್ತಿಯಲ್ಲಿದೆ.

ಇದು ಸಾಮಾನ್ಯ ಪ್ರಕ್ರಿಯೆ ಆಗಿದ್ದು, ರಾಜ್ಯ/ ಅಂತರರಾಜ್ಯದ ಯಾವುದೇ ಭಾಗದಲ್ಲಿ ಟೋಲ್ ದರ ಹೆಚ್ಚಳವಾದಲ್ಲಿ,‌ ಆ ಮಾರ್ಗದ ಬಸ್ಸುಗಳಲ್ಲಿ ದರ‌ ಹೆಚ್ಚಳವಾಗುವುದು ನಿರಂತರವಾಗಿ‌ ಸಾರಿಗೆ ಸಂಸ್ಥೆಗಳಲ್ಲಿ‌ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪ್ರಕ್ರಿಯೆಯಾಗಿರುತ್ತದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಸಿಎಂ ಸೂಚನೆಯಂತೆ ರಸ್ತೆ ಬದಿ, ರಸ್ತೆ ವಿಭಜಕಗಳ ಗಿಡಗಳ ನಿರ್ವಹಣೆಗೆ ಆದೇಶಮಡಿವಾಳ ಸಮಾಜ ಪರಿಶಿಷ್ಟ ಜಾತಿಗೆ ಸೇರಿಸಲು ಮಾ.16ಕ್ಕೆ ಧರಣಿBalc ನಿಂದ ಉಚಿತ ವೃತ್ತಿ ಮಾರ್ಗದರ್ಶನ,sat ಬಿಡುಗಡೆಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಡಿವಾಳ ಸಂಘದಿಂದ ಮಾ.16ಕ್ಕೆ ಫ್ರೀಡಂ ಪಾರ್ಕಿನಲ್ಲಿ ಧರಣಿಕೊಲ್ಲಿ ಯುದ್ಧ: ಕನ್ನಡಿಗರನ್ನು ರಕ್ಷಿಸಿ ಕರೆತರಲಾಗುವುದು: ಸಿಎಂ ಸಿದ್ದರಾಮಯ್ಯಇಸ್ರೇಲ್ ಇರಾನ್ ನಡುವೆ ಯುದ್ಧ, ದುಬೈನಲ್ಲಿ ಕನ್ನಡಿಗರಿಗೆ ಆತಂಕ, ರಕ್ಷಣೆಗೆ ಸಿಎಂ ಮುಂದುಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರಮಂಜು ಪಾಂಡವಪುರ ನಿರ್ದೇಶನದಲ್ಲಿ " ಮಣ್ಣಿನ ಮಗ ಮಾರ್ಗದರ್ಶಿ " ರೈತ ಸಾಧಕನ ಕುರಿತ ಸಾಕ್ಷಾಚಿತ್ರಕೋರಮಂಗಲದಲ್ಲಿ ಇಂದ್ರಿಯ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಹೊಸ ಮಳಿಗೆ ಆರಂಭಕುಮಾರಿ ವರ್ಷ ಅದ್ದೂರಿಯಾಗಿ ಭರತನಾಟ್ಯ ರಂಗ ಪ್ರವೇಶ