LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದಂತ ಆರೋಗ್ಯಾಧಿಕಾರಿಗಳ ಅಕ್ರಮ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ!

ಬೆಂಗಳೂರು: ರಾಜ್ಯದಲ್ಲಿ PSI ಪ್ರಕರಣ ದೊಡ್ಡಮಟ್ಟದಲ್ಲಿ ಕೋಲಾಹಲವನ್ನು ಸೃಷ್ಟಿಸಿದ ಸುದ್ದಿ ಹಸಿ ಇರುವ ಮುನ್ನವೇ ದಂತ  ಆರೋಗ್ಯಾಧಿಕಾರಿಗಳ ನೇರ ನೇಮಕಾತಿಯ  ಹುದ್ದೆಗಳ ಭರ್ತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಹೈಕೋರ್ಟ್ ವಕೀಲರು ಹಾಗೂ ಕರ್ನಾಟಕ ರಾಜ್ಯ ಶರಣ ವಕೀಲರ ವೇದಿಕೆಯ ಕಾರ್ಯಾಧ್ಯಕ್ಷರೊ ಆದ ಆರ್ ಆರ್ ಹಿರೇಮಠ್ ಅವರು ತಿಳಿಸಿದರು.

ರಾಜ್ಯದಲ್ಲಿ ಖಾಲಿ ಇದ್ದ 88 ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳ ಭರ್ತಿಯ ಆಯ್ಕೆ ಪಟ್ಟಿಯಲ್ಲಿ ಆಯ್ಕೆಗೊಂಡಿರುವ ಅಕ್ರಮವಾಗಿ ಹಣ, ಹೆಣ್ಣು, ಎಣ್ಣೆ ಕೊಟ್ಟು ರೋಸ್ಟರ್ ಕಂ ಮೆರಿಟ್ ಪದ್ಧತಿಯನ್ನು ಪಾಲಿಸದೇ ಅಕ್ರಮವಾಗಿ ಆಯ್ಕೆಗೊಂಡಿದ್ದು, ನೂರಾರು ಮೆರಿಟ್ ವಿದ್ಯಾರ್ಥಿಗಳು ಬೀದಿಪಾಲಾಗಿದ್ದಾರೆಂದು ಸರ್ಕಾರಕ್ಕೆ , ಆರೋಗ್ಯ ಇಲಾಖೆಗೆ ಎಚ್ಚರಿಕೆಯನ್ನು ನೀಡಲಾಯಿತು.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ HFW/71/ HSH 2019, ದಿ.16-06-2020  ಮತ್ತು 25-08- 2020 ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಬಿಜೆಪಿ ಸರ್ಕಾರ ಇದ್ದಾಗ ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ್ ಮತ್ತು ಸದಸ್ಯ ಕಾರ್ಯದರ್ಶಿ, ವಿಶೇಷ ನೇಮಕಾತಿ ಸಮಿತಿಯ ಮುಖ್ಯ ಆಡಳಿತಾಧಿಕಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆದ ಜಿ.ಎನ್.ಮಂಜುನಾಥಸ್ವಾಮಿ ಹಾಗೂ ವಿಶೇಷ ನೇಮಕಾತಿ ಸಮಿತಿಯ ಎಲ್ಲಾ ಸಿಒಬಂದಿಗಳು ಮತ್ತು ಇವರಿಗೆ ಹಣ ಕೊಟ್ಟು ಆಯ್ಕೆಯಾಗಿ ಪ್ರಸ್ತುತ ರಾಜ್ಯದ ವಿವಿದೆಡೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ದಂತ ವೈದ್ಯಾಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದರು.

ಅಕ್ರಮದಲ್ಲಿ ಅಂದಿನ ಆರೋಗ್ಯ ಮಂತ್ರಿ ಕೆ ಸುಧಾಕರ್ ಭಾಗಿ!

ಅಕ್ರಮದಲ್ಲಿ ಭಾಗಿಯಾಗಿರುವ ವ್ಯಕ್ತಿಗಳೊಂದಿಗೆ ಶಾಮೀಲಾಗಿ ರೋಸ್ಟರ್ ಕಂ ಮೆರಿಟ್ ಪಾಲಿಸದೇ ಅಕ್ರಮವಾಗಿ ಆಯ್ಕೆಯಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಕ್ರಮವಾಗಿ ಆಯ್ಕೆಯಾಗಿ ಮೆರಿಟ್ ಇದ್ದು ಅನ್ಯಾಯಗೊಂಡ ನೂರಾರು ಅಭ್ಯರ್ಥಿಗಳು ಈ ಹುದ್ದೆಯಿಂದ ವಂಚಿತರಾಗಿ ಬೀದಿಗೆಬಂದಿದ್ದಾರೆ. ಅವರಿಗೆ ಅನ್ಯಾಯವಾಗಿದೆ ಈ ಅನ್ಯಾಯವನ್ನು ಸರಿಪಡಿಸಲು ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಯವರಿಗೆ ಹಾಗೂ ಆರೋಗ್ಯ ಸಚಿವರಿಗೆ ಹಾಗೂ ಕಾನೂನು ಸಚಿವರಿಗೆ ಹಾಗೂ ಮುಖ್ಯಕಾರ್ಯದರ್ಶಿಗಳ, ಲೋಕಾಯುಕ್ತರ ಗಮನಕ್ಕೆ ತಂದರೂ ಕೂಡಾ ಇಂದಿನ ತನಕ ಇನ್ನು ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಪ್ರಕರಣ ಸಿಐಡಿ ತನಿಖೆಗೆ ಆಗ್ರಹ

PSI ನೇಮಕಾತಿಯಲ್ಲಿ ಅಕ್ರಮ ನಡೆದು ರಾಜ್ಯ,ದೇಶ ತಲೆತಗ್ಗಿಸುವಂತೆ ಮಾಡಲಾಗಿದೆ, ಆ  ಪ್ರಕರಣ ಮಾಸುವ ಮುನ್ನವೇ, ದಂತ ಆರೋಗ್ಯಾಧಿಕಾರಿಗಳು ಪ್ರಕರಣವನ್ನು  ಮುಖ್ಯಮಂತ್ರಿಗಳಿಗೆ ಹಾಗೂ ಆರೋಗ್ಯ ಸಚಿವರಿಗೆ ಮನವಿ ಮಾಡುವುದೇನೆಂದರೆ ಸಿ.ಐ.ಡಿ ಹನಿಖೆಯನ್ನು ಮುಕ್ತವಾಗಿ ಮಾಡಿಸಬೇಕೆಂದು ತಮ್ಮಲ್ಲಿ ಅನ್ಯಾಯಕ್ಕೆ ಒಳಗಾದ ದಂತ ವೈದ್ಯಾಧಿಕಾರಿಗಳ ಪರವಾಗಿ ಆಗ್ರಹ ಮಾಡುತ್ತೇನೆ ಎಂದು ತಿಳಿಸಿದರು.

ಅಕ್ರಮ ಪ್ರಕರಣದಲ್ಲಿ ಹಣ,ಹೆಣ್ಣು, ಮಣ್ಣು,ಮದ್ಯ  ಎಲ್ಲಾ ಭಾಗಿ

ದಂತ ಆರೋಗ್ಯ ಅಧಿಕಾರಿಗಳ ನೇರ ನೇಮಕಾತಿಯಲ್ಲಿ ಅಕ್ರಮಕ್ಕೆ ಅಭ್ಯರ್ಥಿಗಳು 10 ರಿಂದ 60 ಲಕ್ಷ ರೂಪಾಯಿ ವರೆಗೆ ಲಂಚಾವತಾರ ನಡೆದಿದೆ ಎಂದರು. ಇನ್ನು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆದರೆ, ಇಲ್ಲಿಯೂ ಅದೇ ಆಗಿರುವುದು, ಭ್ರಷ್ಟಾಚಾರದ ತನಿಖೆ ನಡೆಸುವ ಲೋಕಾಯುಕ್ತಕ್ಕೆ ಸುಮಾರು ಲಕ್ಷಾಂತರ ರೂಪಾಯಿ ಲಂಚದ ರೂಪದಲ್ಲಿ ನೀಡಿದ್ದಾರೆ. ಆರೋಗ್ಯ ಇಲಾಖೆಯ ಆಡಳಿತಾಧಿಕಾರಿಗಳು, ಸಮಿತಿಯ ಸದಸ್ಯರು, ಸಿಬ್ಬಂದಿಗಳಿಗೆ ಹಣದ ಹೊಳೆಯನ್ನು ಸುರಿದಿದ್ದಾರೆ, ಅದಕ್ಕೆ  ಸಂಬಂಧಿಸಿದಂತೆ  ದಾಖಲೆಗಳ ಸಮೇತ ಕಡೂರು ದಂತ ವೈದ್ಯಾಧಿಕಾರಿಗಳಾದ ಡಾ.ನರಸಿಂಹ ಮೂರ್ತಿ ತಿಳಿಸಿದರು.

Kkkkkkkkkkk

ದಿನಾಂಕ 17-12-2021 ರಂದು ರಾಜ್ಯದಲ್ಲಿ ಖಾಲಿ ಇದ್ದ 88 ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳ ಭರ್ತಿಯ ಆಯ್ಕೆ ಪಟ್ಟಿಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಹಣ ಕೊಟ್ಟು ರೋಸ್ಟರ್ ಕಂ మంటో ಪದ್ಧತಿಯನ್ನು ಪಾಲಿಸದೇ ಅಕ್ರಮವಾಗಿ ಆಯ್ಕೆಗೊಂಡಿದ್ದು, ಅಕ್ರಮದಲ್ಲಿ ಭಾಗಿಯಾಗಿರುವವರಲ್ಲಿ ಮಾಜಿ ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ್ ಮತ್ತು ಸದಸ್ಯ ಕಾರ್ಯದರ್ಶಿ, ವಿಶೇಷ ನೇಮಕಾತಿ ಸಮಿತಿಯ ಮುಖ್ಯ ಆಡಳಿತಾಧಿಕಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆದ ಜಿ.ಎನ್.ಮಂಜುನಾಥಸ್ವಾಮಿ ಹಾಗೂ ವಿಶೇಷ ನೇಮಕಾತಿ ಸಮಿತಿಯ ಎಲ್ಲಾ ಸಿಒಬಂದಿಗಳು ಮತ್ತು ಇವರಿಗೆ ಹಣ ಕೊಟ್ಟು ಆಯ್ಕೆಯಾಗಿ ಪ್ರಸ್ತುತ ರಾಜ್ಯದ ವಿವಿದೆಡೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ದಂತ ವೈದ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ನಿಜವಾದ -) ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಕೋರುತ್ತೇವೆ.

 

'ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಖಾಲಿ ಇದ್ದ 88 ದಂತ ವೈದ್ಯಾಧಿಕಾರಿಗಳ ನೇಮಕಾತಿ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ HFW/71/ HSH 2019, ದಿ.16-06-2020  ಮತ್ತು 25-08- 2020 ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಇವರಲ್ಲಿ ಸಾಕಷ್ಟು ಅಭ್ಯರ್ಥಿಗಳು ಮೇಲೆ ಉಲ್ಲೇಖಿಸಿರುವ ವ್ಯಕ್ತಿಗಳೊಂದಿಗೆ ಶಾಮೀಲಾಗಿ ರೋಸ್ಟರ್ ಕಂ ಮೆರಿಟ್ ಪಾಲಿಸದೇ ಅಕ್ರಮವಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಆಕ್ರಮವಾಗಿ ಆಯ್ಕೆಯಾಗಿ ಮೆರಿಟ್ ಇದ್ದು ಅನ್ಯಾಯಗೊಂಡ ಇನ್ನು ಹಲವಾರು ಅಭ್ಯರ್ಥಿಗಳು ಈ ಹುದ್ದೆಯಿಂದ ವಂಚಿತರಾಗಿದ್ದಾರೆ. ಅವರಿಗೆ ಅನ್ಯಾಯವಾಗಿದೆ ಈ ಅನ್ಯಾಯವನ್ನು ಸರಿಪಡಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಯವರಿಗೆ ಹಾಗೂ ಆರೋಗ್ಯ ಸಚಿವರಿಗೆ ಹಾಗೂ ಕಾನೂನು ಸಚಿವರಿಗೆ ಹಾಗೂ ಮುಖ್ಯಕಾರ್ಯದರ್ಶಿಗಳಿಗೆ ಗಮನಕ್ಕೆ ತಂದರೂ ಕೂಡಾ ಇನ್ನು ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಹಾಗೂ ಈ ಪ್ರಕರಣವನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಆರೋಗ್ಯ ಸಚಿವರಿಗೆ ಮನವಿ ಮಾಡುವುದೇನೆಂದರೆ ಸಿ.ಐ.ಡಿ ಹನಿಖೆಯನ್ನು ಮುಕ್ತವಾಗಿ ಮಾಡಿಸಬೇಕೆಂದು ತಮ್ಮಲ್ಲಿ ಅನ್ಯಾಯಕ್ಕೆ ಒಳಗಾದ ದಂತ ವೈದ್ಯಾಧಿಕಾರಿಗಳ ಪರವಾಗಿ ಆಗ್ರಹ ಮಾಡುತ್ತೇನೆ. ಅದಕ್ಕಾಗಿ ಅನ್ಯಾಯವಾಗಿರುವ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕೆಂದು ತಮ್ಮಲ್ಲಿ ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುದ್ಧಪೀಡಿತ ದೇಶಗಳಿಂದ ಕನ್ನಡಿಗರು ಎಲ್ಲಾ ಭಾರತೀಯರು ಸುರಕ್ಷಿತವಾಗಿ ವಾಪಸ್ ಬರುತ್ತಾರೆನೂತನ ಪದಾಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಸಚಿವರುನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಿ: ರಮೇಶ್ಡಿಸಿಎಂ ಸೂಚನೆಯಂತೆ ರಸ್ತೆ ಬದಿ, ರಸ್ತೆ ವಿಭಜಕಗಳ ಗಿಡಗಳ ನಿರ್ವಹಣೆಗೆ ಆದೇಶಮಡಿವಾಳ ಸಮಾಜ ಪರಿಶಿಷ್ಟ ಜಾತಿಗೆ ಸೇರಿಸಲು ಮಾ.16ಕ್ಕೆ ಧರಣಿBalc ನಿಂದ ಉಚಿತ ವೃತ್ತಿ ಮಾರ್ಗದರ್ಶನ,sat ಬಿಡುಗಡೆಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಡಿವಾಳ ಸಂಘದಿಂದ ಮಾ.16ಕ್ಕೆ ಫ್ರೀಡಂ ಪಾರ್ಕಿನಲ್ಲಿ ಧರಣಿಕೊಲ್ಲಿ ಯುದ್ಧ: ಕನ್ನಡಿಗರನ್ನು ರಕ್ಷಿಸಿ ಕರೆತರಲಾಗುವುದು: ಸಿಎಂ ಸಿದ್ದರಾಮಯ್ಯಇಸ್ರೇಲ್ ಇರಾನ್ ನಡುವೆ ಯುದ್ಧ, ದುಬೈನಲ್ಲಿ ಕನ್ನಡಿಗರಿಗೆ ಆತಂಕ, ರಕ್ಷಣೆಗೆ ಸಿಎಂ ಮುಂದುಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ