LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗಂಗಾಮತಾ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಬೆಂಗಳೂರು: ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಷ್ಠಿತ ಶ್ರೀ ಗಂಗಾ ವಿದ್ಯಾನಿ ಯೋಜನೆ ಅನುಷ್ಠಾನವನ್ನು ಪ್ರಶಕ್ತ ವರ್ಷ 2023 ರಿಂದ ಪ್ರಾರಂಭಿಸಲು ಉದ್ದೇಶಿಸಲಾಗಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದಾಗಿ ಸಂಘದ ಅಧ್ಯಕ್ಷ ಶ್ರೀನಿವಾಸ ತಿಳಿಸಿದರು.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ಮಾತನಾಡಿದ ಅವರು, ರಾಜ್ಯದ 31 ಜಿಲ್ಲಿಗಳಿಂದ ಆರ್ಥಿಕವಾಗಿ ನೆರವಿನ ಅವಶ್ಯಕತೆ ಇರುವ ಪ್ರತಿ ಜಿಲ್ಲೆಯಿಂದ ಗಂಗಾಮತ ಕೋಲಿ/ ಕಬ್ಬಲಿಗ ಸುಣಗಾರ/ ತಂಬಿಗೆ/ ಕಣ್ಣೀರೆ ಬೆಸ್ತರು/ ಮೊಗವೀರ ಮತ್ತಿತರೇ ಗಂಗಾಮತ ಪರ್ಯಾಯ ಉಪ ಪಂಗಡಗಳಿಗೆ ಸೇರಿದ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿಯಂತೆ ಆರ್ಥಿಕವಾಗಿ ಮರಸ್ಕರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

MBB5/ DENTAL/ BAMS/ BE/ B5evag ಓದುತ್ತಿರುವ ವಿದ್ಯಾರ್ಥಿಗಳು ಮತ್ತು KAS IAS ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಪ್ರತಿಭಾ ಪುರಸ್ಕಾರ ಪ್ರಯೋಜನ ಪಡೆಯಬಹುದಾಗಿದೆ. ಹೊರಗೆ ತರಬೇತಿ      ಪಡೆಯುತ್ತಿರುವುದರಿಂದ  ಅವರಿಗೆ ಆನ್ಲೈನ್ ಮೂಲಕ ಚೆಕ್ ನೀಡಿ ಸಂದಾಯ ಮಾಡಲಾಗುವುದು. ಕಾರ್ಯಕ್ರಮವು ಉತ್ತರ ಕರ್ನಾಟಕದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಂಘದ ಪದಾಧಿಕಾರಿಗಳು ಮತ್ತು ನಿರ್ದೇಶಕರುಗಳಿಂದ ಆರ್ಥಿಕವಾಗಿ ಬಡತನದ ಬಗ್ಗೆ ದೃಡೀಕರಣ ಪಡೆದು ನವೆಂಬರ್ 15 ರೊಳಗೆ ಅರ್ಹ ಅಭ್ಯರ್ಥಿಗಳು ಆಯಾ ಜಿಲ್ಲೆಯ ಗಂಗಮತ ನೌಕರರ ಕ್ಷೇಮಾಭಿವೃದ್ಧಿ ಸಂಘ, ರಾಜ್ಯ ಸಂಘದ ಪದಾಧಿಕಾರಿಗಳ ವಿಳಾಸಕ್ಕೆ ಅಂಚೆ ಮೂಲಕ ದಾಖಲೆಗಳನ್ನು ಕಳುಹಿಸಿಕೊಡಬೇಕು.

ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ/ ಕರ್ನಾಟಕ ರಾಜ್ಯ ಗಂಗಾಮತ ಸಂಘದ ಕಚೇರಿ, ರಾಮಶೆಟ್ಟಿ ಗಲ್ಲಿ, ಒಟಿಸಿ ರಸ್ತೆ, ನಗರ್ಥ ಪೇಟೆ, ಬೆಂಗಳೂರು -560002, ವಾರ್ಡನ್ :ರೇವಣಸಿದ್ದಪ್ಪ ಮೋ:6363811852

ಶಿವಮೊಗ್ಗ ಜಿಲ್ಲಾ ಗಂಗಮ್ಮ ಮತ ಸಂಘ, ಬಾಪೂಜಿನಗರ ಮುಖ್ಯ ರಸ್ತೆ, ಶಿವಮೊಗ್ಗ ,ವಾರ್ಡನ್: ಹನುಮೇಶ್, ಮೋ:9844784986 ಅವರನ್ನು ಸಂಪರ್ಕಿಸಬಹುದು.

ವಿದ್ಯಾರ್ಥಿಗಳು ಮಾಹಿತಿಯನ್ನು ಸಂಘದ ಕೆಳಕಂಡ ಪದಾಧಿಕಾರಿಗಳ ಮೂಲಕ ತಲುಪಿಸಬಹುದಾಗಿದೆ,  ಇದರಲ್ಲಿ ಜಿಲ್ಲಾ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಮುಖಂಡರು ಸಹ ಇದ್ದಾರೆ.

ದಾಖಲೆ ಪತ್ರಗಳ ವಿವರ

ವಿದ್ಯಾರ್ಥಿಗಳು ಸಲ್ಲಿಸಬೇಕಾದ ದಾಖಲೆಗಳೆಂದರೆ ವಿದ್ಯಾರ್ಥಿಗಳು ತಾವು ಓದುತ್ತಿರುವ ಪದವಿ ಬಗ್ಗೆ ದೃಢೀಕರಣ ಪತ್ರವನ್ನು ಓದುತ್ತಿರುವ ಸಂಸ್ಥೆಯಿಂದ ಪಡೆದು ವಾಸಸ್ಥಳದ ವಿವರ, ಬಿ.ಪಿ.ಎಲ್. ಕಾರ್ಡ್, ಆಧಾರ್ ಕಾರ್ಡ್ ಮತ್ತು  ಬ್ಯಾಂಕ್ ಖಾತೆ ವಿವರದ ಪ್ರತಿಗಳೊಂದಿಗೆ ಸಲ್ಲಿಸಬೇಕು. ಕೊನೆಯದಾಗಿ ಬಂದ ಪತ್ರ ಗಳನ್ನು ಗಣನೆಗೆ ತೆಗೆದುಕೊಳ್ಳದೆ ಕೊಳುವುದಿಲ್ಲ ಎಂದರು.

ಪತ್ರಿಕಾ ಗೋಷ್ಟಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಹಾಲೇಶಪ್ಪ, ಉದಯ್ ಅಂಬಿಗರ್, ಬಿ.ಎಚ್ ರಂಗನಾಥ್, ವಿಜಯಕುಮಾರ್ ಗಂಗಾ ಪುತ್ರ, ಜಿಲ್ಲೆಯ ಪದಾಧಿಕಾರಿಗಳು ಇದೇ ವೇಳೆ ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಸಿಎಂ ಸೂಚನೆಯಂತೆ ರಸ್ತೆ ಬದಿ, ರಸ್ತೆ ವಿಭಜಕಗಳ ಗಿಡಗಳ ನಿರ್ವಹಣೆಗೆ ಆದೇಶಮಡಿವಾಳ ಸಮಾಜ ಪರಿಶಿಷ್ಟ ಜಾತಿಗೆ ಸೇರಿಸಲು ಮಾ.16ಕ್ಕೆ ಧರಣಿBalc ನಿಂದ ಉಚಿತ ವೃತ್ತಿ ಮಾರ್ಗದರ್ಶನ,sat ಬಿಡುಗಡೆಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಡಿವಾಳ ಸಂಘದಿಂದ ಮಾ.16ಕ್ಕೆ ಫ್ರೀಡಂ ಪಾರ್ಕಿನಲ್ಲಿ ಧರಣಿಕೊಲ್ಲಿ ಯುದ್ಧ: ಕನ್ನಡಿಗರನ್ನು ರಕ್ಷಿಸಿ ಕರೆತರಲಾಗುವುದು: ಸಿಎಂ ಸಿದ್ದರಾಮಯ್ಯಇಸ್ರೇಲ್ ಇರಾನ್ ನಡುವೆ ಯುದ್ಧ, ದುಬೈನಲ್ಲಿ ಕನ್ನಡಿಗರಿಗೆ ಆತಂಕ, ರಕ್ಷಣೆಗೆ ಸಿಎಂ ಮುಂದುಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರಮಂಜು ಪಾಂಡವಪುರ ನಿರ್ದೇಶನದಲ್ಲಿ " ಮಣ್ಣಿನ ಮಗ ಮಾರ್ಗದರ್ಶಿ " ರೈತ ಸಾಧಕನ ಕುರಿತ ಸಾಕ್ಷಾಚಿತ್ರಕೋರಮಂಗಲದಲ್ಲಿ ಇಂದ್ರಿಯ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಹೊಸ ಮಳಿಗೆ ಆರಂಭಕುಮಾರಿ ವರ್ಷ ಅದ್ದೂರಿಯಾಗಿ ಭರತನಾಟ್ಯ ರಂಗ ಪ್ರವೇಶ