LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇಂದಿರಾ ಕ್ಯಾಂಟೀನ್‌ ಮುಂದೆ ಇಂದಿರಾಗಾಂಧಿ ಬರ್ತಡೆ ಆಚರಣೆ

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅರಕೆರೆ ವಾರ್ಡ್ 193ರಲ್ಲಿರುವ  ಇಂದಿರಾ ಕ್ಯಾಂಟಿನ್‌ ಆವರಣದಲ್ಲಿ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಹುಟ್ಟುಹಬ್ಬವನ್ನು ಸರಳವಾಗಿ ಕ್ಷೇತ್ರದ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಉಮಾ ಶ್ರೀನಿವಾಸ್ ರೆಡ್ಡಿ ನೇತೃತ್ವದಲ್ಲಿ  ಆಚರಿಸಲಾಯಿತು.

ದೇಶ ಖಂಡ ಅಪ್ರತಿಮ ನಾಯಕಿ, ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರ 106ನೇ ಹುಟ್ಟುಹಬ್ಬದ ಹಿನ್ನಲೆ ರಾಜ್ಯದಲ್ಲಿ ವಿಶೇಷವಾಗಿ ಅವರನ್ನು ನೆನೆಯುವ ಸಲುವಾಗಿ, ಅವರು ಮಾಡಿರುವ ಕೆಲಸ ಕಾರ್ಯಗಳನ್ನು ಮತ್ತೊಬ್ಬರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಪ್ರೇರಣೆಯಾಗುವ ನಿಟ್ಟಿನಲ್ಲಿ ಬದುಕಿದ್ದಾರೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಮುಖಂಡ ರವೀಂದ್ರ, ಇಂದಿರಾ ಗಾಂಧಿ ಅವರು ದೇಶದ ಮೊದಲ ಪ್ರಧಾನ ಮಂತ್ರಿ, ದೇಶ, ರಾಜ್ಯಕ್ಕೆ ಕೊಟ್ಟ ಅವರ ಕೊಡುಗೆ ಅಪಾರವಾಗಿದೆ. ದೇಶದ ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿದ್ದರು, ಮಹಿಳೆಯರ ಬಗ್ಗೆ ಇರುವ ಮಹತ್ವವನ್ನು ಸಾರಿದರು.ರೈತರು. ಬಡವರು,ಕಾರ್ಮಿಕರ ಬಗ್ಗೆ ಅವರಿಗೆ ಇದ್ದ ಕಾಳಜಿ ಎಲ್ಲರೂ ಸಹಾ ಈ ಸಂದರ್ಭದಲ್ಲಿ ನೆನೆಯಬೇಕಾಗಿದೆ ಎಂದು ಹೇಳಿ ಮತ್ತೊಮ್ಮೆ ಇಂದಿರಾ ಗಾಂಧಿ ಅವರ ಬರ್ತಡೇಗೆ ಶುಭಾಷಯಕೋರಿದರು.

ನಂತರ ಬೊಮ್ಮನಹಳ್ಳಿ ಮಹಿಳಾ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷೆ ಉಮಾ ಶ್ರೀನಿವಾಸ್ ರೆಡ್ಡಿ ಮಾತನಾಡಿ, ಇಂದಿರಾ ಗಾಂಧಿ ಅವರು ಮಹಿಳೆಯರ ಬೆಲೆ ಏನೆಂಬುದರ ಬಗ್ಗೆ ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ. ಬಡವರಿಗೆ ಮನೆಗಳನ್ನು ಕೊಟ್ಟಿದ್ದಾರೆ. ಕಾರ್ಮಿಕರು ಯಾವ ರೀತಿ ಜೀವನ ಮಾಡಬೇಕೆಂಬುದನ್ನು ಹೇಳಿಕೊಟ್ಟಿದ್ದಾರೆ. ನಾವು ಬದುಕಿರುವ ತನಕ ಅವರನ್ನು ನೆನೆಸಿಕೊಳ್ಳಬೇಕು ಎಂದರು. ಅಲ್ಲದೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಎಲ್ಲರಿಗೂ ಅನುಕೂಲ ಮಾಡಿಕೊಟ್ಟಿದೆ. ಸಮಾಜದ  ಕಟ್ಟಕಡೆಯ ವರ್ಗಕ್ಕೂ ಯೋಜನೆ ಮುಟ್ಟುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಅವರ ಬರ್ತಡೆ ಹಿನ್ನೆಲೆ ಕ್ಯಾಂಟೀನ್ ಮುಂದೆ ಕೇಕ್ ಕತ್ತರಿಸುವ ಮೂಲಕ ವಿಶೇಷವಾಗಿ ಅವರ ಹುಟ್ಟುಹಬ್ಬವನ್ನು ಆಚರಿಸಿದರು.

ಕಾರ್ಯಕ್ರಮದಲ್ಲಿ  ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ್ ರೆಡ್ಡಿ, ಪಲ್ಲವಿ,ಸುಜಾತ, ಅಮರೇಶ್, ಬಿಬಿಎಂಪಿ ಪೌರ ಕಾರ್ಮಿಕರು, ಮಾರ್ಷಲ್ ಗಳು ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಸಿಎಂ ಸೂಚನೆಯಂತೆ ರಸ್ತೆ ಬದಿ, ರಸ್ತೆ ವಿಭಜಕಗಳ ಗಿಡಗಳ ನಿರ್ವಹಣೆಗೆ ಆದೇಶಮಡಿವಾಳ ಸಮಾಜ ಪರಿಶಿಷ್ಟ ಜಾತಿಗೆ ಸೇರಿಸಲು ಮಾ.16ಕ್ಕೆ ಧರಣಿBalc ನಿಂದ ಉಚಿತ ವೃತ್ತಿ ಮಾರ್ಗದರ್ಶನ,sat ಬಿಡುಗಡೆಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಡಿವಾಳ ಸಂಘದಿಂದ ಮಾ.16ಕ್ಕೆ ಫ್ರೀಡಂ ಪಾರ್ಕಿನಲ್ಲಿ ಧರಣಿಕೊಲ್ಲಿ ಯುದ್ಧ: ಕನ್ನಡಿಗರನ್ನು ರಕ್ಷಿಸಿ ಕರೆತರಲಾಗುವುದು: ಸಿಎಂ ಸಿದ್ದರಾಮಯ್ಯಇಸ್ರೇಲ್ ಇರಾನ್ ನಡುವೆ ಯುದ್ಧ, ದುಬೈನಲ್ಲಿ ಕನ್ನಡಿಗರಿಗೆ ಆತಂಕ, ರಕ್ಷಣೆಗೆ ಸಿಎಂ ಮುಂದುಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರಮಂಜು ಪಾಂಡವಪುರ ನಿರ್ದೇಶನದಲ್ಲಿ " ಮಣ್ಣಿನ ಮಗ ಮಾರ್ಗದರ್ಶಿ " ರೈತ ಸಾಧಕನ ಕುರಿತ ಸಾಕ್ಷಾಚಿತ್ರಕೋರಮಂಗಲದಲ್ಲಿ ಇಂದ್ರಿಯ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಹೊಸ ಮಳಿಗೆ ಆರಂಭಕುಮಾರಿ ವರ್ಷ ಅದ್ದೂರಿಯಾಗಿ ಭರತನಾಟ್ಯ ರಂಗ ಪ್ರವೇಶ