LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ, ಬೊಮ್ಮನಹಳ್ಳಿ, ಪಶ್ಚಿಮ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ ಹಾಗೂ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ.

ಮಹದೇವಪುರ ವಲಯ:

ಮಹದೇವಪುರ ವಿಭಾಗ ವ್ಯಾಪ್ತಿಯಲ್ಲಿನ ಸ್ಥಳೀಯ Resident Welfare Association ಹಾಗೂ Mahadevapura Traders Associations ರವರ ಮನವಿಯಂತೆ ಹಾಗೂ ಮಾನ್ಯ ಉಚ್ಚ ನ್ಯಾಯಾಲಯದ ಹೊರಡಿಸಿರುವ ಆದೇಶದನುಸಾರ ಇಂದು ಮಹದೇವಪುರ ವಿಭಾಗ ವ್ಯಾಪ್ತಿಯ ಇಬ್ಬಲೂರಿನಿಂದ ಕಾಡುಬಿಸನಹಳ್ಳಿ, ಕಾರ್ತಿಕ್‌ನಗರ ಮಾರ್ಗವಾಗಿ ಲೌರಿ ಜಂಕ್ಷನ್ ವರೆಗೆ ಸುಮಾರು 4.00 ಕಿ.ಮೀ ರಷ್ಟು ಹಾಗೂ ಲೌರಿ ಜಂಕ್ಷನ್‌ನಿಂದ ಗರುಡಾಚಾರ್‌ಪಾಳ್ಯ ಮೆಟ್ರೋ ನಿಲ್ದಾಣ, ಶಾಂತಿನಿಕೇತನ, ಬಿಪಿಎಲ್ ಮೆಟ್ರೋ ನಿಲ್ದಾಣದವರೆಗೆ ಸುಮಾರು 3.00 ಕಿ.ಮೀ ರಷ್ಟು, ಹೆಚ್.ಎ.ಎಲ್ ಅಂಡರ್‌ಪಾಸ್‌, ಸುರಂಜನ್‌ದಾಸ್ ಜಂಕ್ಷನ್‌ನಿಂದ ಯಮಲೂರು ಜಂಕ್ಷನ್, ಯಶೋಮತಿ ಆಸ್ಪತ್ರೆ, ಸಿದ್ದಾಪುರ ಜಂಕ್ಷನ್, ವರ್ತೂರು ಕೋಡಿ, ಸ್ವಸ್ತಾ ಆಸ್ಪತ್ರೆ, ಹೋಪ್‌ಫಾರಂ ಮಾರ್ಗವಾಗಿ ಸಾಯಿಬಾಬಾ ಜಂಕ್ಷನ್ ವರೆಗೆ ಸುಮಾರು 3.00 ಕಿ.ಮೀ ರಷ್ಟು ರಸ್ತೆಯಲ್ಲಿನ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಚರಣೆಯನ್ನು ನಡೆಸಲಾಗಿದ್ದು, ಪಾದಚಾರಿ ಮಾರ್ಗಗಳಲ್ಲಿ ಇಟ್ಟಿದ್ದ ಅನಧಿಕೃತ ಅಂಗಡಿ, ಅಂಗಡಿ ಮುಂಗಟ್ಟುಗಳು, ಅನುಪಯುಕ್ತ ತಳ್ಳುವ ಗಾಡಿಗಳು, ಹಣ್ಣಿನ ಬಾಕ್ಸ್‌ಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅನುವುಮಾಡಲಾಯಿತು.

ಕಾರ್ಯಚರಣೆ ನಡೆಯುವ ಮುನ್ನ ವ್ಯಾಪಾರಿಗಳ ಗಮನಕ್ಕೆ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡದಂತೆ ಧ್ವನಿವರ್ಧಕ ಮುಖಾಂತರ ಕೋರಲಾಗಿದ್ದರೂ, ಮೇಲ್ಕಾಣಿಸಿದ ರಸ್ತೆಗಳಲ್ಲಿ ಸುಮಾರು 10.00 ಕಿ.ಮೀ ರಷ್ಟು ಉದ್ದದ ಪಾದಚಾರಿ ಹಾಗೂ ರಸ್ತೆಯಲ್ಲಿ 12 ತಾತ್ಕಾಲಿಕ ಅಂಗಡಿಗಳನ್ನು, ಸುಮಾರು 4 ಅನುಪಯುಕ್ತ ತಳ್ಳುವ ಗಾಡಿಗಳನ್ನು ಹಾಗೂ ತಾತ್ಕಾಲಿಕವಾಗಿ ಪುಟ್ ಪಾತ್ ಮೇಲೆ ಸಾಮಾಗ್ರಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವವರನ್ನು ತೆರವುಗೊಳಿಸಲಾಯಿತು. ಸದರಿ ಕಾರ್ಯಚರಣೆಯಲ್ಲಿ ಸುಮಾರು ಮೂರು ಲೋಡ್‌ಗಳಷ್ಟು ಅಂಗಡಿ ಮುಗ್ಗಟ್ಟುಗಳನ್ನು ಹಾಗೂ ಸಾಮಾಗ್ರಿಗಳನ್ನು ತೆರವುಗೊಳಿಸಲಾಯಿತು.

ರಾಜರಾಜೇಶ್ವರಿ ನಗರ ವಲಯ:

ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಕೆಂಗೇರಿ ವಿಭಾಗದಲ್ಲಿ, ವಾರ್ಡ್ ಸಂಖ್ಯೆ 130 ಮತ್ತು 159 ರಲ್ಲಿನ ಕೆಂಗೇರಿ ಹೊರವರ್ತುಲ ರಸ್ತೆಯಲ್ಲಿದ್ದ ಪಾದಚಾರಿ ವ್ಯಾಪಾರಿಗಳನ್ನು ಇಂದು ತೆರವುಗೊಳಿಸಲಾಯಿತು. ಸದರಿ ರಸ್ತೆಯನ್ನು “ಮಾದರಿ ರಸ್ತೆ”ಯನ್ನಾಗಿ ಮಾಡುವ ಉದ್ದೇಶದ ಹಿನ್ನಲೆಯಲ್ಲಿ ಹಾಗೂ ವಾರ್ಡ್ ಸಂಖ್ಯೆ 130 ಉಲ್ಲಾಳ ವಾರ್ಡ್‌ನ್ನು “ಮಾದರಿ ವಾರ್ಡ್” ಎಂದು ದಿನಾಂಕ:30-11-2023ರೊಳಗೆ ಪ್ರಕಟಣೆ ಮಾಡುವ ಸಲುವಾಗಿ ಪೂರ್ವಭಾವಿಯಾಗಿ ಸಾರ್ವಜನಿಕರಿಗೆ ಓಡಾಟಕ್ಕೆ ತೊಂದರೆಯಾಗುತ್ತಿದ್ದ ಶಾಶ್ವತವಾಗಿ ನಿರ್ಮಾಣ ಮಾಡಿದ್ದ ಕಬ್ಬಿಣದ ಪೆಟ್ಟಿಗೆಗಳನ್ನು ತೆರವುಗೊಳಿಸಲಾಯಿತು. ಈ ಕಾರ್ಯಾಚರಣೆಯಲ್ಲಿ 10 ಶಾಶ್ವತವಾಗಿ ನಿರ್ಮಾಣ ಮಾಡಿದ ಕಬ್ಬಿಣದ ಪೆಟ್ಟಿಗೆಗಳು ಹಾಗೂ 46 ತಾತ್ಕಾಲಿಕ ಶೆಡ್‌ಗಳನ್ನು ಮತ್ತು ತಳ್ಳುವ ಗಾಡಿಗಳನ್ನು ತೆರವುಗೊಳಿಸಲಾಯಿತು. ಸದರಿ ಪಾಲಿಕೆಯ ಕ್ರಮಕ್ಕೆ ಸ್ಥಳೀಯ ಹಿರಿಯ ನಾಗರೀಕರು ಹರ್ಷ ವ್ಯಕ್ತಪಡಿಸಿ ಇದೇ ರೀತಿ ಇನ್ನು ಹಲವಾರು ರಸ್ತೆಗಳಲ್ಲಿ ಪಾದಚಾರಿ ಮಾರ್ಗಕ್ಕೆ ಅಡ್ಡಿಯಾಗಿರುವ ಕಟ್ಟಡ, ಪೆಟ್ಟಿಗೆ ಮತ್ತು ತಳ್ಳುವ ಗಾಡಿಗಳನ್ನು ತೆರವುಗೊಳಿಸಲು ಮನವಿ ಸಲ್ಲಿಸಿದರು.

ಬೊಮ್ಮನಹಳ್ಳಿ ವಲಯಕ್ಕೂ ಕಾಲಿಟ್ಟ ಜೆಸಿಬಿ

ಬೊಮ್ಮನಹಳ್ಳಿ ವಲಯ ವ್ಯಾಪ್ತಿಗೆ ಬರುವ ಬೆಂಗಳೂರು ದಕ್ಷಿಣ ವಿಭಾಗ, ಅಂಜನಾಪುರ ಉಪ ವಿಭಾಗದ ವಾರ್ಡ್ ನಂ.196 ಅಂಜನಾಪುರದ ಅಮೃತನಗರ ಮುಖ್ಯ ರಸ್ತೆ, ಕೋಣನಕುಂಟೆ ಸರ್ಕಾರಿ ಆಸ್ಪತ್ರೆ ಎದುರು ರಸ್ತೆಯಲ್ಲಿನ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಚರಣೆ ನಡೆಸಲಾಯಿತು.

ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಚರಣೆಯ ವೇಳೆ, 4 ಟ್ರ್ಯಾಕ್ಟರ್ ಹಾಗೂ 20ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಪಾದಚಾರಿ ಮಾರ್ಗಗಳಲ್ಲಿ ಇಟ್ಟಿದ್ದ 3 ತಾತ್ಕಾಲಿಕ ಶೆಡ್‌ಗಳಲ್ಲಿನ ಅನಧಿಕೃತ ಅಂಗಡಿ, ಅಂಗಡಿ ಮುಂಗಟ್ಟುಗಳು, ಅನುಪಯುಕ್ತ ತಳ್ಳುವ ಗಾಡಿಗಳು, ಹಣ್ಣಿನ ಬಾಕ್ಸ್‌ಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅನುವು ಮಾಡಲಾಯಿತು. ಸುಮಾರು 300 ಮೀಟರ್ ರಷ್ಟು ಉದ್ದದ ಪಾದಚಾರಿ ಹಾಗೂ ರಸ್ತೆಯಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವವರ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಮತ್ತೊಮ್ಮೆ ಪಾದವಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವವರಿಗೆ ದಂಡ ವಿಧಿಸುವ ಜೊತೆಗೆ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಲಾಗಿರುತ್ತದೆ.

ಪಶ್ಚಿಮ ವಲಯದಲ್ಲಿ ಅಕ್ರಮ ಒತ್ತುವರಿ ತೆರವು

ಪಶ್ಚಿಮ ವಲಯ ವ್ಯಾಪ್ತಿಯ ರಾಜಾಜಿನಗರದ ಶ್ರೀರಾಮ ಮಂದಿರ ವಾರ್ಡ್ ನ 10ನೇ ಮುಖ್ಯ ರಸ್ತೆ, ಭಾಷ್ಯಂ ವೃತ್ತದಿಂದ ಇ.ಎಸ್.ಐ ಆಸ್ಪತ್ರೆ12ನೇ ಮುಖ್ಯ ರಸ್ತೆಯವರೆಗೆ ಪಾದಚಾರಿ ಮಾರ್ಗದ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಈ ವೇಳೆ 4 ತಳ್ಳುವ ಗಾಡಿ ಹಾಗೂ ಅನಧಿಕೃತವಾಗಿ ಮೆಟ್ಟಿಲುಗನ್ನು ನಿರ್ಮಿಸಿ ತಾತ್ಕಾಲಿಕವಾಗಿ ತೆರದಿರುವ ಅಂಗಡಿಗಳನ್ನು ತೆರವುಗೊಳಿದಲಾಗಿದೆ.

ಮಲ್ಲೇಶ್ವರಂನ ಕಾಡುಮಲ್ಲೇಶ್ವರ ವಾರ್ಡ್ ನ 6, 7 ಮತ್ತು 8ನೇ ಕ್ರಾಸ್ ಮಾರ್ಗೋಸಾ ರಸ್ತೆಯಿಂದ ಸಂಪಿಗೆ ರಸ್ತೆಯವರೆಗೆ ಪಾದಚಾರಿ ಮಾರ್ಗದ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಈ ವೇಳೆ ಸುಮಾರು 2.1 ಕಿ.ಮೀ ಉದ್ದದ ರಸ್ತೆಯಲ್ಲಿ 50 ತಳ್ಳುವ ಗಾಡಿಗಳುನ್ನು ತೆರವುಗೊಳಿಸಲಾಗಿರುತ್ತದೆ.

ದಕ್ಷಿಣ ವಲಯ ವಲಯ ವ್ಯಾಪ್ತಿಯಲ್ಲಿ ಓ‌.ಎಫ್.ಸಿ ಕೇಬಲ್ ತೆರವು:

ದಕ್ಷಿಣ ವಲಯ ವಿಜಯನಗರ ವ್ಯಾಪ್ತಿಯ ಹೊರ ಪಶ್ಚಿಮ ಕಾರ್ಡ್ ರಸ್ತೆಯ ಸರ್ವಿಸ್ ರಸ್ತೆ ಅನಧಿಕೃತವಾಗಿ ಅಳವಡಿಸಿರುವ ಒ.ಎಫ್.ಸಿ ಕೇಬಲ್‌ಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು.

ನಗರದ ಪಶ್ಚಿಮ ಕಾರ್ಡ್ ರಸ್ತೆಯ ಸರ್ವಿಸ್ ರಸ್ತೆ, ಟೋಲ್ ಗೆಟ್ ಜಂಕ್ಷನ್ ನಿಂದ ವಿಜಯನಗರ ಮೆಟ್ರೋ ನಿಲ್ದಾಣದವರೆಗೂ 1.3 ಕೀ.ಮಿ ಅನಧಿಕೃತವಾಗಿ ಅಳವಡಿಸಿರುವ ಓಎಫ್‌ಸಿ ಕೇಬಲ್‌ಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದು, ಸದರಿ ರಸ್ತೆಯಲ್ಲಿ 4 ಟ್ರ್ಯಾಕ್ಟರ್ ಲೋಡ್ ಅನಧಿಕೃತ ಕೇಬಲ್ ಗಳನ್ನು ಕತ್ತರಿಸಿ ತೆರವುಗೊಳಿಸಲಾಗಿದೆ. ಕತ್ತರಿಸಿರುವ ಕೇಬಲ್‌ಗಳನ್ನು ಟ್ರ್ಯಾಕ್ಟರ್‌ಗಳ ಮೂಲಕ ತೆರವುಗೊಳಿಸಲಾಗಿದೆ.

ಸಾರ್ವಜನಿಕರ ಸುರಕ್ಷತೆ ಮತ್ತು ವಾಹನ ಸವಾರರ ಸಂಚಾರಕ್ಕೆ ಯಾವುದೆ ತೊಂದರೆಯಾಗದಿರುಲು ಅನಧಿಕೃತ ಒ.ಎಫ್.ಸಿ ತೆರವುಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನಧಿಕೃತ ಕೇಬಲ್‌ಗಳನ್ನು ಅಳವಡಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಸಂಬಂಧಪಟ್ಟ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಜೊತೆಗೆ ಅನಧಿಕೃತ ಕೇಬಲ್ ತೆರವು ಕಾರ್ಯಾಚರಣೆಗೆ ಸಂಚಾರ ಪೊಲೀಸ್ ವಿಭಾಗ ಹಾಗೂ ಸಾರ್ವಜನಿಕರು ಸಹಕರಿಸುವಂತೆ ವಲಯ ಜಂಟಿ ಆಯುಕ್ತರಾದ ಡಾ. ಜಗದೀಶ್.ಕೆ.ನಾಯ್ಕ ರವರು ಕೋರಿರುತ್ತಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಂಭೀರ ರಕ್ತಹೀನತೆಯಿಂದ ಬಳಲುತ್ತಿದ್ದ ಯುವಕನಿಗೆ ಸ್ಟೆಮ್ ಸೆಲ್ ದಾನ ಮಾಡಿ ಜೀವರಕ್ಷಕಿಯಾದ ಬೆಂಗಳೂರಿನ ಮಹಿಳೆಫೋರ್ಟಿಸ್ ಹೆಲ್ತ್ಕೇರ್ ನಿಂದ 4 ವಿಶೇಷ ಚಿಕಿತ್ಸಾಲಯ ಆರಂಭಬೆಂಗಳೂರಿನಲ್ಲಿ ಕಲಾಮಂದಿರದ 4ನೇ ಶೋರೂಂ ಆರಂಭ96 ರನ್ ಗಳಿಂದ ನ್ಯೂಜಿಲೆಂಡ್ ವಿರುದ್ಧ ಭಾರತ ಟಿ20 ವಿನ್ಫೋನ್ ಕದ್ದಾಲಿಕೆ; ಸಿಎಂ ಸಿದ್ದರಾಮಯ್ಯ ಸುಳ್ಳಿಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿನಗರದ ಐದು ವಿಭಾಗ, ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರ ಸಭೆಯಲ್ಲಿ ಮತನಾಡಿದ ಜಿಬಿಎ ಅಧ್ಯಕ್ಷರುಬೇಸಿಗೆಯಲ್ಲಿ ನೀರಿನ ತೊಂದರೆ ಎದುರಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ: ಎ ಸಿ ಎಸ್ ತುಷಾರ್ ಗಿರಿನಾಥ್ ಸೂಚನೆಜಲಮಂಡಳಿಯ ಪ್ರೋ-ರೇಟಾ - ಜೈನ್ ಇಂಟರ್‌ನ್ಯಾಷನಲ್ ಶಾಲೆಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ಯುದ್ಧಪೀಡಿತ ದೇಶಗಳಿಂದ ಕನ್ನಡಿಗರು ಎಲ್ಲಾ ಭಾರತೀಯರು ಸುರಕ್ಷಿತವಾಗಿ ವಾಪಸ್ ಬರುತ್ತಾರೆನೂತನ ಪದಾಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಸಚಿವರು