ಶಿವಾಜಿ ಮಹಾರಾಜ್ ಜಯಂತಿ ಮೆರವಣಿಗೆಗೆ ನಗರದಲ್ಲಿ ಪೊಲೀಸ್ ಅಲರ್ಟ್
https://youtu.be/-Oga9Nrrctw?si=2V-o4l07Bu2KEJCO
ರಾಯಚೂರು ನಗರದಲ್ಲಿ ಇಂದು ನಡೆಯಲಿರುವ ಶಿವಾಜಿ ಮಹಾರಾಜ್ ಜಯಂತಿ ಮೆರವಣಿಗೆ ಹಿನ್ನೆಲೆ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಬಾಗಲಕೋಟೆಯಲ್ಲಿ ನಡೆದ ಮೆರವಣಿಗೆ ವೇಳೆ ಕಲ್ಲುತೂರಾಟ ಪ್ರಕರಣದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದೆ.
ನಗರದ ಗಾಂಧಿ ವೃತ್ತದಿಂದ ಅಂಬಾದೇವಿ ದೇವಸ್ಥಾನದವರೆಗೆ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಸಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆಯೊಳಗೆ ಮೆರವಣಿಗೆ ಮುಗಿಸಲು ಅನುಮತಿ ನೀಡಲಾಗಿದೆ. ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ಮಹರಾಜರ ಪುತ್ತಳಿಯೊಂದಿಗೆ ಶಿವಪಾರ್ವತಿ, ಶ್ರೀರಾಮ, ಆಂಜಿನೇಯ್ಯ ಹಾಗೂ ಗಣೇಶ ವಿಗ್ರಹಗಳು ಇರಲಿವೆ. ಸುಮಾರು 200 ರಿಂದ 400 ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಮೆರವಣಿಗೆಯುದ್ದಕ್ಕೂ ಕಟ್ಟುನಿಟ್ಟಿನ ಪೊಲೀಸ್ ಕಣ್ಗಾವಲು ಇರಲಿದೆ. ಭದ್ರತೆಗೆ 2 ಡಿಎಸ್ಪಿ, 5 ಸಿಪಿಐ, 3 ಪಿಎಸ್ಐ, 120 ಪೇದೆ, 1 ಕೆಎಸ್‌ಆರ್‌ಪಿ ಹಾಗೂ 4 ಹೋಂ ಗಾರ್ಡ್ ತುಕಡಿಗಳನ್ನು ನಿಯೋಜಿಸಲಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗದಂತೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್‌ಪಿ ಅರುಣಾಂಗ್ಷು ಗಿರಿ ಅವರು ತಿಳಿಸಿದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.