ಹೈಲೈಟ್ಸ್:
ಕನ್ನಡ ನಟ ಒಳ್ಳೆ ಹುಡುಗ ಪ್ರಥಮ್ Mamata Banerjee ಸೋಲಿಗಾಗಿ ದೇವರಲ್ಲಿ ಪ್ರಾರ್ಥನೆ.
“ಮಕ್ಕಳಾಗ್ಬೇಕು, ಸಿನಿಮಾ ಗೆಲ್ಲಬೇಕು” ಅಂತ ಹರಕೆ ಕಟ್ಟಿದವನಲ್ಲ ಎಂದ ಪ್ರಥಮ್.
ಮಮತಾ ಪಕ್ಷ ಸೋತರೆ ನೂರು ಜನರ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳಿಕೆ.
ಬೆಂಗಳೂರು: ಪಶ್ಚಿಮ ಬಂಗಾಳ ಚುನಾವಣೆಯ ಮತ ಎಣಿಕೆ ನಡುವೆ, ಕನ್ನಡ ನಟ ಒಳ್ಳೆ ಹುಡುಗ ಪ್ರಥಮ್ ಮಮತಾ ಬ್ಯಾನರ್ಜಿ ಸೋಲಿಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. “ಇದು ದೇಶಕ್ಕಾಗಿ” ಎಂದು ಅವರು ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಥಮ್, “ನನಗೆ ಮಕ್ಕಳಾಗ್ಬೇಕು ಅಥವಾ ಸಿನಿಮಾ ಗೆಲ್ಲಬೇಕು ಅಂತ ಯಾವತ್ತೂ ಹರಕೆ ಹೊತ್ತವನಲ್ಲ. ಆದರೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪಕ್ಷ ಸೋತರೆ ನೂರು ಜನರ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವೆ. ಸಮಾಜದಲ್ಲಿ ಕಷ್ಟದಲ್ಲಿರುವವರ ಜೊತೆ ನಿಲ್ಲುತ್ತೇನೆ ಎಂದು ಈಶ್ವರನಲ್ಲಿ ಪ್ರಾರ್ಥನೆ ಮಾಡಿದ್ದೇನೆ” ಎಂದಿದ್ದಾರೆ.
ಮುಂದುವರೆದು, “ನಾನು ರಾಜಕೀಯದಿಂದ ದೂರ. ಆದರೆ ನನ್ನ ದೇಶ ಬಾಂಗ್ಲಾ ವಲಸಿಗರಿಂದ ಸುರಕ್ಷಿತವಾಗಿರಬೇಕು, ಜನರು ಚೆನ್ನಾಗಿರಬೇಕು ಅನ್ನೋದೇ ನನ್ನ ಬೇಡಿಕೆ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪಕ್ಷ ಸೋಲಲಿ. ನಮ್ಮವರು ಸುಖವಾಗಿರಲಿ. ಖಂಡಿತವಾಗಿಯೂ ಸಂಕಷ್ಟದಲ್ಲಿರುವವರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ” ಎಂದು ಹೇಳಿದ್ದಾರೆ.