Web Stories
KhushiHost News CMS Pro
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಪ್ರಾಪ್ತ ಬಾಲಕಿಗೆ ಮದುವೆಗೆ ಸಿದ್ಧತೆ: ತಾಳಿ ಕಟ್ಟುವ ವೇಳೆ ಎಂಟ್ರಿಕೊಟ್ಟ ಅಧಿಕಾರಿಗಳು, ಪೊಲೀಸರು

Advertisement

ನೆಲಮಂಗಲ: ಅಪ್ರಾಪ್ತ ಬಾಲಕಿಗೆ ಮದುವೆಗೆ ಸಿದ್ಧತೆ ನಡೆಸಿದ್ದ ಪೋಷಕರಿಗೆ ಅಧಿಕಾರಿಗಳು ಶಾಕ್ ನೀಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.

ಕೋಮಲ ಎಂಬ ಅಪ್ರಾಪ್ತ ಬಾಲಕಿಯನ್ನು ಕೇಶವ್ ಗೌಡ ಎಂಬಾತನಿಗೆ ಕೊಟ್ಟು ಮದುವೆ ಮಾಡಲು ಎಲ್ಲಾ ಸಿದ್ಧತೆಗಳು ನಡೆದಿದ್ದವು. ನೆಲಮಂಗಲದ ಕಾವಾಡಿ ಮಠದ ಕಲ್ಯಾಣ ಮಂಟಪದಲ್ಲಿ ಅದ್ಧೂರಿ ರಿಸೆಪ್ಶನ್ ಕೂಡ ನೆರವೇರಿತ್ತು. ಇಂದು ಬೆಳಿಗ್ಗೆ ಅದ್ಧೂರಿ ವಿವಾಹ. ಎರಡೂ ಕುಟಿಂಬದಲ್ಲಿಯೂ ಮದುವೆ ಸಂಭ್ರಮ. ಮದುವೆ ಮಂಟಪದಲ್ಲಿ ವರ ಮಶಾಯ ವಧುವಿಗೆ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪೊಲಿಸರ ಸಮೇತ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟು ಮದುವೆ ನಿಲ್ಲಿಸಿದ್ದಾರೆ.

ಕೋಮಲಳಿಗೆ 18 ವರ್ಷ ತುಂಬಿದೆ ಎಂದು ಭಾವಿಸಿ ಪೋಷಕರು ಮದುವೆ ನಿಶ್ಚಯಿಸಿದ್ದರಂತೆ . ಆದರೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅನಿತಾ ಲಕ್ಷ್ಮಿ ನೇತೃತ್ವದ ತಂಡ ದಾಖಲೆಗಳನ್ನು ಪರಿಶೀಲಿಸಿದಾಗ, ಬಾಲಕಿಗೆ 18 ವರ್ಷ ತುಂಬಲು ಇನ್ನೂ 4 ತಿಂಗಳು ಬಾಕಿ ಇರುವುದು ದೃಢಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಕಲ್ಯಾಣ ಮಂಟಪಕ್ಕೆ ದೌಡಾಯಿಸಿದ ಅಧಿಕಾರಿಗಳು ಮದುವೆ ತಡೆದಿದ್ದಾರೆ. ಎರ‍ಡೂ ಕುಟಿಂಬದವರಿಗೂ ಬಾಲಕಿ ಅಪ್ರಾಪ್ತೆ ಎಂಬುದನ್ನು ಮನವರಿಕೆ ಮಾಡಿ ಕಾನೂನಿನ ಬಗ್ಗೆ ಅರಿವು ಮೂಡಿಸಿದ್ದಾರೆ.

ಮದುವೆಗೆ ಈಗಾಗಲೇ 5 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಕಾನೂನಿಗೆ ತಲೆಬಾಗಿ ಮದುವೆ ನಿಲ್ಲಿಸಿದ್ದಾರೆ. ಕೋಮಲಳಿಗೆ 18 ವರ್ಷ ತುಂಬಿದ ಬಳಿಕಆಕೆಯನ್ನೇ ಮದುವೆಯಾಗುವುದಾಗಿ ವರ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾನೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಬಾಲ್ಯ ವಿವಾಹ ಕಾನೂನುಬಾಹಿರ ಎಂದು ಪೋಷಕರಿಗೆ ತಿಳಿಹೇಳಲಾಗಿದೆ.

Advertisement
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಇಂದು ಪ್ರಧಾನಿ ಮೋದಿ ಭೇಟಿ: ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಜೀಪ್ ಗೆ ಟಿಪ್ಪರ್ ಡಿಕ್ಕಿ ಹೊಡೆಸಿ 6 ಸುತ್ತು ಗುಂಡು ಹಾರಿಸಿ ಗ್ರಾಪಂ ಸದಸ್ಯನ ಭೀಕರ ಹತ್ಯೆಆಧಾರ್ ನವೀಕರಣ ಈಗ ಮತ್ತಷ್ಟು ಸುಲಭ: ಆನ್‌ಲೈನ್‌ ನಲ್ಲೇ ಮೊಬೈಲ್ ಸಂಖ್ಯೆ, ವಿಳಾಸ ಬದಲಾಯಿಸಿBREAKING: ಅಂಬೇಡ್ಕರ್ ಜಯಂತಿ ಮೆರವಣಿಗೆಯಲ್ಲಿ ಕಾರ್ ಹರಿದು ಬಾಲಕಿ ಸಾವು, 9 ಜನ ಗಂಭೀರBIG NEWS: ಜನಗಣತಿ ಮೊದಲ ಹಂತ: ನಾಳೆಯಿಂದ ಮನೆಗಣತಿ ಆರಂಭ, ಇಂದಿಗೆ ಸ್ವಯಂಗಣತಿ ಅಂತ್ಯಇಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ ಇಲ್ಲ: ಮಂಡಳಿ ಸ್ಪಷ್ಟನೆBIG NEWS: ಇಂದು ಯೋಗೀಶ್ ಗೌಡ ಹತ್ಯೆ ಕೇಸ್ ತೀರ್ಪು ಪ್ರಕಟ: ಶಾಸಕ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರSHOCKING : ಬೆಂಗಳೂರಲ್ಲಿ ಘೋರ ಘಟನೆ : 17 ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ.!ದ್ವಿತೀಯ ಪಿಯುಸಿ ಪರೀಕ್ಷೆ-2 ನೋಂದಣಿಗೆ ಅವಕಾಶಬಿಕ್ಲು ಶಿವ ಕೊಲೆ ಕೇಸ್: ಬೈರತಿ ಬಸವರಾಜ್ ಗೆ ನೋಟಿಸ್ ಜಾರಿ