LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬ್ಯಾಕ್ ಲಾಗ್ ಹುದ್ದೆ ಕೂಡಲೇ ಭರ್ತಿ ಮಾಡುವಂತೆ ಎಸ್ ಸಿ, ಎಸ್ ಟಿ ನಿರುದ್ಯೋಗಿಗಳಿಂದ ಮನವಿ

ಬಳ್ಳಾರಿ (ಕಂಪ್ಲಿ):, ಕರ್ನಾಟಕ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಬಳ್ಳಾರಿ ಜಿಲ್ಲಾ ಎಸ್ ಸಿ ಎಸ್ ಟಿ ನಿರುದ್ಯೋಗಿಗಳ ಸಂಘದಿಂದ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು!

ಮನವಿ ಸಲ್ಲಿಸಿದ ನಂತರ ಮಾತನಾಡಿದ ಬಳ್ಳಾರಿ ಜಿಲ್ಲಾ ಎಸ್ ಸಿ ಎಸ್ ಟಿ ನಿರುದ್ಯೋಗಿಗಳ ಸಂಘದ ಜಿಲ್ಲಾಧ್ಯಕ್ಷರಾದ ಬಾಪಯ್ಯನವರ ವೆಂಕಟೇಶ್ ರವರು ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬದೇ ಇರುವುದರಿಂದ ದಲಿತ ಸಮುದಾಯದ ಅಭ್ಯರ್ಥಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದು ನಿಗದಿತ ವಯಸ್ಸು ಮೀರುತ್ತಿರುವ ಆತಂಕದಲ್ಲಿದ್ದು ಸರ್ಕಾರ ಕೂಡಲೇ ನಾನಾ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿದರು,

ಮನವಿ ಸ್ವೀಕರಿಸಿದ ಕೆ ಎಸ್ ಪಿ ಸಿ ಎ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ತಮ್ಮ ಮನವಿ ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು

ಈ ಸಂದರ್ಭದಲ್ಲಿ ಸುಗಾಲಿ ವೆಂಕಟೇಶ್ ನಾಯ್ಕ, ಎಸ್. ಗಿರಿಮಲ್ಲಪ್ಪ, ತಿಮ್ಮಯ್ಯ, ಬಿ ಮಂಜುನಾಥ್, ಪಿಟಿ ವೀರಮಲ್ಲಪ್ಪ, ಎನ್ ದೇವಣ್ಣ, ಕೆ. ತಿಪ್ಪಣ್ಣ, ಸಿ, ಲಿಂಗಪ್ಪ, ರಾಮಂಜಿನಿ,ರಾಮಚಂದ್ರ ಛಲವಾದಿ ಉಪಸ್ಥಿತಿಯಲ್ಲಿದ್ದರು
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೇಸಿಗೆಯಲ್ಲಿ ನೀರಿನ ತೊಂದರೆ ಎದುರಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ: ಎ ಸಿ ಎಸ್ ತುಷಾರ್ ಗಿರಿನಾಥ್ ಸೂಚನೆಜಲಮಂಡಳಿಯ ಪ್ರೋ-ರೇಟಾ - ಜೈನ್ ಇಂಟರ್‌ನ್ಯಾಷನಲ್ ಶಾಲೆಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ಯುದ್ಧಪೀಡಿತ ದೇಶಗಳಿಂದ ಕನ್ನಡಿಗರು ಎಲ್ಲಾ ಭಾರತೀಯರು ಸುರಕ್ಷಿತವಾಗಿ ವಾಪಸ್ ಬರುತ್ತಾರೆನೂತನ ಪದಾಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಸಚಿವರುನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಿ: ರಮೇಶ್ಡಿಸಿಎಂ ಸೂಚನೆಯಂತೆ ರಸ್ತೆ ಬದಿ, ರಸ್ತೆ ವಿಭಜಕಗಳ ಗಿಡಗಳ ನಿರ್ವಹಣೆಗೆ ಆದೇಶಮಡಿವಾಳ ಸಮಾಜ ಪರಿಶಿಷ್ಟ ಜಾತಿಗೆ ಸೇರಿಸಲು ಮಾ.16ಕ್ಕೆ ಧರಣಿBalc ನಿಂದ ಉಚಿತ ವೃತ್ತಿ ಮಾರ್ಗದರ್ಶನ,sat ಬಿಡುಗಡೆಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಡಿವಾಳ ಸಂಘದಿಂದ ಮಾ.16ಕ್ಕೆ ಫ್ರೀಡಂ ಪಾರ್ಕಿನಲ್ಲಿ ಧರಣಿಕೊಲ್ಲಿ ಯುದ್ಧ: ಕನ್ನಡಿಗರನ್ನು ರಕ್ಷಿಸಿ ಕರೆತರಲಾಗುವುದು: ಸಿಎಂ ಸಿದ್ದರಾಮಯ್ಯ