ನ್ಯೂ ಸರಕಾರಿ ನೌಕರರಿಗೆ ನಿವೃತ್ತ ಮುಖ್ಯ ಇಂಜಿನಿಯರ್ ಕೆ.ಜಿ.ಜಗದೀಶ್ ಕಿವಿ ಮಾತು.!
ಚಿತ್ರದುರ್ಗ: ಸರ್ಕಾರಿ ಕೆಲಸವನ್ನು ಮಾಡಿ ಈಗ ನಿವೃತ್ತಿಯನ್ನು ಹೊಂದಿರುವ ನೀವುಗಳು ನಿಮ್ಮ ಅನುಭವವನ್ನು ಇಂದಿನ ಹೊಸದಾಗಿ ನೇಮಕವಾಗಿರುವ ನೌಕರರಿಗೆ ತಿಳಿಸುವುದರ ಮೂಲಕ ಸರ್ಕಾರಿ ಕೆಲಸ ಸರಿದಾರಿಯಲ್ಲಿ ನಡೆಯವಲ್ಲಿ ಮುಂದಾಗಬೇಕಿದೆ ಎಂದು ನಿವೃತ್ತ ಮುಖ್ಯ ಇಂಜಿನಿಯರ್ ಕೆ.ಜಿ.ಜಗದೀಶ್ ಕರೆ ನೀಡಿದರು.
ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘ ಮತ್ತು ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಮನರಂಜನಾ ಮತ್ತು ಸಾಂಸ್ಕøತಿಕ ಸಂಘದವತಿಯಿಂದ ನಗರದ ಕ್ರೀಡಾ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2026ನೇ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ 75 ವರ್ಷ ತುಂಬಿದ ಸಂಘದ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾನು ಸಹಾ 20 ವರ್ಷಗಳ ಕಾಲ ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಾಗಿ ಕೆಲಸವನ್ನು ಮಾಡಿದ್ದೇನೆ ಈ ಸಮಯದಲ್ಲಿ ನೌಕರರ ಹಲವಾರು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಇದ್ದಲ್ಲದೆ ನಮ್ಮ ನೌಕರರು ತೊಂದರೆಗೆ ಸಿಲಿಕಿದಾಗ ಅವರನ್ನು ಅದರಿಂದ ಪಾರು ಮಾಡಲಾಗಿದೆ. ನನ್ನ ಮೇಲೆ ನಂಬಿಕೆಯನ್ನು ಇಟ್ಟು ಮತವನ್ನು ನೀಡಿದ ಮತದಾರರಿಗೆ ಯಾವುದೇ ಆನ್ಯಾಯವನ್ನು ಮಾಡಿಲ್ಲ ಅವರಿಗೆ ನ್ಯಾಯವನ್ನು ನೀಡುವಂತ ಕಾರ್ಯವನ್ನು ಮಾಡಿದ್ದೇನೆ ಎಂದರು.
ಈಗ ಸ್ಥಾಪನೆಯಾಗಿರುವ ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘ ಉತ್ತಮವಾದ ಕಾರ್ಯವನ್ನು ಮಾಡಲಿ, ತನ್ನ ಸದಸ್ಯರ ಅನುಕೂಲಕ್ಕೆ ಬೇಕಾದ ಕಾರ್ಯವನ್ನು ಮಾಡಲಿ, ಆವರ ಆರೋಗ್ಯ, ಪಿಂಚಿಣಿ ಸಮಸ್ಯೆ, ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಅವರ ಮನಸ್ಸನ್ನು ಬೇರೆ ಕಡೆಯಲ್ಲಿ ತೊಡಗುವಂತ ಕಾರ್ಯವನ್ನು ಮಾಡಿ ಎಂದ ಅವರು, ನಿಮ್ಮ ಸಂಘ ಮುಂದಿನ ದಿನದಲ್ಲಿ ಕೈಗ್ಗೊಳ್ಳುವಂತ ವಿವಿಧ ರೀತಿಯ ಜನಪರವಾದ ಕಾರ್ಯಗಳಲ್ಲಿ ನಾನು ಸಹಾ ಕೈಜೊಡಿಸುವುದಾಗಿ ಜಗದೀಶ್ ಭರವಸೆಯನ್ನು ನೀಡಿದರು.
2026ನೇ ಹೊಸ ವರ್ಷದ ಕ್ಯಾಲೆಂಡರ್ನ್ನು ಬಿಡುಗಡೆಮಾಡಿದ ಜಿಲ್ಲಾ ವಿಕಲಚೇತನ ಕಲ್ಯಾಣಧಿಕಾರಿಗಳು ಹಾಗೂ ಹಿರಿಯ ನಾಗರೀಕ ಮತ್ತು ಸಬಲೀಕರಣ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಕೆ. ವೈಶಾಲಿ ಮಾತನಾಡಿ, ವರ್ಷದ ಆರಂಭದಲ್ಲಿ ಮಾಡಿದ ಕಾರ್ಯಗಳು ಮರ್ಷ ಪೂರ್ತಿಯಾಗಿ ನಡೆಯುತ್ತವೆ ಎಂಬ ಪ್ರತೀತಿ ಇದೆ ಈ ಹಿನ್ನಲೆಯಲ್ಲಿ ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘ ಮತ್ತು ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಮನರಂಜನಾ ಮತ್ತು ಸಾಂಸ್ಕøತಿಕ ಸಂಘದ ಹೊಸ ವರ್ಷದ ಪ್ರಾರಂಭ ದಿನದಂದು ಉತ್ತಮವಾದ ಕಾರ್ಯವನ್ನು ಮಾಡಿದೆ ಇದು ವರ್ಷ ಪೂರ್ತಿಯಾಗಿ ನಡೆಯಲಿ ಎಂದು ಹಾರೈಸಿ, ನೀವುಗಳು ತಮ್ಮ ಕೆಲಸದ ಸಮಯದಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ಅಲಂಕರಿಸಿ ಸರ್ಕಾರದ ಸೇವೆಯನ್ನು ಮಾಡಿದ್ದೀರಾ ಈ ನಿಮ್ಮ ಅನುಭವವನ್ನು ಇಂದಿನ ಯುವ ಜನಾಂಗಕ್ಕೆ ಧಾರೆಯನ್ನು ಎರೆಯಬೇಕಿದೆ.
ನಾನು ನಿವೃತ್ತರು ಎಂದು ಮಾನಸಿಕವಾಗಿ ಕುಗ್ಗ ಬೇಡಿ ಈ ರೀತಿಯಾದ ಸಂಘಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಸಮಾಜಮುಖಿಯಾಗಿ ಕೆಲಸವನ್ನು ಮಾಡಿ ಇದರಿಂದ ನಿಮಗೆ ಮಾನಸಿಕಮಾಗಿ ದೈಹಿಕವಾಗಿ ಸದೃಢರಾಗಲು ಸಾಧ್ಯವಿದೆ ಎಂದರು.
ನಮ್ಮ ಇಲಾಖೆವತಿಯಿಂದ ಹಿರಿಯ ನಾಗರೀಕರಿಗೆ ಉತ್ತಮವಾದ ಸೌಲಭ್ಯವನ್ನು ನೀಡಲಾಗುತ್ತಿದೆ ನೀವುಗಳು ಸದಸ್ಯರಾಗುವುದರ ಮೂಲಕ ಇದನ್ನು ಪಡೆಯಬಹುದಾಗಿದೆ. ಮ್ರತಿ ಮೂರು ತಿಂಗಳಿಗೊಮ್ಮೆ ನಿಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಿ ಇದಕ್ಕೆ ನಮ್ಮ ಇಲಾಖೆಯೂ ಸಹಾ ಸಹಾಯವನ್ನು ಮಾಡಲಿದೆ. ನಿಮ್ಮ ಮನೆಯಲ್ಲಿ ಅಸ್ತೊಗೆ ಸಂಬಂಧಪಟ್ಟಂತೆ ಎನಾದರೂ ದೂರುಗಳಿದ್ದರೆ ಅದನ್ನು ಎಸಿ. ಅವರ ಅಧ್ಯಕ್ಷತೆಯನ್ನು ನ್ಯಾಯವನ್ನು ಪಡೆಯಬಹುದಾಗಿದೆ ಇಲ್ಲಿ ಸರಿ ಹೋಗದಿದ್ದರೆ ಡಿಸಿಯವರಿಂದಲೂ ಸಹಾ ನ್ಯಾಯವನ್ನು ಪಡೆಯಬಹುದಾಗಿದೆ ಈ ರೀತಿಯ ಪ್ರಕರಣಗಳನ್ನು 90 ದಿನಗಳಲ್ಲಿ ಇತ್ಯರ್ಥ ಮಾಡಲಾಗುತ್ತದೆ ಬೇರೆ ಪ್ರಕರಣಗಳಂತೆ ಸಮಯವನ್ನು ತೆಗೆದುಕೊಳ್ಳುವುದಿಲ್ಲ ಎಂದು ಶ್ರೀಮತಿ ಕೆ. ವೈಶಾಲಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘ ಮತ್ತು ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಮನರಂಜನಾ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷರಾದ ಬಿ.ಕೆ.ಹನುಮಂತಪ್ಪ ಮಾತನಾಡಿ, ನಮ್ಮ ಸಂಘ ಪ್ರಾರಂಭವಾಗಿ ಕೇವಲ 6 ತಿಂಗಳಾಗಿದೆ ಈ ಸಮಯದಲ್ಲಿ ನಮ್ಮ ಸದಸ್ಯರಿಗೆ ಬೇಕಾದ ಹಲವು ಕಾರ್ಯವನ್ನು ಮಾಡಲಾಗಿದೆ, ಉಚಿತ ಆರೋಗ್ಯ ಶಿಬಿರವನ್ನು ಮಾಡುವುದರ ಮೂಲಕ ಸದಸ್ಯರ ಆರೋಗ್ಯವನ್ನು ಕಾಪಾಡಲಾಗಿದೆ. ಇದ್ದಲ್ಲದೆ ಗೋನೂರಿನ ನಿರಾಶ್ರಿತರ ಕೇಂದ್ರಕ್ಕೆ ನಮ್ಮ ಸಂಘದವತಿಯಿಂದ ಔಷಧಿ ಟ್ರಾಲಿಯನ್ನು ಕೊಡುಗೆಯಾಗಿ ನೀಡಲಾಯಿತು. ಇದ್ದಲ್ಲದೆ ಇಂದು ನಮ್ಮ ಸಂಘದಲ್ಲಿ 75 ವರ್ಷ ಪೂರ್ಣ ಮಾಡಿದ ಸದಸ್ಯರಿಗೆ ಸನ್ಮಾನ ಮಾಡಲಾಗುತ್ತದೆ ಮುಂದಿನ ದಿನದಲಿ ನಮ್ಮ ಸಂಘದವತಿಯಿಂದ ಉತ್ತಮವಾದ ಕಾರ್ಯವನ್ನು ಕೈಗ್ಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಿ.ಬಿ.ಮಹಾಂತೇಶ್, ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷರಾದ ನಾಗರಾಜ್ ಸಂಗಂ, ಕಾರ್ಯಾ ದ್ಯಕ್ಷರಾದ ಹೆಚ್.ಗೋವಿಂದಯ್ಯ, ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘ ಮತ್ತು ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಮನರಂಜನಾ ಮತ್ತು ಸಾಂಸ್ಕøತಿಕ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್. ಪರಮೇಶ್ವರಪ್ಪ, ಖಂಚಾಚಿ ಎಸ್.ಹಾಲಾನಾಯ್ಕ ಪ್ರೇಮಕ್ಕ ಸೇರಿದಂತೆ ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಮನರಂಜನಾ ಕೇಂದ್ರದ ಪದಾಧಿಕಾರಿಗಳು ನಿರ್ದೆಶಕರು ಸಲಹಾ ಸಮಿತಿ ಸದಸ್ಯರು ಭಾಗವಹಿ ಸಿದ್ದರು.
ಮಂಜುನಾಥ್ ಪ್ರಾರ್ಥಿಸಿದರೆ, ನೀಲಕಂಠಚಾರ್ ಸ್ವಾಗತಿಸಿದರು, ನಾಗೇಂದ್ರಯ್ಯ ಕಾರ್ಯಕ್ರಮ ನಿರೂಪಿಸಿದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.