LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂಯುಕ್ತ ಸ್ವಕೊಳ ಸಾಯಿ ಸಂಘ ಜಿಹ್ನೀಶ್ವರ ಜಯಂತಿ ಆಚರಣೆ

ಬೆಂಗಳೂರು: ಸಂಯುಕ್ತ ಸ್ವಕುಳಸಾಳಿ ಸಂಘ ಆರ್ಥಿಕವಾಗಿ ರಾಜಕೀಯವಾಗಿ ಹಿಂದುಳಿದಿದ್ದು, ಪ್ರಸ್ತುತ ಹಂತ ಹಂತವಾಗಿ ಮುಂದೆ ಬರುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಚಂದ್ರಕಾಂತ ಭಂಡಾರೆ ಅವರು ತಿಳಿಸಿದರು.

ಬೆಂಗಳೂರಿನ ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದಲ್ಲಿ ಭಗವಾನ್ ಶ್ರೀ ಜಿಹ್ನೇಶ್ವರ ಜಯಂತಿ ಆಚರಣೆಯನ್ನು ಸಂಯುಕ್ತ ವತಿಯಿಂದ ವಿಶೇಷವಾಗಿ ಆಚರಿಸಿಕೊಳ್ಳಲಾಯಿತು, ಪ್ರತಿ ವರ್ಷವೂ ಜಿಹ್ನೇಶ್ವರ ಜಯಂತಿಯನ್ನು ರಾಜ್ಯ, ದೇಶದಲ್ಲಿ ಅದ್ದೂರಿಯಾಗಿ ಅವರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ, ಅದೇ ರೀತಿ ಕರ್ನಾಟಕದಲ್ಲಿ ಸಮುದಾಯವು ಸಹ 5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಪ್ರತಿ ವರ್ಷವೂ ಸಹ ವಿಭಿನ್ನ ಹಾಗೂ ವಿಶೇಷವಾಗಿ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ರಾಜಕೀಯವಾಗಿ ಹಿಂದೆ ಉಳಿದಿದ್ದು, ಮುಖ್ಯವಾಹಿನಿಗೆ ಬರಲು ಯಾರ ಪ್ರೋತ್ಸಾಹ ಸಿಗುತ್ತಿಲ್ಲ

ಬೆಳಿಗ್ಗೆಯಿಂದ ಸಂಜೆ ತನಕ ಹತ್ತು ಹಲವು ಕಾರ್ಯಕ್ರಮಗಳು ನಡೆದವು, ಸಾಮೂಹಿಕ ಪೂಜೆ,ಜಿಹ್ನೇಶ್ವರ ತೊಟ್ಟಿಲೋತ್ವವ, ಪೂಜಾರತಿ ನಡೆಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆದವು,

ಸಂಯುಕ್ತ ಸ್ವಕುಳಸಾಳಿ ಸಂಘ ಪ್ರತಿ ವರ್ಷ ವಿಭಿನ್ನವಾಗಿ ಜಿಹ್ನೇಶ್ವರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ,ಈ ಬಾರಿ 40 ಜನ ವಿದ್ಯಾರ್ಥಿಗಳಿಗೆ ಎಸ್ ಎಸ್‌ಎಲ್‌ಸಿ ಪಿಯುಸಿ ಹಾಗು ಡಿಗ್ರಿ ಮಾಡಿರುವ ಹಾಗೂ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಂದ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸಂಘದಿಂದ ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಇನ್ನು ಸಮಾಜದಲ್ಲಿ ಸಾಮಾಜಿಕ, ಶೈಕ್ಷಣಿಕ,ಆರ್ಥಿಕ, ವೈದ್ಯಕೀಯ,ಪರಿಸರ,ಕಲೆ, ಧಾರ್ಮಿಕ, ಉದ್ಯಮ,ರಾಜಕೀಯ,ಕ್ರೀಡಾ,ಸಾಂಸ್ಕೃತಿಕ,ಪ್ರವಾಸ ಹೀಗೆ ಹತ್ತು ಹಲವು ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆ ಮಾಡಿದ 9 ಜನ ಸಂಘದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು, ಅದರಲ್ಲಿ ಈಶ್ವರರಾವ್ ಕಾಪ್ಸೆ , ಡಾ. ನರೇಂದ್ರ ರಾವ್ ಪಾಂಡ್ರೆ, ಡಾ. ಮೀನಾ ಸರೋದೆ, ಶಿವಶಂಕರ್ ಹಾಲುಬಾಯಿ, ನಾಗರಾಜ್ ಸುರಸ್ ಗಾರ್, ಸುರೇಶ್ ಬಾಬು ಚೆಲ್ಲಾಳ, ಶ್ರೀನಿವಾಸ ಸುಧಾಕರ್ ಪಾಂಡ್ರೆ ವರ್ಧನ್ ಬಾಲು, ಶ್ರೀಮತಿ ಸವಿತಾ ಮತ್ತು ಶ್ರೀನಿವಾಸ ಪಾಣಿಭಾತೆ.

ಇನ್ನು ಇದೇ ವೇಳೆ ಭಗವಾನ್ ಶ್ರೀ ಜಿಹ್ನೇಶ್ವರ ಭಾವಚಿತ್ರವನ್ನು ಇಟ್ಟು ವಿಶೇಷವಾಗಿ ಪೂಜಾ ಕೈಂಕರ್ಯಗಳು ಸಾಂಗವಾಗಿ ನಡೆದವು, ಕಾರ್ಯಕ್ರಮದಲ್ಲಿ ಕೇಂದ್ರ ಮಂತ್ರಿಗಳಾದ ವಿ ಸೋಮಣ್ಣ, ಮಾಜಿ ಶಾಸಕರಾದ ಎಂ ಡಿ ಲಕ್ಷ್ಮೀನಾರಾಯಣ, ಸಹ ಪೋಷಕರಾದ ಡಾ. ಪುಷ್ಪಾ ಕ್ಷೀರಸಾಗರ್,  ಗುರುನಾಥ ಕಾಂಬಳೆ,ದಾನಪ್ಪ ಪಾನಿಭಾತೆ, ದಾನಪ್ಪ ಪಾನಿಭಾತೆ, ಡಾ.ಗಿರಿಧರ ಗಾಯಕವಾಡ,ಪ್ರದೀಪ್ ರೋಖಡೆ,ವೆಂಕಟೇಶ್ ಚಿಲ್ಲಾಳ,ಮಾಧವರಾವ್ ಏಕಾಬೋಟೆ,ಬಸವರಾಜ ಪಾಡಮುಖಿ,ಸುರೇಶ್ ಸರೋದೆ,ರಾಮಕೃಷ್ಣ ಪಾಡಮುಖಿ,  ಜಿಹ್ವಾಜಿ  ಭಂಡಾರೆ, ಜಲಜಾ ಸವ್ವಸೇರೆ, ಜ್ಯೋತಿ ದರೋದೆ, ಗುರುಪ್ರಸಾದ್ ಗಾಯಕವಾಡ, ರಕ್ಷಿತ್ ಜುಜಾರೆ ಸೇರಿದಂತೆ ಇತರರು ಭಾಗವಹಿಸಿದರು. ಕೊನೆಯದಾಗಿ  ಸಂಘದ 18ನೇ ವಾರ್ಷಿಕ  ಮಹಾಸಭೆ ನಡೆಯಿತು, ಅದರಲ್ಲಿ ಮುಂದಿನ ವರ್ಷ ಮಾಡಬೇಕಾದ ಕಾರ್ಯಕಲಾಪಗಳು ಬಗ್ಗೆ ಚರ್ಚೆಗಳು ನಡೆದವು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶ್ವ ಕರ್ಮ ಸಮಾಜದ ಮಹಿಳಾ ವಿಭಾಗದಿಂದ ಮಹಿಳಾ ದಿನಾಚಾರಣೆಕಿಸ್ನಾ ವಜ್ರ ಮತ್ತು ಚಿನ್ನದ ಆಭರಣಗಳ ಸಂಸ್ಥೆಯಿಂದ ಮಹಿಳಾ ದಿನಾಚರಣೆಸೈಬರ್ ಥ್ರಿಲ್ಲರ್ ಅಂಶಗಳ ಒಳಗೊಂಡ ಅಚ್ಯುತ ಅವತಾರಂಮೋದಿ ‘ವಂದೇ ಮಾತರಂ’ಗೆ ನೀಡಿದ ಗೌರವ ವಿರೋಧಿಸಲು ಕಾಂಗ್ರೆಸ್ ಅಧಃಪತನದ ಹಾದಿಸ್ವಚ್ಛ ಸರ್ವೇಕ್ಷಣ 2025-26 ರ ವಿಶೇಷ ಸ್ವಚ್ಛತಾ ಅಭಿಯಾನವಾರ್ಡ್‌ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟಣೆ – ದೂರು/ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಣೆಚಲನಚಿತ್ರ ಪೋಷಕ ಕಲಾವಿದರ ಸಂಘದ ಚುನಾವಣೆಗೆ ನ್ಯಾಯಾಲಯದ ತಡೆಭಾರತಿ ಟೀಚರ್ 7ನೇ ತರಗತಿಗೆ @ 50ರ ಸಂಭ್ರಮಕಾಂಗ್ರೆಸ್ ಪಕ್ಷಕ್ಕೆ ವಿಚ್ಛೇದನ ಕೊಟ್ಟಿದ್ದಕ್ಕೆ ಕಾರಣ ಕೊಟ್ಟ ಮಾಜಿ ಪ್ರಧಾನಿಗಳುಅಂಕಿ-ಅಂಶಗಳ ಬಜೆಟ್‌, ದಿಕ್ಕು ದಿಸೆಯಿಲ್ಲದ ಆಯವ್ಯಯ’: ಅರವಿಂದ ಬೆಲ್ಲದ