LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
💛

ಸ್ವತಂತ್ರ ಪತ್ರಿಕೋದ್ಯಮ ಬೆಂಬಲಿಸಲು ಲೇಖನದ ಕೆಳಭಾಗದಲ್ಲಿ UPI ಮೂಲಕ ಕಾಣಿಕೆ ನೀಡಿ!

State News

SHOCKING: ನಂದಿಹಿಲ್ಸ್ ಮಾನ್ಸೂನ್ ಮ್ಯಾರಥಾನ್‌ನಲ್ಲಿ ಓಡುತ್ತಿದ್ದಾಗ ಏಕಾಏಕಿ ಕುಸಿದುಬಿದ್ದು ಕ್ರೀಡಾಪಟು ಸಾವು

ಚಿಕ್ಕಬಳ್ಳಾಪುರ: ವಿಶ್ವಪ್ರಸಿದ್ಧ ನಂದಿಬೆಟ್ಟದಲ್ಲಿ ಆಯೋಜಿಸಲಾಗಿದ್ದ 'ನಂದಿಹಿಲ್ಸ್ ಮನ್ಸೂನ್ ಮ್ಯಾರಥಾನ್' ಓಟದ ಸ್ಪರ್ಧೆಯಲ್ಲಿ ರವಿವಾರ ದುರಂತವೊಂದು ಸಂಭವಿಸಿದೆ. 21 ಕಿಲೋಮೀಟರ್ ಅರ್ಧ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ 31 ವರ್ಷದ ಯುವಕನೊಬ್ಬ ಓಡುತ್ತಿದ್ದಾಗಲೇ ದಿಢೀರ್ ಕುಸಿದುಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಮೃತರನ್ನು ಪಂಜಾಬ್ ಮೂಲದ ಅಮನ್‌ದೀಪ್ ಸಿಂಗ್ ಜಗಡೆ ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು.

ಓಟದ ಮಧ್ಯದಲ್ಲೇ ಎದೆನೋವು, ಆಸ್ಪತ್ರೆಯಲ್ಲಿ ಕೊನೆಯುಸಿರು: ಸುಮಾರು 21 ಕಿ.ಮೀ ಓಟದ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದ ಅಮನ್‌ದೀಪ್, ನಂದಿಬೆಟ್ಟದ ಏರುದಾರಿಯಲ್ಲಿ ಅರ್ಧದಷ್ಟು ದೂರವನ್ನು ಯಶಸ್ವಿಯಾಗಿ ಕ್ರಮಿಸಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದುಬಿದ್ದ ಅವರನ್ನು ತಕ್ಷಣವೇ ಮುದ್ದೇನಹಳ್ಳಿಯ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಕೊನೆಯ ಪೋಸ್ಟ್: ಮ್ಯಾರಥಾನ್ ಆರಂಭವಾಗುವ ಮುನ್ನ ಅಮನ್‌ದೀಪ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ, "ಇಂದಿನ 21 ಕಿ.ಮೀ ಓಟದಲ್ಲಿ ಭಗವಂತ ನನ್ನ ಜೊತೆಗಿದ್ದಾನೆ" ಎಂದು ಭಾವನಾತ್ಮಕ ಸಾಲುಗಳನ್ನು ಹಂಚಿಕೊಂಡಿದ್ದರು. ಆದರೆ, ಅದೇ ಅವರ ಬದುಕಿನ ಕೊನೆಯ ಪೋಸ್ಟ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

4,500ಕ್ಕೂ ಹೆಚ್ಚು ಓಟಗಾರರು ಉತ್ಸಾಹದಿಂದ ಭಾಗವಹಿಸಿದ್ದ ಈ ಮ್ಯಾರಥಾನ್‌ನಲ್ಲಿ ಆರೋಗ್ಯವಾಗಿದ್ದ ಯುವಕನೊಬ್ಬ ಹೀಗೆ ದಿಢೀರ್ ಮೃತಪಟ್ಟಿರುವುದು ಸಹ-ಸ್ಪರ್ಧಿಗಳಲ್ಲಿ ಹಾಗೂ ಆಯೋಜಕರಲ್ಲಿ ತೀವ್ರ ದಿಗ್ಭ್ರಮೆ ಮತ್ತು ಶೋಕವನ್ನುಂಟುಮಾಡಿದೆ.

ಮಾಧ್ಯಮ ಬೆಂಬಲಿಸಿ / Support Local Journalism

ನಿಮ್ಮ ಬೆಂಬಲ ಸ್ವತಂತ್ರ ಪತ್ರಿಕೋದ್ಯಮವನ್ನು ಜೀವಂತವಾಗಿರಿಸುತ್ತದೆ. Pay directly via PhonePe, GPay or Paytm.

0% Gateway Commission — Money goes 100% directly into publisher bank account.
Scan with Any UPI App
Scan QR Code to Support News via UPI
Pre-filled: ₹10.00
UPI ID: khushihost1@ybl
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಲ್ಲಿ ಪ್ರಸಿದ್ಧ ಹೋಟೆಲ್ ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ: ಸಿಕ್ತಿದ್ದು ಏನೆಲ್ಲ ಗೊತ್ತಾ? ಇಲ್ಲಿದೆ ಡೀಟೆಲ್ಸ್BREAKING: ED ನಿರ್ದೇಶಕ ರಾಹುಲ್ ನವೀನ್ ಅಧಿಕಾರಾವಧಿ ಮತ್ತೊಂದು ವರ್ಷ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಭಾರತೀಯ ಭೌತವಿಜ್ಞಾನಿ ದೀಪಕ್ ಧಾರ್ ಅವರಿಗೆ ಪ್ರತಿಷ್ಠಿತ 'ಡಿರಾಕ್ ಮೆಡಲ್ 2026' ಪ್ರಶಸ್ತಿSHOCKING: ನಂದಿಹಿಲ್ಸ್ ಮಾನ್ಸೂನ್ ಮ್ಯಾರಥಾನ್‌ನಲ್ಲಿ ಓಡುತ್ತಿದ್ದಾಗ ಏಕಾಏಕಿ ಕುಸಿದುಬಿದ್ದು ಕ್ರೀಡಾಪಟು ಸಾವುಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಸೇತುವೆಯಿಂದ ಕೆಳಗೆ ಬಿದ್ದು 40 ಪ್ರಯಾಣಿಕರಿಗೆ ಗಾಯITR Refundಗೆ ಕಾಯುತ್ತಿದ್ದೀರಾ? ಹಣ ಬರಲು ಎಷ್ಟು ದಿನ ಬೇಕು ಗೊತ್ತೇ?BREAKING: ಆಂಧ್ರದಲ್ಲಿ ಭೀಕರ ಅಪಘಾತ! ಸೇತುವೆಯಿಂದ ಹೈದರಾಬಾದ್- ಬೆಂಗಳೂರು Volvo ಬಸ್ ಬಿದ್ದು 40 ಮಂದಿಗೆ ಗಾಯ | Accident‘Cheer 4 Bharat’! CWG ಪದಕ ವಿಜೇತರನ್ನು ಭೇಟಿಯಾದ ಪ್ರಧಾನಿ ಮೋದಿ | Watch videoನಿದ್ರೆಗೂ ಬೆಳಕಿಗೂ ಸಂಬಂಧ! ಲೈಟ್ ಆನ್ ಮಾಡಿ ಮಲಗುವುದರಿಂದ ಏನಾಗಬಹುದು? ತಜ್ಞರ ಉತ್ತರ ಇಲ್ಲಿದೆ!BREAKING:ಇಸ್ಲಾಮಾಬಾದ್‌ನಲ್ಲಿ ಲಷ್ಕರ್ ಕಮಾಂಡರ್ ಸಯೀದ್ ಅಬ್ದುಲ್ ಅಜೀಜ್ ನಿಗೂಢ ಸಾವು!