LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸ್ವದೇಶಿ ಉದ್ಯಮ ಪ್ರಕಟಿತ ಶ್ರೀ ಗುರು ಸಾರ್ವಭೌಮ ವಿಶೇಷ ಸಂಚಿಕೆ ಲೋಕಾರ್ಪಣೆ 

ಬೆಂಗಳೂರು: ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಅಂಗವಾಗಿ ಬಿ.ಕೆ ಪ್ರಸನ್ನ ಸಂಪಾದಕತ್ವದಲ್ಲಿ ಸ್ವದೇಶಿ ಉದ್ಯಮ ಪ್ರಕಟಿಸಿರುವ ಶ್ರೀ ಗುರು ಸಾರ್ವಭೌಮ ವಿಶೇಷ ಸಂಚಿಕೆಯನ್ನು ಖ್ಯಾತ ಹರಿದಾಸ ವಿದ್ವಾಂಸ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಲೋಕಾರ್ಪಣೆಗೊಳಿಸಿದರು.

ನಂತರ  ಮಾತನಾಡುತ್ತಾ ಇಂದು ಎನಗೆ ಗೋವಿಂದ ಹಾಡಿನ ಮೂಲಕ ಹರಿದಾಸ ಪ್ರಪಂಚಕ್ಕೆ ಸ್ಪೂರ್ತಿಯಾದವರು ರಾಘವೇಂದ್ರರು ಜಾತಿ ಮತ ದೇಶ ಭಾಷೆ ಪಂಥಗಳ ಭೇದಭಾವವಿಲ್ಲದೆ ಎಲ್ಲ ಶ್ರದ್ಧಾಾವಂತರಿಗೂ ಸಂತೃಪ್ತಿ ಮನಃಶಾಂತಿ ವರ ನೀಡಿ ಅನುಗ್ರಹಿಸುತ್ತಿದ್ದಾರೆ ಮಂತ್ರಾಲಯದ ಮಹಾಮಹಿಮರು. ನಾಸ್ತಿಕ ಯುಗದ ನಿಸತ್ವ ಚೇತನಗಳಲ್ಲಿ ದೈವಭಕ್ತಿ ಆತ್ಮವಿಶ್ವಾಸ ಹಾಗೂ ವಿಚಾರ ಶ್ರದ್ಧೆ ಗಳನ್ನು ಉದ್ದೀಪಿಸಿದ ಗುರುಗಳು ವಿಶ್ವ ವಂದ್ಯರು ಎಂದು ಅಭಿಪ್ರಾಯಪಟ್ಟರು.

ಪರಮಪೂಜ್ಯ ಡಾ.ಶ್ರೀ ಸುಬುಧೇoದ್ರ ತೀರ್ಥ ಶ್ರೀ ಪಾದರ ಅನುಗ್ರಹದೊಡನೆ ನಡೆದ ವಿಶೇಷ ಸಂಚಿಕೆ ಬಿಡುಗಡೆ ಸಂದರ್ಭದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕ ಆರ್ ಕೆ ವಾದೀoದ್ರ ಆಚಾರ್ಯ, ನಂದ ಕಿಶೋರ್ ಆಚಾರ್, ಗುರು ವಿಜಯ ಪ್ರತಿಷ್ಠಾನದ ಆಚಾರ್ಯ ನಾಗರಾಜು ಹಾವೇರಿ, ಪರಿಮಳ ಪತ್ರಿಕೆಯ ಸಂಪಾದಕ ಜಿಕೆ ಆಚಾರ್ಯ, ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶ್ವ ಕರ್ಮ ಸಮಾಜದ ಮಹಿಳಾ ವಿಭಾಗದಿಂದ ಮಹಿಳಾ ದಿನಾಚಾರಣೆಕಿಸ್ನಾ ವಜ್ರ ಮತ್ತು ಚಿನ್ನದ ಆಭರಣಗಳ ಸಂಸ್ಥೆಯಿಂದ ಮಹಿಳಾ ದಿನಾಚರಣೆಸೈಬರ್ ಥ್ರಿಲ್ಲರ್ ಅಂಶಗಳ ಒಳಗೊಂಡ ಅಚ್ಯುತ ಅವತಾರಂಮೋದಿ ‘ವಂದೇ ಮಾತರಂ’ಗೆ ನೀಡಿದ ಗೌರವ ವಿರೋಧಿಸಲು ಕಾಂಗ್ರೆಸ್ ಅಧಃಪತನದ ಹಾದಿಸ್ವಚ್ಛ ಸರ್ವೇಕ್ಷಣ 2025-26 ರ ವಿಶೇಷ ಸ್ವಚ್ಛತಾ ಅಭಿಯಾನವಾರ್ಡ್‌ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟಣೆ – ದೂರು/ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಣೆಚಲನಚಿತ್ರ ಪೋಷಕ ಕಲಾವಿದರ ಸಂಘದ ಚುನಾವಣೆಗೆ ನ್ಯಾಯಾಲಯದ ತಡೆಭಾರತಿ ಟೀಚರ್ 7ನೇ ತರಗತಿಗೆ @ 50ರ ಸಂಭ್ರಮಕಾಂಗ್ರೆಸ್ ಪಕ್ಷಕ್ಕೆ ವಿಚ್ಛೇದನ ಕೊಟ್ಟಿದ್ದಕ್ಕೆ ಕಾರಣ ಕೊಟ್ಟ ಮಾಜಿ ಪ್ರಧಾನಿಗಳುಅಂಕಿ-ಅಂಶಗಳ ಬಜೆಟ್‌, ದಿಕ್ಕು ದಿಸೆಯಿಲ್ಲದ ಆಯವ್ಯಯ’: ಅರವಿಂದ ಬೆಲ್ಲದ