LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ಪ್ರಕಟಸಿದ ಸಚಿವ ಮಧು ಬಂಗಾರಪ್ಪ

ಬೆಂಗಳೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳ ದಿನಾಂಕ ಪ್ರಕಟವಾಗಿದ್ದು, ಈ ಕೆಳಗಿನ ದಿನಾಂಕದಂತೆ ಪರೀಕ್ಷೆಗಳು ನಡೆಯಲಿವೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರಾದ ಎಸ್‌ ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದ್ದು, ಮಾರ್ಚ್ 1 ರಿಂದ 22ರ ವರೆಗೆ ಪಿಯುಸಿ ಹಾಗೂ ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ಎಸ್‌ಎಸ್‌ಎಲ್ಸಿ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದರು.

ಅಲ್ಲದೆ, ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ 6,98,624 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಪಿಯುಸಿಗೆ 1124 ಪರೀಕ್ಷಾ ಕೇಂದ್ರಗಳನ್ನು ನಿಗದಿ ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 8,96,271 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದು, ಒಟ್ಟು 2747 ಪರೀಕ್ಷಾ ಕೇಂದ್ರಗಳು ಇರಲಿದೆ.

ಎಲ್ಲ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು ಮೂರರಲ್ಲಿ ಯಾವುದಾದರು ಪರೀಕ್ಷೆಗೆ ಹಾಜರಾಗಬೇಕು. ಮೂರು ಪರೀಕ್ಷೆಯಲ್ಲಿ ಮೊದಲು ಅಥವಾ ಎರಡು ಯಾವ ಪರೀಕ್ಷೆಯನ್ನು ಬೇಕಿದ್ರೆ ಆಯ್ಕೆ ಮಾಡಬಹುದು. ಮೂರು ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಟಾಪ್ ಮಾರ್ಕ್ಸ್ ಪರಿಗಣನೆ ಮಾಡಲಾಗುತ್ತದೆ. ಹೆಚ್ಚು ಅಂಕ ಪಡೆದಿರುವ ಮಾರ್ಕ್ಸ್ ಮಾತ್ರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ‌ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಅಧ್ಯಕ್ಷರಾದ ಮಂಜುಳಾ, ಪದವಿ ಪೂರ್ವ ಶಿಕ್ಷಣ‌ ಇಲಾಖೆ ನಿರ್ದೇಶಕರಾದ ಸಿಂಧೂ ಬಿ ರೂಪೇಶ್ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸಾಲದ ರಾಮಯ್ಯ ಅಲ್ಲ, ಅನ್ನದ ರಾಮಯ್ಯ: ಬಿಜೆಪಿಗೆ ಸಿಎಂ ತರುಗೇಟುKSRTC ಗೆ ಪ್ರತಿಷ್ಠಿತ ' world HRd ಕಾಂಗ್ರೆಸ್ ಪ್ರಶಸ್ತಿ-2026' ಗರಿಹಿಂದಿ ಭಾಷೆ ವಿಚಾರದಲ್ಲಿ ಬಿಜೆಪಿಯವರಿಂದ ಕಮೆಂಟಿಗೆ ವಿರೋಧಸುಧರ್ಮ ಸಾಂಸ್ಕೃತಿಕ ಸಂಘ ದಿಂದ ಮಹಿಳಾ ದಿನಾಚರಣೆಜೈನರಲ್ಲಿ ಶಿಕ್ಷಣದ ಕೊರತೆ ಹೆಚ್ಚಾಗಿದೆ : ಹಂಪಾ ನಾಗರಾಜಯ್ಯ ಬೇಸರವಿದ್ಯಾರ್ಥಿಗಳು SPRINTFEST 2026 ನಲ್ಲಿ ₹40 ಲಕ್ಷ ಸಂಗ್ರಹಿಸುವ ಗುರಿಸಂಧ್ಯಾ ಜನ ಸಂಸ್ಕೃತಿ ಟ್ರಸ್ಟ್ ನಿಂದ 8ನೇ ವರ್ಷದ ವಾರ್ಷಿಕೋತ್ಸವ ಮಹಿಳಾ ದಿನಾಚರಣೆ ಪ್ರಯುಕ್ತ ಮಾಜಿ ಪ್ರಧಾನಿ ಸ್ಮರಣೆಯಲ್ಲಿ ಇಂದಿರಾ ಕ್ರೀಡೋತ್ಸವ-2026ಆಸ್ತಿ ತೆರಿಗೆ ಬಾಕಿ: ಸುಸ್ತಿದಾರರ ಆಸ್ತಿಗಳನ್ನು ನಗರ ಪಾಲಿಕೆಯ ಹೆಸರಿಗೆ ಬದಲಾಯಿಸಿಕೊಳ್ಳಲು ಕ್ರಮಸ್ವಚ್ಛ ಸರ್ವೇಕ್ಷಣ 2025-26 ರ ವಿಶೇಷ: ಉದ್ಯಾನವನ ಆಟದ ಮೈದಾನ ಸ್ವಚ್ಛ