ಉಡುಪಿ: Kollur Mookambika Templeಗೆ ಕೇಂದ್ರ ಹಣಕಾಸು ಸಚಿವೆ Nirmala Sitharaman ಭಕ್ತಿಭಾವದಿಂದ ಭೇಟಿ ನೀಡಿ ಮೂಕಾಂಬಿಕೆ ದೇವಿಯ ದರ್ಶನ ಪಡೆದರು. ದೇವಾಲಯದ ಪವಿತ್ರ ವಾತಾವರಣವನ್ನು ಸವಿದ ಅವರು ಸನ್ನಿಧಿಯನ್ನು ವೀಕ್ಷಿಸಿ, ಗರುಡಗಂಭದ ಎದುರು ಅರ್ಚಕರೊಂದಿಗೆ ನೆನಪಿನ ಕ್ಷಣಗಳನ್ನು ಕ್ಯಾಮೆರಾದಲ್ಲಿ ಬಂಧಿಸಿದರು. ಬಳಿಕ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಗೌರವ ಸ್ವೀಕರಿಸಿದ ಸಚಿವೆ, ತಮ್ಮ ಉಡುಪಿ ಕಾರ್ಯಕ್ರಮದತ್ತ ಪ್ರಯಾಣ ಬೆಳೆಸಿದರು.