Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

18 ನಗರಗಳಿಗೆ ವಾಟರ್ ಮೆಟ್ರೋ ಸಾರಿಗೆ – ಕೇಂದ್ರ ಸರ್ಕಾರದ ಹೊಸ ಹೆಜ್ಜೆ

ನವದೆಹಲಿ: ಕೊಚ್ಚಿಯಲ್ಲಿ ವಾಟರ್‌ ಮೆಟ್ರೋ (Kochi Water Metro) ಯಶಸ್ಸಿನ ನಂತರ ದೇಶದ 18 ಮಹಾನಗರಗಳಲ್ಲಿ ಈ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ (Central Government) ಯೋಜನೆ ರೂಪಿಸಿದೆ. ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ (Union Ministry of Ports, Shipping and Waterways) ಈ ಸಂಬಂಧ ವಿಶೇಷ ಕಾರ್ಯಯೋಜನೆ ಕೈಗೊಂಡಿದ್ದು, ಕರಡು ರಾಷ್ಟ್ರೀಯ ಜಲ ಮೆಟ್ರೋ ನೀತಿಯನ್ನು ಕೂಡ ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಮೊದಲ ಹಂತದಲ್ಲಿ ಉತ್ತರ ಪ್ರದೇಶದ ವಾರಣಾಸಿ (Varanasi), ಅಯೋಧ್ಯೆ ಮತ್ತು ಪ್ರಯಾಗ್‌ರಾಜ್ ಜೊತೆಗೆ ಶ್ರೀನಗರ ಹಾಗೂ ಪಾಟ್ನಾವನ್ನು ವಾಟರ್ ಮೆಟ್ರೋ ಯೋಜನೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ನಂತರದ ಹಂತದಲ್ಲಿ ಅಸ್ಸಾಂನ ತೇಜ್‌ಪುರ ಮತ್ತು ದಿಬ್ರುಗಢ ನಗರಗಳಲ್ಲಿ ಈ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತರಲು ಯೋಜನೆ ರೂಪಿಸಲಾಗಿದೆ.

ವಾಟರ್ ಮೆಟ್ರೋವನ್ನು ಅಗ್ಗದ, ಶುದ್ಧ ಮತ್ತು ಮಾಲಿನ್ಯರಹಿತ ಸಾರಿಗೆ ವಿಧಾನವಾಗಿ ಪರಿಗಣಿಸಲಾಗಿದ್ದು, ನಗರಗಳ ರಸ್ತೆ ಸಂಚಾರದ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಲಿದೆ. ಜೊತೆಗೆ ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಗೆ ಹೊಸ ಉತ್ತೇಜನ ನೀಡುವ ನಿರೀಕ್ಷೆಯಿದೆ.

ಕೊಚ್ಚಿಯಲ್ಲಿ 2023ರ ಏಪ್ರಿಲ್ 25ರಂದು ಪ್ರಾರಂಭವಾದ ವಾಟರ್ ಮೆಟ್ರೋ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಕೊಚ್ಚಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಸುರಕ್ಷಿತ ಹಾಗೂ ಕಡಿಮೆ ದರದ ಪ್ರಯಾಣ ವ್ಯವಸ್ಥೆಯನ್ನು ಒದಗಿಸುತ್ತಿರುವ ಈ ಯೋಜನೆ ಪ್ರವಾಸಿಗರಿಗೂ ಆಕರ್ಷಣೆಯಾಗಿದೆ. ಮೊದಲ ಹಂತದಲ್ಲಿ 2 ಮಾರ್ಗಗಳಲ್ಲಿ 8 ವಿದ್ಯುತ್ ಹೈಬ್ರಿಡ್ ದೋಣಿಗಳೊಂದಿಗೆ ಸೇವೆ ಆರಂಭವಾಗಿತ್ತು.

ಹೈಕೋರ್ಟ್–ವೈಪಿನ್ ಮಾರ್ಗಕ್ಕೆ ₹20 ಮತ್ತು ವೈಟ್ಟಿಲ–ಕಾಕ್ಕನಾಡು ಮಾರ್ಗಕ್ಕೆ ₹30 ದರ ನಿಗದಿಪಡಿಸಲಾಗಿದೆ. ಕೊಚ್ಚಿಯಲ್ಲಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ದೇಶದ ಇತರ ಮಹಾನಗರಗಳಿಗೂ ಈ ಮಾದರಿಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗಮಂಗಲ: ತಾಲೂಕಿನ ರಾ ಹೆ 75ರ ವರಾಹಸಂದ್ರ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ : ಬಸ್ ಚಾಲಕ ದುರ್ಮರಣದೇವರಾಜ್ ಎಂಬ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ, ಪೊಲೀಸ್ ತನಿಖೆಗೆ ಗ್ರಾಮಸ್ಥರ ಒತ್ತಾಯಉತ್ತಮ ವ್ಯಕ್ತಿತ್ವ, ಚಾಣಾಕ್ಷ ಕಾರ್ಯವೈಖರಿ; ವರ್ಗಾವಣೆಯಾದ ಚಾ ವಿ ಸ ನಿ ನಿ ಯ AE ಮತ್ತು ಪ್ರಭಾರ AEE ಅವರಿಗೆ ಭಾವಪೂರ್ಣ ಬೀಳ್ಕೊಡುಗೆಹಾಸನ: ನಿರ್ಮಾಣ ಹಂತದ ಮನೆಯ ಕ್ಯೂರಿಂಗ್ ವೇಳೆ ವಿದ್ಯುತ್ ಅವಘಡ – ಕುಣಿಗಲ್ ಆರ್‌ಎಫ್‌ಒ ಜಗದೀಶ್ ಸಾವುಟಾಟಾ ಪವರ್ ಲೈಸೆನ್ಸ್‌ಗೆ ವಿರೋಧ: ಹೆಚ್.ಡಿ. ರೇವಣ್ಣರಿಂದ ಸಂಪೂರ್ಣ ಬೆಂಬಲವಿದ್ಯುತ್ ವಿತರಣಾ ಖಾಸಗೀಕರಣ ವಿರೋಧಿಸಿ ಸಂಸದರಿಗೆ ಮನವಿಇರಾನ್–ಅಮೆರಿಕ ಶಾಂತಿ ಮಾತುಕತೆ ನಡುವೆ ಖಮೇನಿ ಅಂತ್ಯಕ್ರಿಯೆ ದಿನಾಂಕ ಘೋಷಣೆಮಧ್ಯಪ್ರಾಚ್ಯದಲ್ಲಿ ಕಾಳಗದ ಕಾವು: US ನೌಕಾನೆಲೆ ಮೇಲೆ ಇರಾನ್ ದಾಳಿ, ಪ್ರತೀಕಾರ ಅನಿವಾರ್ಯ ಎಂದ ಟ್ರಂಪ್13 ಕಿ.ಮೀ ಕಾಮಗಾರಿ ಪೂರ್ಣಗೊಂಡ ತುಮಕೂರು–ಚಿತ್ರದುರ್ಗ ರೈಲು ಯೋಜನೆ; ಸಂಪೂರ್ಣ ಮಾರ್ಗ ಯಾವಾಗ ಸಿದ್ಧ?ಬಂಡೀಪುರದಲ್ಲಿ ಭದ್ರತಾ ಲೋಪ: ರೌಡಿ ಶೀಟರ್ ಗ್ಯಾಂಗ್‌ನ ಎಣ್ಣೆ ಪಾರ್ಟಿ ಬಹಿರಂಗ