Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News | Districts Dharwad

ಉಪ್ಪಿನಬೆಟಗೇರಿಯಲ್ಲಿ ಪತ್ರಿಕಾ ವಿತರಕರ- ಪತ್ರಿಕಾ ದಿನಾಚರಣೆ: ವಿತರಕರಿಗೆ ಬ್ಯಾಗ್ ವಿತರಣೆ- ಉಚಿತ ಕಣ್ಣಿನ ತಪಾಸಣಾ ಶಿಬಿರ

ಧಾರವಾಡ : ಮೂರುಸಾವಿರ ವಿರಕ್ತಮಠದ ಪೀಠಾಧಿಪತಿ ಶ್ರೀಕುಮಾರ ವಿರೂಪಾಕ್ಷೇಶ್ವರ ಸ್ವಾಮೀಜಿ ಅವರ 25ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಪ್ರಯುಕ್ತ ಉಪ್ಪಿನಬೆಟಗೇರಿಯ ಪತ್ರಿಕಾ ವಿತರಕರ ಬಳಗದಿಂದ ಪತ್ರಿಕಾ ದಿನಾಚರಣೆ, ಪತ್ರಿಕಾ ವಿತರಕರ ದಿನಾಚರಣೆ, ವಿತಕರಿಗೆ ಬ್ಯಾಗ್ ವಿತರಣೆ ಹಾಗೂ ಡಾ.ಎಂ.ಎಂ.ಜೋಶಿ ನೇತ್ರಾಲಯದಿಂದ ಉಚಿತ ಉಣ್ಣಿನ ತಪಾಸಣಾ ಶಿಬಿರವನ್ನು ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಶ್ರೀಮಠದಲ್ಲಿ ಸೆ.30 ರಂದು ಬೆಳಿಗ್ಗೆ 10:00 ಗಂಟೆಗೆ ಆಯೋಜಿಸಲಾಗಿದೆ.
ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಕರ್ನಾಟಕ ಬಯಲು ಸೀಮೆ ಪ್ರದೇಶಾಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ತವನಪ್ಪ ಅಷ್ಟಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪತ್ರಕರ್ತ ಶ್ರೀಶೈಲ ಗೌರಿಮಠ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪ್ರಶಾಂತಕುಮಾರ ಎನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಗಣಪತಿ ಗಂಗೊಳ್ಳಿ, ಜಿ.ಪಂ.ಮಾಜಿ ಉಪಾಧ್ಯಕ್ಷ ನಿಜನಗೌಡ ಪಾಟೀಲ, ಕಾಂಗ್ರೆಸ್ ಮುಖಂಡ ಮಂಜುನಾಥ ಸಂಕಣ್ಣವರ, ಗುತ್ತಿಗೆದಾರ ವರ್ಧಮಾನ ಅಷ್ಟಗಿ, ಉದ್ಯಮಿಗಳಾದ ಗಂಗಾಧರ ಹೂಲಿ, ಮಂಜುನಾಥ ಹಿರೇಮಠ ಆಗಮಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಗರಗ ಪೊಲೀಸ್ ಠಾಣೆಯ ಪಿಎಸ್ ಐ ಪ್ರವೀಣ ಗಂಗೋಳ, ಗ್ರಾ.ಪಂ.ಆಡಳಿತಾಧಿಕಾರಿ ಚಂದ್ರು ಪೂಜಾರ, ಹೆಸ್ಕಾಂ ಉಪವಿಭಾಗಾಧಿಕಾರಿ ಈರಣ್ಣ ಶಿಂದಗಿಮಠ, ಪಿಡಿಓ ಬಿ.ಎ.ಬಾವಾಕಾನವರ ಪಾಲ್ಗೊಳ್ಳಲಿದ್ದಾರೆ. ಇನ್ನು ವಿಶೇಷ ಆಮಂತ್ರಿತರಾಗಿ ಧಾರವಾಡದ ಪತ್ರಿಕಾ ವಿತರಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜ ಕುಲಕರ್ಣಿ, ಪತ್ರಕರ್ತರಾದ ಶಶಿಧರ ಬುದ್ನಿ, ಪ್ರವೀಣ ಓಂಕಾರಿ, ಶಿವಪ್ರಭು ಈಸರಗೊಂಡ, ಪ್ರಕಾಶ ಹೂಗಾರ, ರಮೇಶ ಓರಣಕರ, ಚನ್ನಬಸಪ್ಪ ಲಗಮಣ್ಣವರ ಭಾಗವಹಿಸಲಿದ್ದಾರೆ.
-------------------------------------------------------
ಉಚಿತ ಕಣ್ಣಿನ ತಪಾಸಣಾ ಶಿಬಿರ 
ಶ್ರೀಕುಮಾರ ವಿರೂಪಾಕ್ಷೇಶ್ವರ ಸ್ವಾಮೀಜಿ ಅವರ 25ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಪ್ರಯುಕ್ತ ಇಲ್ಲಿಯ ಶ್ರೀಮಠದ ಆವರಣದಲ್ಲಿ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 3:00 ಗಂಟೆವೆರೆಗೆ ಡಾ.ಎಂ.ಎಂ.ಜೋಶಿ ನೇತ್ರಾಲಯದಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಯಲಿದ್ದು, ವೈದ್ಯರ ತಂಡದಿಂದ ಕಣ್ಣಿನ ತಪಾಸಣೆ ಆಗಲಿದೆ. ಇನ್ನು ಪತ್ರಿಕಾ ವಿತರಕರ ದಿನಾಚರಣೆ ಪ್ರಯುಕ್ತ ವಿತಕರಿಗೆ ಬ್ಯಾಗ್ ವಿತರಣೆ ನಡೆಯಲಿದೆ.
-------------------------------------------------------------------news_1790256618_0_552.webp

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST