Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನೆನಪಿನ ದೋಣಿ

ನೇತ್ರಾಹರೀಶ್ ಕವನ

news_1792985769_0_758.webp

*ನೆನಪಿನ ದೋಣಿ* 
ನೆನಪಿನ ಮಂದಾರದಿ ಹೂವಿನ ಪರಿಮಳ
ಕಳೆದುಹೋದ ಆ ಬಾಲ್ಯವೇ ಅಮೂಲ್ಯವಾದ ಸವಿ ನೆನಪಿನ ತೋರಣ‌‌.

ನೆನಪಾದರೆ ಸಾಕು ಮನವು ತೇಲುವುದು ಹಗುರಾಗಿ
ಚಿಂತೆಗಳಿಲ್ಲದ ಆ ದಿನಗಳು ಹೋದವು ಎಲ್ಲಿಗೆ ದೂರಾಗಿ?

​ಕಾಕದ ಹಿಂಡಿನ ಹಿಂದೆ ಓಡಿದ ಆ ದಿನಗಳು
ಮಳೆಯಲಿ ಕಾಗದದ ದೋಣಿ ಬಿಟ್ಟ ಸಂಭ್ರಮಗಳು.

ಸಣ್ಣ ಪುಟ್ಟ ಮಾತಿಗೆ ಜಗಳವಾಡಿ ಮತ್ತೆ ಒಂದಾದ ಕ್ಷಣ
ಕಲ್ಮಷವಿಲ್ಲದ ನಗುವಿನ ಆ ಮುಗ್ಧ ಮನ.

​ಬಿಸಿಲಲಿ ಓಡಾಡಿ ಆಡಿದ ಕಣ್ಣಾಮುಚ್ಚಾಲೆ
ಗೆಳೆಯರ ಜೊತೆಗೂಡಿ ಸಾಗಿದ ಆ ದಿನದ ಸ್ಮರಣೆ.

ಕಾಲದ ಚಕ್ರದಲಿ ಬೆಳೆದು ನಿಂತರೂ ಇಂದು
ಬಾಲ್ಯದ ಆ ಸಿಹಿ ನೆನಪು ಅಳಿಯದು ಎಂದು.

ಮಣ್ಣಿನ ಮಡಕೆಯಲಿ ಅಡಿಗೆಯ ಆಟ
ದಿನವಿಡೀ ಗೆಳೆಯರೊಡನೆ ಹಂಚಿಕೊಂಡ ಮಾತುಕತೆಯ ಜೋರು ಆಟ.

ಜೇಬಿನಲಿ ಕಲ್ಲು, ಗೋಲಿ, ಬಣ್ಣದ ಕಾಗದದ ಚೂರು
ಅದರೊಳಗೇ ಇತ್ತಲ್ಲ ನಮ್ಮ ಆ ಪುಟ್ಟ ಮೌಲ್ಯದ ಖುಷಿ.

​ಅಮ್ಮನ ಕೈತುತ್ತಿನ ಆ ಸಿಹಿಯಾದ ಊಟ
ಅಪ್ಪನ ಬೆರಳ ಹಿಡಿದು ನಡೆಯುತ್ತಿದ್ದ ಆ ನಡಿಗೆಯ ನೋಟ.

ನೋವು ಅಂದರೆ ಮಂಡಿಯ ಮೇಲಿನ ಸಣ್ಣ ಗಾಯ ಮಾತ್ರ
ಕಣ್ಣೀರು ಒರೆಸಲು ಬರುತ್ತಿತ್ತು ಅಮ್ಮನ ಕೈಗಳು.

​ಕಾಲದ ಓಟದಲಿ ನಾವೆಲ್ಲರೂ ದೂರ ಸಾಗಿದ್ದೇವೆ
ಆದರೆ ಮನದ ಮೂಲೆಯಲಿ ಆ ಬಾಲ್ಯವನ್ನೇ ಇಂದಿಗೂ ಕಾಯುತ್ತಿದ್ದೇವೆ.

ಮತ್ತೆ ಸಿಕ್ಕರೆ ಒಂದು ದಿನ ಆ ಚಿನ್ನದ ಬಾಲ್ಯದ ಹಾದಿ
ಮಗುವಾಗಿ  ಮರೆಯುವೆನು  ಚಿಂತೆಗಳ ರಾಶಿಯ.  

ನೇತ್ರಾಹರೀಶ್

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST