
ಬೆಂಗಳೂರು : ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ (MSME) ಅಧೀನದಲ್ಲಿರುವ ರಾಷ್ಟ್ರೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಸ್ಥೆ (NI-MSME)ಯ ಆಡಳಿತ ಮಂಡಳಿ (Governing Council) ನಿರ್ದೇಶಕರಾಗಿ ಡಾ. ನಾಗರಾಜ್ ಕೆ. ಅವರು ನೇಮಕಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.
ದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ, ಉದ್ಯಮಶೀಲತೆ ಉತ್ತೇಜನ ಹಾಗೂ ಉದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ ನೀಡುವಲ್ಲಿ NI-MSME ಪ್ರಮುಖ ಪಾತ್ರ ವಹಿಸುತ್ತಿದೆ. ಇಂತಹ ಪ್ರತಿಷ್ಠಿತ ಸಂಸ್ಥೆಯ ಆಡಳಿತ ಮಂಡಳಿಗೆ ಡಾ. ನಾಗರಾಜ್ ಕೆ. ಅವರ ನೇಮಕವಾಗಿರುವುದು ಅವರ ಕಾರ್ಯಕ್ಷಮತೆ ಹಾಗೂ ಸೇವೆಗೆ ದೊರೆತ ಮಹತ್ವದ ಮನ್ನಣೆ ಎಂದು ಅಭಿನಂದನೆ ಸಲ್ಲಿಸಿರುವವರು ತಿಳಿಸಿದ್ದಾರೆ.
ಹೊಸ ಜವಾಬ್ದಾರಿಯ ಮೂಲಕ ದೇಶದ MSME ಕ್ಷೇತ್ರದ ಬೆಳವಣಿಗೆಗೆ ಮತ್ತಷ್ಟು ಕೊಡುಗೆ ನೀಡಲಿ. ಅವರ ನಾಯಕತ್ವದಲ್ಲಿ ಸಂಸ್ಥೆ ಇನ್ನಷ್ಟು ಪ್ರಗತಿ ಸಾಧಿಸಲಿ ಹಾಗೂ ಅಧಿಕಾರಾವಧಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.